Advertisement

ಬೆಂಗಳೂರಲ್ಲಿ ಮೈಕ್ರೋಸಾಫ್ಟ್ ಕಚೇರಿ ಶುರು?

03:45 AM Mar 08, 2017 | Harsha Rao |

ನವದೆಹಲಿ: ಪ್ರಪಂಚದ ಅತಿದೊಡ್ಡ ಸಾಫ್ಟ್ವೇರ್‌ ಕಂಪನಿ “ಮೈಕ್ರೋಸಾಫ್ಟ್’ ಬೆಂಗಳೂರಿನಲ್ಲಿ ತನ್ನ ಕಚೇರಿ ತೆರೆಯಲು ಸಿದ್ಧತೆ ನಡೆಸಿದೆಯೇ? ಆಂಗ್ಲ ಪತ್ರಿಕೆಯೊಂದರ ವರದಿ ಪ್ರಕಾರ ಖಾಸಗಿ ಸಂಸ್ಥೆ ಜತೆ ಅದು ಒಂಭತ್ತು ವರ್ಷಗಳ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ. ಒಟ್ಟು 6 ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ಕಂಪನಿಯ ನೂತನ ಕಚೇರಿ ಇರಲಿದೆ. ಜತೆಗೆ 6 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರು ಮತ್ತು ದೇಶದ ಇತರ ಪ್ರತಿಭಾವಂತ ಯುವಕರಿಗೆ ಹೆಚ್ಚಿನ ಅವಕಾಶ ಸಿಗಬೇಕೆಂಬ  ಕಂಪನಿ ಸಿಇಒ ಸತ್ಯಾ ನಾದೆಳಾÉ ಆಶಯದಂತೆ ಈ ನಿರ್ಧಾರಕ್ಕೆ ಬರಲಾಗುತ್ತಿದೆ. ಹಾಲಿ ವರ್ಷದಲ್ಲಿಯೇ ಅದು ಕಾರ್ಯಾರಂಭ ಮಾಡಲಿದೆ ಎಂದು ಹೇಳಲಾಗಿದೆ.

Advertisement

ಮೈಕ್ರೋಸಾಫ್ಟ್ ಕಂಪನಿಯ ವಕ್ತಾರರೊಬ್ಬರು ಪರೋಕ್ಷವಾಗಿ ಈ ಮಾಹಿತಿಯನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. “ಬೆಂಗಳೂರಿನಲ್ಲಿ ನಮ್ಮ ಉದ್ಯೋಗಿಗಳ ಸಂಖ್ಯೆ ಬಹಳಷ್ಟಿದೆ. ಒಮ್ಮೆ ನಮ್ಮ ಯೋಜನೆ ಪೂರ್ಣವಾಯಿತೆಂದರೆ ಅದರ ಮಾಹಿತಿ ಹಂಚಿಕೊಳ್ಳುತ್ತೇವೆ’ ಎಂದರು. ಇತ್ತೀಚೆಗಷ್ಟೇ ಆ್ಯಪಲ್‌ ಕಂಪೆನಿ ಬೆಂಗಳೂರಲ್ಲಿ 40 ಸಾವಿರ ಚದರ ಅಡಿ ಸ್ಥಳ ಗುತ್ತಿಗೆ ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next