Advertisement

ಬೆಂಗ್ಳೂರುಸ್ವಾಮಿ

12:31 PM Jan 28, 2018 | Team Udayavani |

ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಕಾಲೂರಿದ್ದಾರೆ ! ಚಿಂತಾಮಣಿ ಕರೆಯದಿದ್ದರೆ ಬೆಂಗಳೂರಿಗೆ ನಾನು ಕಾಲಿಡುತ್ತಿರಲಿಲ್ಲ. ಈ ಚಿಂತಾಮಣಿ ಯಾರೆನ್ನುತ್ತೀರಾ? ಅವನು ನನ್ನ ಶಿಷ್ಯ.

Advertisement

ಯಾವುದೋ ಗತಕಾಲದಿಂದ ಬಂದ ವಿದ್ಯಾರ್ಥಿಯಂತಿದ್ದ ಈ ಚಿಂತಾಮಣಿ. ಈಗಿನವರಲ್ಲಿ ಕಾಣದ ವಿಧೇಯತೆ, ವ್ಯಾಸಂಗದಲ್ಲಿ ಆಸಕ್ತಿ, ನೋಟ್ಸ್‌ ಮಾಡಿಕ್ಕೊಳ್ಳುವುದು, ಗೂಗಲ್‌ನಲ್ಲಿ ಹುಡುಕದೆ

ವಿಶ್ವವಿದ್ಯಾಲಯದವರು ಸೂಚಿಸಿದ ಪಠ್ಯಪುಸ್ತಕಗಳನ್ನೇ ಓದುವುದು, ತರಗತಿಯಲ್ಲಿ ಅರ್ಥವಾಗದ ವಿಷಯವನ್ನು ಅಧ್ಯಾಪಕರ ಬಳಿ ಹೇಳಿಸಿಕೊಳ್ಳುವುದು-ಮುಂತಾದ ಗುಣಗಳು ಮೈವೆತ್ತಂತಿದ್ದ, ಅಧ್ಯಾಪಕರ ಅಚ್ಚುಮೆಚ್ಚಿನ ವಿದ್ಯಾರ್ಥಿ. ಅವನಿಗೆ ಸಿಕ್ಕಿದ್ದ ಟೈಟಲ್ಲುಗಳು ಪುಸ್ತಕದ ಹುಳ, ಬಕೇಟು ಹಿಡಿಯುವವನು ಇತ್ಯಾದಿ! ನಿರೀಕ್ಷಿಸಿದ್ದಂತೆ ಎಂಬಿಎಯಲ್ಲಿ ಯೂನಿವರ್ಸಿಟಿಗೆ ಮೊದಲಿಗನಾಗಿ, ಕಾಲೇಜಿಗೆ ಕೀರ್ತಿ ತಂದು, ಒಳ್ಳೆಯ ಕಂಪೆನಿಯಲ್ಲಿ ಉದ್ಯೋಗ ಪಡೆದಿದ್ದ. ಎರಡು ವರ್ಷಗಳ ನಂತರ ಮದುವೆ ಆಹ್ವಾನಪತ್ರಿಕೆಯನ್ನು ಖುದ್ದಗಿ ಬಂದು ಕೊಟ್ಟಿದ್ದ. ಮದುವೆಗೆ ಬರಲೇಬೇಕೆಂದು ಆಗ್ರಹಿಸಿದ್ದ.

ಉಳಿದೆಲ್ಲ ಅಧ್ಯಾಪಕರೂ ಹಿಂದಿನ ದಿನವೇ ಆರತಕ್ಷತೆಗೆ ಹೋಗಿದ್ದರು. ರಾತ್ರಿ ಆರತಕ್ಷತೆಗೆ ಹೋದರೆ ಬೆಂಗಳೂರಲ್ಲಿ ಉಳಿಯ ಬೇಕಾಗುತ್ತದೆ, ಅದನ್ನು ತಪ್ಪಿಸಿಕ್ಕೊಳ್ಳಲು ಮರುದಿನ ಧಾರೆಗೆ ಹೋಗಿ ಸಂಜೆ ಮೈಸೂರು ಸೇರುವುದೆಂದು ನಿರ್ಧರಿಸಿ, ಬೆಳಗಿನ ಎಂಟು ಗಂಟೆಗೇ ಬೆಂಗಳೂರಿನ ನಾಯಂಡಹಳ್ಳಿ ಬಸ್‌ ನಿಲ್ದಾಣದಲ್ಲಿಳಿದಿದ್ದಾರೆ .

