Advertisement
ಭಾರತೀಯ ರೈಲ್ವೇಯ ವೇಳಾ ಪಟ್ಟಿ ಸಮಿತಿ (ಐಆರ್‌ಟಿಸಿ)ಯ ಸಭೆ ಫೆ. 26, 27 ಮತ್ತು 28ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಇಲ್ಲಿ ವಾಸ್ಕೋ ರೈಲು ಓಡಾಟ ಆರಂಭ ದಿನಾಂಕ ನಿರ್ಧಾರ ಆಗಲಿದೆ.
ಎಲ್ಲ ರೈಲ್ವೇ ವಿಭಾಗ ಮುಖ್ಯಸ್ಥರು, ಪ್ರತಿನಿಧಿಗಳು ಸಭೆಗೆ ಆಗಮಿಸುತ್ತಾರೆ. ವಿವಿಧ ವಲಯಗಳ ಮಾರ್ಗಗಳಲ್ಲಿ ಹೊಸ ರೈಲುಗಳ ಕುರಿತು ಮಾಹಿತಿ ವಿನಿಮಯ ನಡೆಸಿ, ಹಾಲಿ ರೈಲು, ಗೂಡ್ಸ್ ರೈಲುಗಳ ಸಮಯ ಹೊಂದಾಣಿಕೆ ಮಾಡಿ, ಹಳಿ ಬಿಟ್ಟು ಕೊಡುವ ಬಗ್ಗೆ ಸಮಾಲೋಚನೆ ನಡೆಯುತ್ತದೆ. ಬೆಂಗಳೂರು – ವಾಸ್ಕೊ ರೈಲಿನ ಬಗೆಗೂ ಚರ್ಚೆ ನಡೆಯಲಿದೆ. ಇಲ್ಲಿ ಒಪ್ಪಿಗೆ ದೊರೆತರೆ ಸಮಸ್ಯೆ ಸುಲಭ ವಾಗಿ ಬಗೆಹರಿದಂತೆ. ಇಲ್ಲದಿದ್ದರೆ ಮಾ. 2ರಂದು ಸಚಿವರ ಉಪಸ್ಥಿತಿಯಲ್ಲಿ ದಿಲ್ಲಿಯಲ್ಲಿ ನಡೆಯುವ ಸಭೆಯಲ್ಲಿ ಹಗ್ಗಜಗ್ಗಾಟ ನಡೆಯುತ್ತದೆ. ಹೀಗಾಗಿ ಈ ದಿನ ಮಹತ್ವದ್ದಾಗಿದೆ.
Related Articles
Advertisement
ರೈಲ್ವೇ ಹಿರಿಯ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಸಚಿವ ಸುರೇಶ್ ಅಂಗಡಿಯವರೂ ಭರವಸೆ ನೀಡಿದ್ದಾರೆ. ಹೊಸ ರೈಲು ಮಂಜೂರಾತಿ ಸಂದರ್ಭದ ಸಭೆಗಳಲ್ಲಿ ನಾನು ಭಾಗವಹಿಸಿದ್ದೆ.– ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ ವೇಳಾಪಟ್ಟಿ ನಿಗದಿಯಾದ ಕಾರಣ ಶೀಘ್ರ ಚಾಲನೆ ನೀಡಲಿ. ಎಲ್ಲರಿಗೂ ಪ್ರಯೋಜನ ದೊರೆಯಲಿ.
– ಗಣೇಶ್ ಪುತ್ರನ್, ಅಧ್ಯಕ್ಷರು, ರೈಲು ಪ್ರ. ಹಿತರಕ್ಷಣ ಸಮಿತಿ, ಕುಂದಾಪುರ ಆರಂಭಕ್ಕೆ ಇರುವ ಅಡ್ಡಿ
ಬೆಂಗಳೂರಿನಿಂದ ವಾಸ್ಕೋಗೆ ಚಲಿಸುವ ರೈಲು ದಕ್ಷಿಣ, ನೈಋತ್ಯ ಮತ್ತು ಕೊಂಕಣ ರೈಲು ಮಾರ್ಗಗಳನ್ನು ಬಳಸಬೇಕು. ಕೊಂಕಣ ರೈಲಿನ ಮಾರ್ಗದಲ್ಲಿ ಹೆಚ್ಚಾಗಿ ಗೂಡ್ಸ್ ರೈಲುಗಳು ಚಲಿಸುವುದರಿಂದ ಹಸಿರು ನಿಶಾನೆ ತೋರಿ ಸಿಲ್ಲ. ಕೊಂಕಣ ಮಾರ್ಗದ ಮೂಲಕ 40ರಷ್ಟು ರೈಲುಗಳಲ್ಲಿ ಸುಮಾರು 33 ಕೇರಳ, ಉತ್ತರ ಭಾರತಕ್ಕೆ ತೆರಳುತ್ತವೆ. ಜನರ, ಸಂಘಟನೆಗಳ, ಜನಪ್ರತಿನಿಧಿಗಳ ಆಸಕ್ತಿಯಿಂದ ಪ್ರಯಾಣಿಕ ರೈಲು ದೊರೆ ತಿದೆಯೇ ವಿನಾ ನಿಗಮವು ಸ್ವ ಹಿತಾಸಕ್ತಿ ಯಿಂದ ಒಂದು ಪ್ರಯಾಣಿಕರ ರೈಲನ್ನೂ ಆರಂಭಿಸಿಲ್ಲ ಎಂಬ ಆರೋಪವಿದೆ.