Advertisement
ಅಂತಾರಾಷ್ಟ್ರೀಯ ಶೃಂಗಸಭೆ ಇದಾಗಿದ್ದು, 68 ದೇಶಗಳ 4,157 ತಂಡಗಳು ಈ ಸಭೆಯಲ್ಲಿ ಭಾಗವಹಿಸಲಿವೆ. ಫಿನ್ ಲ್ಯಾಂಡ್, ಫ್ರಾನ್ಸ್, ಜರ್ಮನಿ, ನೆದರ್‌ಲ್ಯಾಂಡ್ಸ್, ಎಸ್ಟೋನಿಯ, ಜಪಾನ್, ಆಸ್ಟ್ರೇಲಿಯ ಮತ್ತು ಚೆಕ್ ರಿಪಬ್ಲಿಕ್ ಮುಂತಾದ ರಾಷ್ಟ್ರಗಳು ಸಮಾವೇಶದಲ್ಲಿ ಭಾಗವಹಿಸಲಿದ್ದು ಸ್ಟಾರ್ಟ್‌ಅಪ್ ಝೋನ್‌ನಲ್ಲಿ 200ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗ್ಳು ಮತ್ತು 3 ಸಾವಿರ ನಿಯೋಜಿತಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮಾಹಿತಿ ನೀಡಿದರು.
ನೀತಿ ನಿರೂಪಕರು , ಸಂಶೋಧನಾ ಮುಖ್ಯಸ್ಥರುಗಳು ಹಾಗೂ ವಿಶ್ವದೆಲ್ಲೆಡೆಯಿಂದ ಉದ್ಯಮಗಳ ಇತರ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದಲ್ಲಿ ವಾಣಿಜ್ಯೋದ್ಯಮದ ವೇಗ ವೃದ್ಧಿಸಲು ತಂತ್ರಜಾnನವನ್ನು ಬಳಸಿಕೊಳ್ಳುವ ಹಾಗೂ ವರ್ತಕ-ವರ್ತಕರುಗಳ ನಡುವೆ ಭೇಟಿ ನೀಡಲು ಅನುವು ಮಾಡಿಕೊಡುವ ಗುರಿಯನ್ನು ಈ ಸಮಾವೇಶ ಹೊಂದಿದೆ. ಪ್ರಸಕ್ತ ವರ್ಷದ ಬೆಂಗಳೂರು ಟೆಕ್ ಸಮ್ಮಿಟ್ ಹಿಂದಿನ ಸಮ್ಮೇಳನಗಳಿಗೆ ಹೋಲಿಸಿದರೆ ಬೃಹತ್ ಗಾತ್ರದ್ದಾಗಿರುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಡ್ರೋಣ್ ರೇಸ್ ಆಕರ್ಷಣೆ: ಈ ಬಾರಿಯ ಟೆಕ್ ಸಮಿಟ್‌ನಲ್ಲಿ ಡ್ರೋಣ್ ರೇಸ್ ಪ್ರಮುಖ ಆಕರ್ಷಣೆಯಾಗಿದ್ದು, ಕಾರು ರೇಸ್, ಬೈಕ್ ರೇಸ್ ನಂತೆಯೇ ಈಗ ಬೆಂಗಳೂರಿನಲ್ಲಿ ಡ್ರೋಣ್‌ಗಳ ರೇಸ್ ನಡೆಯಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಡ್ರೋಣ್ ರೇಸ್ ನಡೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಡ್ರೋಣ್ ತಯಾರಿಕಾ ಕಂಪೆನಿಗಳು ಇದರಲ್ಲಿ ಭಾಗವಹಿಸಲಿವೆ.
Related Articles
Advertisement
ರೇಸ್‌ನಲ್ಲಿ ಭಾಗವಹಿಸುವ ನ್ಯಾನೋ ಡ್ರೋಣ್‌ಗಳು 250 ಗ್ರಾಂಕ್ಕಿಂತ ಕಡಿಮೆ ತೂಕ ಇರಲಿವೆ. ಗಂಟೆಗೆ 120 ಕಿ.ಮೀ. ವೇಗದಲ್ಲಿ ಹಾರಾಟ ನಡೆಸಬಲ್ಲವು. ಪ್ರತಿ ಡ್ರೋಣ್‌ಗೆ 2ರಿಂದ 3 ನಿಮಿಷ ಕಾಲಾವಕಾಶ ನೀಡಲಾಗಿರುತ್ತದೆ. ಅಷ್ಟರಲ್ಲಿ ಅವುಗಳು ತಮ್ಮ ಮರ್ಥ್ಯಪ್ರದರ್ಶಿಸಲಿವೆ. ಸಾಮಾನ್ಯವಾಗಿ ಒಳಾಂಗಣದಲ್ಲಿ ಡ್ರೋಣ್ ರೇಸ್ ನಡೆಯತ್ತದೆ. ಹೊರಾಂಗಣದಲ್ಲಿ ಈ ರೀತಿ ನಡೆಯುತ್ತಿರುವುದು ಇದೇ ಮೊದಲು. ಹಾಗಾಗಿ, ತುಂಬಾ ಅದ್ಭುತ ಅನುಭವ ನೀಡಲಿದೆ. ಸ್ವಿಡ್ಜರ್‌ಲ್ಯಾಂಡ್‌ನ ನಾಲ್ಕು ಕಂಪನಿಗಳು, ಇಸ್ರೇಲ್ ಮತ್ತು ಭಾರತದ ತಲಾ ಒಂದು ಕಂಪೆನಿಗಳು ಇದರಲ್ಲಿ ಭಾಗವಹಿಸಲಿವೆ. ಡ್ರೋಣ್ ತಯಾರಿಕೆಯಲ್ಲಿ ಜರ್ಮನಿ, ಫ್ರಾನ್ಸ್, ಅಮೆರಿಕ, ಚೀನಾ ಮತ್ತಿತರ ದೇಶಗಳು ಕೂಡ ಮುಂಚೂಣಿಯಲ್ಲಿವೆ. ವಿಜೇತರಿಗೆ ಬಹುಮಾನ ಕೂಡ ಇರಲಿದೆ. ಡ್ರೋಣ್‌ಗಳಲ್ಲಿ ಹತ್ತಾರು ಪ್ರಕಾರಗಳಿದ್ದು, ಅವುಗಳ ತೂಕ 250 ಗ್ರಾಂ.ಗಿಂತ ಕಡಿಮೆ ಹಾಗೂ 150 ಕೆಜಿಗಿಂತ ಅಧಿಕವೂ ಆಗಿರುತ್ತವೆ. ವಿವಿಧ ಉದ್ದೇಶಗಳಿಗೆ ಇವುಗಳನ್ನು ಬಳಸಲಾಗುತ್ತ¨