ಮೂರು ವರ್ಷದ ನಂತರದ ಬೆಂಗಳೂರು ಕಂಡು ಬೆಚ್ಚಿ ಬೆವರಿದೆ! ಬಸ್‌ಸ್ಟ್ಯಾಂಡಿನಾಚೆ ವಾಹನ ಸಾಗರ. ಜನಸಾಗರ. ರಸ್ತೆಯಲ್ಲಿ ಇಂಚೂ ಜಾಗವನ್ನೂ ಬಿಡದ ವಾಹನಗಳು ಮುಗಿಲುಮುಟ್ಟುವ ಹೊಗೆ ಕಾರುತ್ತ ನಿಂತಲ್ಲೇ ಗುರುಗುಟ್ಟುತ್ತಿದ್ದವು. ಟ್ರಾಕ್‌ ಜಾಮ್‌ ಎನ್ನುವುದು ಇದೇ ಇರಬೇಕೆಂದು ಅಂದಾಜು ಮಾಡುತ್ತ ಈಚೆ ಫ‌ುಟ್‌ಪಾತಿನಲ್ಲಿ ನಾಲ್ಕು ಹೆಜ್ಜೆ ಕಾಲಾಡಿಸಿದೆ. ಆದೆಲ್ಲಿತ್ತೋ ಯಮಗಾತ್ರದ ಮೋಟಾರು ಬೈಕು ಗುರಾಯಿಸಿಕೊಂಡು ನನ್ನ ಮೇಲೆ ಏರಿಬಂತು.

Advertisement

ಜೀವ ಬಾಯಿಗೆ ಬಂತು! ಫ‌ುಟ್‌ಪಾತಿನಲ್ಲಿ ಬೈಕು ಹೇಗೆ ಬಂತೆಂದು ಅರ್ಥವಾಗದೆ ತಬ್ಬಿಬ್ಟಾದೆ. ಅಷ್ಟರಲ್ಲಿ ಯಾರೋ ಅನಾಮತ್ತಾಗಿ ಪಕ್ಕಕ್ಕೆ ಎಳೆದುಕೊಂಡರು. ಮರುಕ್ಷಣ ಹಡಗಿನಂಥ ಕಾರನ್ನು ಏರಿದ್ದ. ದೈತ್ಯಾಕಾರದ ವ್ಯಕ್ತಿಯೊಬ್ಬ ಕಾರಿನೊಳಗೆ ಎಳೆದುಕೊಂಡಿದ್ದ. ಆಚೆ ಹೋಗುತ್ತಿದ್ದ ಜೀವ ವಾಪಸಾದ ಅನುಭವ. ಜೀವ ಉಳಿಸಿದ ಪುಣ್ಯಾತ್ಮ ಯಾರೆಂದು ನೋಡಿದೆ. ಪೂರಿಯಂತೆ ಊದಿದ ಶರೀರದ ವ್ಯಕ್ತಿಯೊಬ್ಬ ಕಾರಿನ ಸ್ಟಿಯರಿಂಗ್‌ ಮುಂದಿದ್ದ. ಅವನ ಎಡಗೈಯಲ್ಲಿ ನನ್ನ ತೋಳಿತ್ತು. ಆ ಮುಖ ಎಲ್ಲೋ ನೋಡಿರುವೆ ಎನಿಸಿತು.

