Advertisement

ಬೆಂ.ಗ್ರಾಮಾಂತರ: ಐವರಿಗೆ ಸೋಂಕು

07:17 AM Jun 20, 2020 | Lakshmi GovindaRaj |

ಹೊಸಕೋಟೆ/ವಿಜಯಪುರ: ಜಿಲ್ಲೆಯಲ್ಲಿ ಶುಕ್ರವಾರ 5 ಕೋವಿಡ್‌ 19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 26ಕ್ಕೇರಿದೆ. ಹೊಸಕೋಟೆ ತಾಲೂಕಿನ ಜಡಿಗೇ ನಹಳ್ಳಿ, ಆಲಪ್ಪನಹಳ್ಳಿ, ನಗರದ ಷಣ್ಮುಗಂ ಬಡಾವಣೆ ಹಾಗೂ 17ನೇ ವಾರ್ಡ್‌ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಒಟ್ಟು 4 ಕೋವಿಡ್‌ 19 ಸೋಂಕು ಪ್ರಕರಣ ದೃಢಪಟ್ಟಿವೆ.

Advertisement

ಸರಕಾರಿ ಆಸ್ಪತ್ರೆ 37 ವರ್ಷದ ಲ್ಯಾಬ್‌ ಟೆಕ್ನಿಷಿಯನ್‌ಗೆ ಜೂ.17ರಂದು ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ತಪಾಸಣೆಗೆ  ಒಳಪಡಿಸಿದ್ದ 35 ವರ್ಷದ ಪತ್ನಿಯಲ್ಲೂ ಸೋಂಕು ಪತ್ತೆಯಾಗಿದೆ. ಜಡಿಗೇನಹಳ್ಳಿಯ 31 ವರ್ಷದ ವ್ಯಕ್ತಿಯು ಜ್ವರದಿಂದಾಗಿ ಬೆಂಗಳೂ ರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದು, ತಪಾಸಣೆ ಕೈ ಗೊಂಡ ನಂತರ ಸೋಂಕು  ಪತ್ತೆಯಾಗಿದೆ.

ಆಲಪ್ಪನಹಳ್ಳಿಯ 59 ವರ್ಷದ ವ್ಯಕ್ತಿ ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕು ದೃಢಪಟ್ಟಿದೆ. ನಗರದ 17ನೇ ವಾರ್ಡ್‌ನಲ್ಲಿ 80 ವರ್ಷದ ಮಹಿಳೆ ಕೆಲವು ದಿನಗಳಿಂದ ಜ್ವರ, ಕೆಮ್ಮು,  ವಾಂತಿಯಿಂದ ಬಳಲುತ್ತಿದ್ದು, ಎಂವಿಜೆ ಆಸ್ಪತ್ರೆಗೆ ತೆರಳಿದಾಗ ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಜೂ.18 ರಂದು ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿ ದಾಗ ಸೋಂಕಿರುವುದು ದೃಢವಾಗಿದೆ.

ಸೋಂಕಿತರು ವಾಸಿಸುವ  ಪ್ರದೇಶದ ಸುತ್ತಲಿನ 200 ಮೀ.ಗಳಷ್ಟು ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯವೆಂದು ಪರಿಗಣಿಸಿ ಸಂಬಂಧಿಸಿದ ಗ್ರಾಪಂ, ನಗರಸಭೆ ಯಿಂದ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ, ಪ್ರವೇಶ ನಿರ್ಬಂದಿಸಲಾಗಿದೆ. ಸೋಂಕಿತ ವ್ಯಕ್ತಿಗಳ  ಪ್ರಥಮ ಹಾಗೂ ದ್ವಿತೀಯ ಸಂಪರ್ಕಿ ತರ ತಪಾಸಣೆ ನಡೆಸಲಾಗುವುದು. ಬಫ‌ರ್‌ ವಲಯವೆಂದು ವರ್ಗೀಕರಿಸಿ, ವಾರದಲ್ಲಿ 2 ಬಾರಿ ಸಮೀಕ್ಷೆ ಕೈಗೊಂಡು ಮಾಹಿತಿ ಸಂಗ್ರಹಿಸ ಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ  ಮಂಜುನಾಥ್‌ ತಿಳಿಸಿದ್ದಾರೆ. ಕೋವಿಡ್‌ 19 ಸೋಂಕು ದೃಢಪಟ್ಟಿರುವ ತಾಲೂಕಿನ ಆಲಪ್ಪನಹಳ್ಳಿಗೆ ಶಾಸಕ ಶರತ್‌ ಬಚ್ಚೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು

ವಿಜಯಪುರಕ್ಕೂ ಕಾಲಿಟ್ಟ ಕೋವಿಡ್‌ 19 ಸೋಂಕು
ವಿಜಯಪುರ: ಪಟ್ಟಣದಲ್ಲಿ ಮೊದಲ ಕೋವಿಡ್‌ 19 ಸೋಂಕು ಶುಕ್ರವಾರ ದೃಢಪಟ್ಟಿದೆ. ನಗರದ ಪೊಲೀಸ್‌ ಠಾಣೆ ಬಳಿ ದ್ವಿಚಕ್ರ ವಾಹನ ದುರಸ್ತಿ ಅಂಗಡಿ ಇಟ್ಟುಕೊಂಡಿದ್ದ 35 ವರ್ಷದ ವ್ಯಕ್ತಿಗೆ ಕೋವಿಡ್‌ 19 ಸೋಂಕು ತಗುಲಿದ್ದು, ಆತನಿಗೆ  ಕೋಲಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವಿಜಯಪುರದ ಟಿಪ್ಪುನಗರ ಹಾಗೂ ವಿನಾಯಕನಗರ ಹೊಂದಿಕೊಂಡಿರುವ ವಿನಾಯಕ ನಗರ ನಿವಾಸಿಯಾಗಿದ್ದು, ಜೂನ್‌ 12ನೇ ತಾರೀಖೀನಂದೇ ಆತನ ಪತ್ನಿಯೊಂದಿಗೆ  ವಿಜಯಪುರದಿಂದ ಕೋಲಾರಕ್ಕೆ ತೆರಳಿದ್ದ. ಅಲ್ಲಿ ಕೋವಿಡ್‌ 19 ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಅಲ್ಲಿಯೇ ತಪಾಸಣೆಗೆ ಒಳಗಾಗಿದ್ದ.

Advertisement

ಆತನ ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಿದ ನಂತರ ಬಂದ ವರದಿಯಂತೆ ಆತನಿಗೆ  ಕೋವಿಡ್‌ 19 ಇರುವುದು ದೃಢವಾಗಿದೆ. ಸೋಂಕಿತನ ಪತ್ನಿ, ತಾಯಿ, ಮಗುವನ್ನು ಕೋಲಾರದ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಸೋಂಕಿತ ವಾಸವಿದ್ದ ಟಿಪ್ಪುನಗರ ಏರಿಯಾ ಸೀಲ್‌ಡೌನ್‌ ಮಾಡಲಾಗಿದೆ. ಸಿಪಿಐ  ಮಲ್ಲಿಕಾರ್ಜುನ್‌, ಎಸ್‌ಐ ಮಂಜುನಾಥ್‌, ಪುರಸಭೆ ಮುಖ್ಯಾಧಿಕಾರಿ ಪ್ರದೀಪ್‌ ಕುಮಾರ್‌, ಸಮುದಾಯ ಆರೋಗ್ಯಧಿಕಾರಿ ಶ್ಯಾಮ್‌ ಸುಂದರ್‌, ಪುರಸಭೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next