ಮಂಗಳೂರು: ಕಣ್ಣೂರು-ಮಂಗಳೂರು – ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಹಾಗೂ ಕಾರವಾರ-ಮಂಗಳೂರು – ಬೆಂಗಳೂರು ರೈಲುಗಳ ಪ್ರಯಾಣದ ಅವಧಿಜೂನ್ 1ರಿಂದ ಅನ್ವಯವಾಗುವಂತೆ ಕಡಿಮೆಯಾಗಲಿದೆ.
ಪ್ರಯಾಣದ ಅವಧಿ ಅನುಕ್ರಮವಾಗಿ 20 ನಿಮಿಷ ಹಾಗೂ45 ನಿಮಿಷದಷ್ಟು ಕಡಿಮೆಯಾಗಲಿದೆ. ಹಾಸನ- ಶ್ರವಣಬೆಳಗೊಳ ಮಧ್ಯೆ ಹಳಿ ನವೀಕರಣ ನಡೆದಿರುವುದರಿಂದ ರೈಲುಗಳ ವೇಗ ವರ್ಧನೆಯಾಗಿರುವುದು ಇದಕ್ಕೆ ಕಾರಣ.
ಎರಡೂ ರೈಲುಗಳ ಕಾರವಾರ ಹಾಗೂ ಮಂಗಳೂರಿನ ಆಗಮನ ವೇಳೆಯಲ್ಲಿ ವ್ಯತ್ಯಾಸ ಇರುವುದಿಲ್ಲ. ಕೇವಲ ಬೆಂಗಳೂರು ತಲುಪುವ ರೈಲಿನ ಸಮಯದಲ್ಲಿ ಮಾತ್ರವೇ ಪ್ರಯೋಜನವಾಗಲಿದೆ.
ನಂ. 16512 ಕಣ್ಣೂರು-ಬೆಂಗಳೂರು-ಮಂಗಳೂರು ಸೆಂಟ್ರಲ್ ಮೂಲಕ ಸಂಚರಿಸಿ ಇನ್ನು ಮುಂದೆ 6.50ರ ಬದಲು 6.30ಕ್ಕೆ ಬೆಂಗಳೂರು ತಲುಪಲಿದೆ. ಹಾಸನದಿಂದ 2.55, ಚನ್ನರಾಯಪಟ್ಟಣದಿಂದ 3.21, ಬೆಳಗೊಳದಿಂದ 3.31, ಬಾಲಗಂಗಾಧರನಗರದಿಂದ 3.58ಕ್ಕೆ, ಕುಣಿಗಲ್‌ನಿಂದ 4.29, ಯಶವಂತಪುರದಿಂದ 6.04ಕ್ಕೆ ಹೊರಡಲಿದೆ.
ನಂ. 16596 ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ಬೆಂಗಳೂರು ಸಿಟಿ ಸ್ಟೇಷನ್‌ಗೆ ಬೆಳಗ್ಗೆ 8ರ ಬದಲು 7.15ಕ್ಕೆ ತಲಪಲಿದೆ. ಹಾಸನದಿಂದ 3.53, ಚನ್ನರಾಯಪಟ್ಟಣದಿಂದ 4.19, ಕುಣಿಗಲ್‌ನಿಂದ 5.16 ಮತ್ತು ಯಶವಂತಪುರದಿಂದ 6.45ಕ್ಕೆ ನಿರ್ಗಮಿಸಲಿದೆ.
ನಂ. 16595 ಬೆಂಗಳೂರು-ಕಾರವಾರ “ಪಂಚಗಂಗಾ ಎಕ್ಸ್‌ಪ್ರೆಸ್’ ಬೆಂಗಳೂರು ಸಿಟಿಯಿಂದ ಸಂಜೆ 6.45ರ ಬದಲು 6.50ಕ್ಕೆ ಹೊರಟು ಯಶವಂತಪುರದಿಂದ 7.02, ಕುಣಿಗಲ್‌ನಿಂದ 7.46, ಚನ್ನರಾಯಪಟ್ಟಣದಿಂದ 8.51, ಹಾಸನದಿಂದ 9.38ಕ್ಕೆ ನಿರ್ಗಮಿಸಲಿದೆ.
ನಂ. 16511 ಬೆಂಗಳೂರಿನಿಂದ ರಾತ್ರಿ 9.30ರ ಬದಲು 9.35ಕ್ಕೆ ಹೊರಟು, ಯಶವಂತಪುರ 9.47, ಕುಣಿಗಲ್ 10.45, ಬಾಲಗಂಗಾಧರ ನಗರ 11.11, ಶ್ರವಣಬೆಳಗೊಳ 11.36, ಹಾಸನದಿಂದ 12.40ಕ್ಕೆ ನಿರ್ಗಮಿಸಲಿದೆ.