“”ಒಂದ್ನಿಮಿಷದಲ್ಲಿ ಕೈಲಾಸ ಕಾಣಿದ್ರಲ್ಲಾ  ಶಿವಾ” ಎಂದು ಕನಿಕರಿಸಿದ. “”ಥ್ಯಾಂಕ್ಸ್‌. ಜೀವ ಉಳಿಸಿದೆ” ಗದ್ಗದಿಸಿದೆ.
“”ಅಯ್ಯೋ ಸಿವೆ° ! ನೀವಾ ಸಾರ್‌?” ಉದ್ಗರಿಸಿದ. “”ಅಂದ್ರೆ?” ಆ ಉದ್ಗಾರಕ್ಕೆ ಬೆಚ್ಚಿದೆ. ಯಾರಿರಬಹುದು-ನೆನಪು ಜರಡಿ ಹಿಡಿಯಿತು.
“”ನಾ ಸಾರ್‌… ನಿಮ್ಮ ಶಿಷ್ಯ. ಕಲ್ಲೇಶಿ… ಎಂಬಿಎ ಟೂತೌಸಂಡ್‌ ಬ್ಯಾಚು” ತತ್‌ಕ್ಷಣ ನೆನಪು ಗಗನಚುಕ್ಕಿ-ಭರಚುಕ್ಕಿಯಂತೆ ಧುಮ್ಮಿಕ್ಕಿತು. ಲಕ್ಷಾಂತರ ಫಿಜು ಪೀಕಿ ಕ್ಲಾಸಿಗೆ ಬಾರದೆ, ಲೈಬ್ರರಿ ನೋಡದೆ, ಕಂಪ್ಯೂಟರ್‌ ಸೆಂಟರಿಗೆ ಕಾಲಿಡದೆ ಯಾವಾಗ್ಲೂ ಸ್ಕೂಟರ್‌ಸ್ಟ್ಯಾಂಡಿನಲ್ಲಿ ಸಲ್ಲಾಪ ನಡೆಸ್ತಿದ್ದ , ಕಲ್ಲೇಶಿ! “”ಇದೇನು ಹಿಂಗೆ ಊದಿದೀಯ… ನಾನು ಯಾರೋ ಸೇಠೂ ಇರಬಹುದು ಅಂದೊಕೋಂಡೆ” “”ಎಲ್ಲಾ ನಿಮ್ಮ ದಯೆ ಸಾರ್‌”
“”ನೀನು ಹಿಂಗೆ ಊದಿಕೊಳ್ಳೋಕೆ ನನ್ನ ದಯ ಏನೋ ಅರ್ಥವಾಗಲಿಲ್ಲ!” “”ಅದು ಬಿಟ್ಟಾಕಿ, ಬೆಂಗ್ಳೂರಂದ್ರೆ ಅಲರ್ಜಿ ಅಂತಿರೋರು ಅದೇನು ಇದ್ದಕ್ಕಿದ್ದ ಹಾಗೆ ಬಂದಿದ್ದೀರಿ?” “”ಚಿಂತಾಮಣಿ ಮದುವೆಗೆ” “”ಬಕೇಟು ಚಿಂತಾಮಣಿ ಅಲ್ವಾ ಸಾರ್‌! ಅಯ್ಯೋ ಶಿವೆ°.ಮರ್ತೇಹೋಗಿತ್ತಲ್ಲ, ನಾನೂ ಹೋಗ್ಬೇಕಾಗಿತ್ತು. ಆದ್ರೆ ನಿಧಾನ ಸೌಧದಲ್ಲಿ ಕೆಲಸ ಇದೆ” “”ಇದ್ಯಾವುದಯ್ನಾ ನಿಧಾನ ಸೌಧ? ನಾನು ಕೇಳಿರೋದು ವಿಧಾನ ಸೌಧ”
“”ಅದೇ ನಿಧಾನ ಸೌಧ. ಅಲ್ಲಿ ಕೆಲಸ ನಿಧಾನ. ಅದ್ಸರಿ… ಹಿಂಗೆ ನೀವು ನಡ್ಕೊಂಡು ಹೋದ್ರೆ ಮದುವೆ ಮುಗಿದು ನಿಷೇಕಕ್ಕೆ ಹೋಗ್ತಿàರ!”
ಕಲ್ಲೇಶಿ ತಮಾಷೆ ಮಾಡಿದ. “”ಅದೇನೋ, ನಾಗರಹಾವಂತೆ ಅಲ್ಲಿಗೆ ಹೆಂಗೆ ಹೋಗಲೋ ಮಾರಾಯ?” ಛಿ

“”ನಾಗರಹಾವಲ್ಲ ಸಾರ್‌! ನಾಗಾವಾರ! ಅಲ್ಗೆ ನಾನೇ ಬಿಡ್ತಿ¨ªೆ. ಆದ್ರೆ ಸಿಎಂ ಜೊತೆ ಇಂಪಾರ್ಟೆಂಟು ಮೀಟಿಂಗು! ಒಂದ್ಕೆಲ್ಸ ಮಾಡಿ. ಆಟೋ
ಹಿಡ್ಕಂಡಿºಡಿ. ಎಂತಾ ಟ್ರ್ಯಾಕ್ಕಿದ್ರೂ ಅವರು ಧಾರೆ ಟೈಮಿಗೆ ಕರ್ಕೊಂಡು ಹೋಗೇಹೋಗ್ತಾರೆ. ಮದ್ವೇಂತೀರಿ ಗಿಫ್ಟ್ ಏನೂ ಕೈಲಿಲ್ಲ?”
“”ಇಲ್ಲಿದೆ ನೋಡು. ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆ ಪುಸ್ತಕಗಳು” ಕಲ್ಲೇಶಿ ಪಕಪಕ ನಕ್ಕ!

