ಹೊಸದಿಲ್ಲಿ: ಆರೋಗ್ಯ, ಅಭಿವೃದ್ಧಿ, ಹವಾಮಾನದಂಥ ಕ್ಷೇತ್ರಗಳಲ್ಲಿ ಭಾರತದ ಸಾಧನೆಯನ್ನು ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್‌ಗೇಟ್ಸ್ ಶ್ಲಾಘಿಸಿದ್ದಾರೆ.
ಅಲ್ಲದೆ, ನಾವೀನ್ಯತೆಗಳಲ್ಲಿ ಹೂಡಿಕೆ ಮಾಡಿದರೆ, ಏನೆಲ್ಲ ಸಾಧಿಸಬಹುದು ಎಂಬುದನ್ನು ಭಾರತ ತೋರಿಸಿಕೊಡುತ್ತಿದೆ ಎಂದು ಪ್ರಶಂಸಿಸಿದ್ದಾರೆ.
ಭಾರತಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದ ಬಿಲ್‌ಗೇಟ್ಸ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಲ್ಲದೇ, ಭಾರತದಲ್ಲಿನ ಕೆಲ ಬದಲಾವಣೆ, ಮೋದಿ ಸರಕಾರದ ಕ್ರಮಗಳ ಬಗ್ಗೆಯೂ ಬರೆದುಕೊಂಡಿದ್ದಾರೆ. ತಮ್ಮ ಬರಹದಲ್ಲಿ ಕೊರೊನಾ ವಿರುದ್ಧದ ಹೋರಾಟ, ಲಸಿಕೆ ಅಭಿವೃದ್ಧಿ, ಕೋವಿನ್ ಆ್ಯಪ್ ಅಭಿವೃದ್ಧಿಯಲ್ಲಿ ಮೋದಿ ಸರಕಾರದ ಸಮಯಪ್ರಜ್ಞೆ ಹಾಗೂ ಮುತುವರ್ಜಿಯನ್ನು ಶ್ಲಾ ಸಿದ್ದಾರೆ. ಜತೆಗೆ ಗತಿಶಕ್ತಿ ಮೂಲಕ ಸಚಿವಾಲಯಗಳನ್ನು ಒಗ್ಗೂಡಿಸಿ, ದೇಶದ ಮೂಲಸೌಕರ್ಯಗಳಿಗೆ ಒತ್ತು ನೀಡುವ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.