“”ಗೂಗಲ್ಲು, ವಾಟ್ಸಪ್ಪು, ಫೇಸುºಕ್‌ ಕಾಲ್ದಾಗ ಪುಸ್ತಕ ಯಾರು ಓದ್ತಾರೆ ಸಾರ್‌. ಕಾಲೇಜು ಹುಡುಗ್ರು ಟೆಕ್ಸ್ಟ್ ಬುಕ್ಕೇ ಓದಲ್ಲ. ನೀವಿನ್ನೂ ಯಾವೊª
ಜಮಾನದಲ್ಲಿದ್ದೀರಿ” ಇಷ್ಟೆಲ್ಲಾ ಮಾತು ನಡೆದಿದ್ದರೂ ರಸ್ತೆಯಲ್ಲಿ ಟ್ರ್ಯಾಕ್ಕು ಒಂದಣುವೂ ಅಲುಗಿರಲಿಲ್ಲ. ಸುತ್ತಲಿನ ವಾಹನಗಳ ಹೊಗೆಗೆ ಉಸಿರು ಸಿಕ್ಕಿಕೊಂಡು ಗಂಟಲಿಗೆ ಕಿರಿಕಿರಿಯಾಯಿತು.””ಆದ್ರೆ ಚಿಂತಾಮಣಿ ಓದ್ತಾನೆ. ಅವನಿಗೆ ಪುಸ್ತಕ ಬೆಲೆ ಗೊತ್ತು” ಶಿಷ್ಯನ ಪರ ವಹಿಸಿದೆ.
“”ಅದೇನೋ ಬಿಡಿ ಸಾರ್‌. ನೀವು ಹಿಂಗೆಲ್ಲಾ  ನಡ್ಕೊಂಡು ಹೋದ್ರೆ ನಾಗಾವಾರ ಮುಟ್ಟೋದಿಲ್ಲ. ಆಟೋ ಹಿಡಿದಿºಡಿ. ಇಲ್ಲ  ಪಕ್ಕದಾಗೇ ಖಾಲಿ ಆಟೋ ಐತೆ. ಮೆಲ್ಲಗೆ ಬಾಗುÉ ತೆಗೀತೀನಿ ಹಂಗೇ ಜಾರ್ಕೊಂಡಿºಡಿ” ಕಲ್ಲೇಶಿ ಬೆಂಗಳೂರಿಗೆ ಹಳಬ, ಜೊತೆಗೆ ಅನುಭವಸ್ಥ. ಮುಂದಿಂದು
ಸಿನಿಮಾ ದೃಶ್ಯ! ಟ್ರಾಕ್ಕಿನ ಕರ್ಕಶ ಶಬ್ದ, ಹೊಗೆ, ಗದ್ದಲದಲ್ಲಿ ನಡೆಯಿತು ಪವಾಡ. ನಾನು ಆಟೋಗೆ ಜಾರಿದೆ.

“”ಎಲ್ಗೆ ಸಾರ್‌…?” ಆಟೋದವ ಕೇಳಿದ. “”ನಾಗಾವಾರ. ಮದ್ವೇಗೆ. ಹನ್ನೆರಡೂವರೆಗೆ ಮುಹೂರ್ತ. ಆ ಟೈಮೊಳಗೆ ಬಿಡ್ಬೇಕು”
“”ಐನೂರಾಗುತ್ತೆ” “”ನಾನು ಮೈಸೂರಿನಿಂದ ಬರೀ ನೂರು ರೂಪಾಯಿಯಲ್ಲಿ ಬಂದಿದೀನಿ” “”ಹಂಗೇ ವಾಪಸು ಹೋಗಿºಡಿ. ನಾನ್ನೂರು ಉಳಿಸಿದಂಗಾಗುತ್ತೆ. ಇನ್ನೂರಿಲೆª ಬೆಂಗ್ಳೂರಲ್ಲಿ ಆಟೋ ಹತ್ತೋಕಾಗೊಲ್ಲ” “”ಮೀಟರು ಹಾಕು” ಅವನ ಮಾತಿಗೆ ದಂಗಾದರೂ ಮೊಂಡು ವಾದ ಮಾಡಿದೆ. “”ಮೀಟರು ಹಾಕಲ್ಲ. ಒಪೆYಯಾದ್ರೆ ಕುಂತ್ಕಳ್ಳಿà ಇಲ್ದಿದ್ರೆ ಎ¨ªೋಗಿ” “”ಸರಿ” ಎಂದೆ. ಬೇರೆ ದಾರಿ ಇರಲಿಲ್ಲ.

“”ಒಂದು ಕಂಡೀಷನ್ನು. ಈ ಟ್ರಾಕ್ಕಿನಾಗೆ ಒಂದು ಕಿಲೋಮೀಟರೂ ಮುಂದಕ್ಕೆ ಹೋಗೋಕಾಗೊಲ್ಲ. ಅದ್ಕೆ ನಾನು ಹೋಗೋ ರೂಟ್‌
ಬಗ್ಗೆ ತಕರಾರು ಮಾಡಾºರ್ದು. ಮದ್ವೆಗೆ ಕರ್ಕೊಂಡು ಹೋಗೋ ಜವಾಬ್ದಾರಿ ನಂದು” ಮದ್ವೆಗೆ ಹೋಗಿªದ್ರೆ ಬಂದಿದ್ದೇ ವ್ಯರ್ಥ. ಕಂಡೀಷನ್ನಿಗೆ ಒಪ್ಪಿದೆ. ಆಟೋವನ್ನು ಹಿಂದೆ ಮುಂದೆ ಎಳೆದಾಡಿ, ಗುರ್ರೆನ್ನಿಸಿ ಅಕ್ಕಪಕ್ಕದವರನ್ನ ಪತರಗುಟ್ಟಿಸಿ ಪಕ್ಕದ ಗಲ್ಲಿ ನುಗ್ಗಿಸಿದ. ಅದು ಅತ್ಯಂತ ಕಿರಿದಾದ ಗಲ್ಲಿ. ಒಂದು ಆಟೋ ಓಡಿಸಲು ಮಾತ್ರ ರಸ್ತೆಯಲ್ಲಿ ಜಾಗ. ಅದರಲ್ಲಿ ಎರಡೂ ಕಡೆ ವಾಹನಗಳು, ಜನ, ಜಾನುವಾರು ಎಲ್ಲ. ಅಚ್ಚರಿ ಎನ್ನುವಂತೆ
ಯಾರೂ, ಯಾವುವೂ ಯಾರಿಗೂ, ಯಾವುದಕ್ಕೂ ಗಟ್ಟಿಸದೆ ಸಾಗುತ್ತಿದ್ದವು. ಹಿಂದೆಂದೂ ಬೆಂಗಳೂರಲ್ಲಿ ಅಂತಾ ಬೀದಿ ನೋಡಿರಲಿಲ್ಲ. ಜನರ ವೇಷಭೂಷಣಗಳೂ ಭಿನ್ನ. ಯಾವ ಆತಂಕವೂ ಇಲ್ಲದೆ, ಕಾನೂನು, ನಿಯಮಗಳಿಗೆ “ಕ್ಯಾರೆ’ ಅನ್ನದೆ ನಿರ್ಭಿಡೆಯಿಂದ ಚಲಿಸುತ್ತಿದ್ದರು.
ಸ್ಕೂಟರು, ಬೈಕು ಓಡಿಸುವ ಯಾರೂ ಹೆಲ್ಮೆಟ್‌ ಹಾಕಿರಲಿಲ್ಲ. ಆವೇಶ ಬಂದವರಂತೆ ವಾಹನ ಓಡಿಸುತ್ತಿದ್ದರು. ಅದು ವಿಚಿತ್ರ ಪ್ರಪಂಚದಂತಿತ್ತು. ಒಮ್ಮೆ ಧುತ್ತನೆ ಟೆಂಪೋ ಎದುರಾಯಿತು. ತತ್‌ ಕ್ಷಣ ರಸ್ತೆಯಲ್ಲಿ ಎಲ್ಲಿಂದಲೋ ಮೂವರು ಪ್ರತ್ಯಕ್ಷರಾಗಿ ವಾಹನಗಳನ್ನು ನಿರ್ದೇಶಿಸಿ ಎರಡೂ
ವಾಹನಗಳು ಸಾಗುವಂತೆ ಮಾಡಿದರು. ಆ ಜಾಗ, ಅಲ್ಲಿ ಆಟೋ ಓಡಿಸುತ್ತಿದ್ದ ರೀತಿಗೆ ಎದೆ ಢವಗುಟ್ಟುತ್ತಿತ್ತು.

“”ಇದ್ಯಾವ ಜಾಗ?” ಅಳುಕುತ್ತ ಕೇಳಿದೆ. “”ಲಗೋರಿ ಪಾಳ್ಯ” ಎದೆ ಧಸಕ್ಕಂತು! ಆ ಏರಿಯಾದಲ್ಲಿ ಹೆಸರಾಂತ ರೌಡಿಗಳು ಇದ್ದುದು ಓದಿ¨ªೆ. ಅಲ್ಲಿ ಹಾಡುಹಗಲೇ ಕೊಲೆಗಳೂ ನಡೆಯುತ್ತವಂತೆ. “”ಇಲ್ಲೀಗ್ಯಾಕಯ್ನಾ ಕರ್ಕೊಂಡು ಬಂದೆ?” “”ನಾನು ಮೊದೆÉà ಹೇಳಿ¨ªೆ. ರೂಟ್‌ ಬಗ್ಗೆ ತಕರಾರು ಮಾಡಾºರ್ದು ಅಂತ. ಮದ್ವೇಗೆ ಹೋಗ್ಬೇಕೊ ಬೇಡ್ವೋ?” “”ಸರಿಯಪ್ಪ ನಡಿ” ಹದಿನೈದು ನಿಮಿಷ ಆ ಕತ್ತಲ ಖಂಡದಂತಿದ್ದ ರಸ್ತೆಗಳಿಂದ ಒಮ್ಮೆಲೇ ಮೈನ್‌ ರೋಡಿಗೆ ಆಟೋ ಪ್ರವೇಶಿಸಿದಾಗ ನೆಮ್ಮದಿಯ ನಿಟ್ಟುಸಿರುಬಿಟ್ಟೆ. ಮತ್ತೇನೂ ಆತಂಕಪಡಬೇಕಾಗಿಲ್ಲ
ಎಂದುಕೊಳ್ಳುತ್ತಿರುವಾಗಲೇ ಮತ್ತೂಂದು ಗಲ್ಲಿಯಲ್ಲಿ ಆಟೊ ನುಗ್ಗಿತು. ಅದೂ ಸಹ ಹಿಂದೆ ಬಂದ ಲಗೋರಿಪಾಳ್ಯದಂತೇ ಇತ್ತು.
“”ಬೆಂಗ್ಳೂರಲ್ಲಿ ಇಂಥ ಬೀದಿಗಳಿವೆ ಅಂತ ಈವರೆಗೆ ಗೊತ್ತಿರಲಿಲ್ಲ. ಇದ್ಯಾವ ಏರಿಯಾ?” “”ಅದ್ನ ತಿಳ್ಕೊಂಡು ಏನ್ಮಾಡ್ತೀರಾ? ಇಂತಾ
ಏರಿಯಾಗಳು ಎಲ್ಲ ದೊಡ್‌ದೊಡ್ಡದು ಊರಲೆಲ್ಲಾ  ಅವೆ. ಬೆಂಗ್ಳೂರು, ಮಂಗ್ಳೂರು, ಮುಂಬೈ, ಚೆನ್ನೈ ಎಲ್ಲಾ ಕಡೆ ಅವೆ.

ಬಿಳಿ ಶರ್ಟಿನವರಿಗೆ ಅವು ಕಾಣಲ್ಲ” ನನ್ನನ್ನೇ ತಿವಿದಂತಿತ್ತು-ಅವನ ಮಾತು. ಅದನ್ನು ಜೀರ್ಣಿಸಿಕೊಳ್ಳುತ್ತಿರುವಾಗಲೇ ವಿಚಿತ್ರವಾದ ಕಟುವಾಸನೆ ನಾಸಿಕವನ್ನು ಬೇಧಿಸಿತು. ಈವರೆಗೆ ಅಂಥ ವಾಸನೆ ಅನುಭವಿಸಿರಲಿಲ್ಲ. ಮುಂದೆಮುಂದೆ ಹೋಗುತ್ತಿದ್ದಂತೆ ವಾಸನೆಯ ಸ್ವರೂಪ ಬದಲಾಗುತ್ತಿತ್ತು. ಗಮಟು, ಕಿಮಟು ಮತ್ತು ಕಟು ವಾಸನೆಗೆ ಉಸಿರು ಕಟ್ಟಿತು. “”ಇದು ಪ್ಯಾನರಿ ರೋಡು. ಇÇÉೇ ಕಸಾಯಿಖಾನೆ ಐತೆ. ಇಲ್ಲಿ ಚರ್ಮ ಹದ ಮಾಡ್ತಾರೆ. ಅದ್ಕೆ ವಾಸ್ನೆ” ನಾನು ಕೇಳದಿದ್ದರೂ ಆಟೋದವ ಹೇಳಿದ. ಚಿಂತಾಮಣಿ ಮದ್ವೆಗೆ ಕರೀದೆ ಇದ್ದಿದ್ದರೆ ಈ ಅನುಭವ ಆಗ್ತಿರಲಿಲ್ಲ. ಇನ್ನೂ ಎಷ್ಟು ದೂರ ಹೋಗ್ಬೇಕೋ! ಇನ್ನೂ ಯಾವ್ಯಾವ ಗಲ್ಲಿಗಳ ದರ್ಶನ ಮಾಡಬೇಕೋ ಎಂದು ಅಚ್ಚರಿಪಟ್ಟೆ. “”ಇದ್ದಕ್ಕಿದ್ದಂತೆ ಆಟೋಗೆ ಸಿಕ್ಕಿಕೊಂಡ ವ್ಯಕ್ತಿಯೊಬ್ಬನನ್ನು ಆಟೋದವ ವಾಚಾಮಗೋಚರವಾಗಿ ಬೈಯತೊಡಗಿದ. ಸಣ್ಣ ವಾಗ್ಯುದ್ಧ. ಇನ್ನೇನು, ಮಚ್ಚು-ಲಾಂಗು ಈಚೆ ಬರುತ್ತವೆ ಎಂದುಕೊಳ್ಳುವಾಗ ಎಲ್ಲಾ  ಶಮನ.

ಹತ್ತಾರು ಅಂಥ ಗಲ್ಲಿಗಳ ದರ್ಶನದ ನಂತರ ಮುಖ್ಯ ರಸ್ತೆ ಕಾಣಿಸಿತು. ಶರವೇಗದಲ್ಲಿ ಎದುರಿಗೆ ಬರುತ್ತಿದ್ದ ವಾಹನಗಳನ್ನೂ ಲೆಕ್ಕಿಸದೆ ಆಟೋದವ ಅವುಗಳಿಗೆದುರಾಗೇ ಎಡಕ್ಕೆ ತಿರುಗಿಸಿದ. ಆ ವಾಹನಗಳು ಆಟೋವನ್ನು ಅಪ್ಪಳಿಸುವ ಚಿತ್ರ ಕಣ್ಮುಂದೆ ಮಿಂಚಿತು. ಚೀರಿ
ಕಣ್ಮುಚ್ಚಿದೆ. “”ಅದ್ಯಾಕಂಗಾಡ್ತೀರಿ? ಇಳೀರಿ ಇದೇ ನಿಮ್ಮ ಮದ್ವೆ ಚೌಲಿó” “”ನನ್ನ ಮದ್ವೆಯಲ್ಲ. ನನ್ನ ಶಿಷ್ಯ ಚಿಂತಾಮಣಿ ಮದ್ವೆ” ಅವನನ್ನು ತಿದ್ದಿದೆ. ಅವನು ಕೈತೋರಿದ ಕಡೆ ನೋಡಿದೆ. ಐಷಾರಾಮೀ ಮದುವೆ ಮಂಟಪ ಕಂಡಿತು!

ಎಸ್‌. ಜಿ. ಶಿವಶಂಕರ್‌  

Advertisement

Udayavani is now on Telegram. Click here to join our channel and stay updated with the latest news.

Next