Advertisement
ಮಲೇರಿಯಾ ನಿಯಂತ್ರಣದ ಸಲುವಾಗಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ರಕ್ತದ ಪರೀಕ್ಷೆ, ಚಿಕಿತ್ಸೆ ವ್ಯವಸ್ಥೆ ಕೂಡ ಮಾಡಲಾಗಿದೆ. ಅಲ್ಲದೆ, ಆ ರೋಗದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದು ಮಲೇರಿಯಾ ನಿಯಂತ್ರಣಕ್ಕೆ ಸಾಧ್ಯವಾಗಿದೆ. ಮಲೇರಿಯಾ ಈ ಹಿಂದೆ ಮಳೆಗಾಲದಲ್ಲಿ ಬೇಸಿಗೆಯಲ್ಲಿ ಜನರನ್ನು ಹೆಚ್ಚಾಗಿ ಕಾಡುತ್ತಿತ್ತು. ಕೆಲವೊಮ್ಮೆ ಜನರನ್ನು ಬಲಿತೆಗೆದುಕೊಂಡ ಉದಾಹರಣೆಯೂ ಇದೆ. ಅದಕ್ಕಾಗಿ ಮಲೇರಿಯಾ ನಿಯಂತ್ರಣಕ್ಕೆ ಆರೋಗ್ಯ ಮತ್ತು ಕುಟುಂಬ ಇಲಾಖೆ ಕ್ರಮವಹಿಸಿದೆ. ಜಿಲ್ಲೆಯಲ್ಲಿ ನಿರಂತರ ಜ್ವರದ ಲಕ್ಷಣ ಇರುವವರಿಗೆ ರಕ್ತ ಪರೀಕ್ಷೆ ಮಾಡಿಸಲಾಗುತ್ತಿದೆ. ಆಸ್ಪತ್ರೆಗಳಲ್ಲೂ ಜ್ವರ ಇರುವವರ ರಕ್ತಲೇಪನ ಮಾಡಿಸಲಾಗುತ್ತಿದೆ.
Related Articles
Advertisement
ಅಧಿಕೃತ ಘೋಷಣೆ ಬಾಕಿ: ಮಲೇರಿಯಾ ಮುಕ್ತ ಜಿಲ್ಲೆಯಾಗುವಲ್ಲಿ ಗ್ರಾಮಾಂತರ ಸಾಗಿದೆ. ಈಗಾಗಲೇ ಜಿಲ್ಲೆಗೆ ಭೇಟಿ ನೀಡಿದ ರಾಜ್ಯ ಹಾಗೂ ಕೇಂದ್ರ ತನಿಖಾ ತಂಡ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕಿನಿಂದ ವರದಿಯನ್ನು ಪಡೆಯಿತು. ಇದೀಗ ಉಳಿದ ಹೊಸಕೋಟೆ, ನೆಲಮಂಗಲ ತಾಲೂಕಿಗೆ ಭೇಟಿ ನೀಡಲು ತಂಡ ಬರಲಿದ್ದು, ನಂತರ ಮಲೇರಿಯಾ ಮುಕ್ತ ಜಿಲ್ಲೆಯಾಗಿ ಅಧಿಕೃತವಾಗಿ ಘೋಷಣೆ ಬಾಕಿಯಿದೆ. ಡೆಂಗ್ಯು ರೀತಿಯಲ್ಲಿ ಜನರಲ್ಲಿ ಮಲೇರಿಯಾ ಕಾಡುತ್ತಿತ್ತು. ಇದೀಗ ಅಧಿಕಾರಿಗಳು ಹೆಚ್ಚು ಕ್ರಮವಹಿಸಿ ನಿಯಂತ್ರಣ ಮಾಡಿರುವುದರಿಂದ ಮಲೇರಿಯಾವನ್ನು ಕಟ್ಟಿಹಾಕಿದ್ದಾರೆ. ಜಿಲ್ಲೆಯ ಜನರಲ್ಲಿ ಕೆಲವರ್ಷಗಳಿಂದ ಮಲೇರಿಯಾ ರೋಗ ಪತ್ತೆಯಾಗಿಲ್ಲ
ಮಲೇರಿಯಾ ಮುಕ್ತ ಜಿಲ್ಲೆ ಆಯ್ಕೆಗೆ ಜಿಲ್ಲೆ ಯ ಎರಡು ತಾಲೂಕಿಗೆ ರಾಜ್ಯ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲನೆ ನಡೆ ಸಿದೆ. ಮೂರು ವರ್ಷಗಳಿಂದ ಸ್ಥಳೀಯರಲ್ಲಿ ಯಾವು ದೇ ಮಲೇರಿಯಾ ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಜನರಲ್ಲಿ ಮಲೇರಿಯಾ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗಿದೆ. ● ಡಾ.ಧರ್ಮೇಂದ್ರ, ಮಲೇರಿಯಾ ನಿಯಂತ್ರಣಾಧಿಕಾರಿ.
ಮಲೇರಿಯಾ ನಿಯಂತ್ರಣಕ್ಕೆ ಜಿಲ್ಲಾದ್ಯಂತ ಅಗತ್ಯ ಕ್ರಮ ವಹಿಸಲಾಗಿದೆ. ಜ್ವರದ ಲಕ್ಷಣ ಕಂಡುಬಂದಲ್ಲಿ ಚಿಕಿತ್ಸೆ ಪಡೆದುಕೊಳ್ಳ ಬೇಕು. ಟ್ಯಾಂಕ್, ತೊಟ್ಟಿಗಳಲ್ಲಿ ಹಾಗೂ ಹಳೇ ಟಯರ್‌ಗಳಲ್ಲಿ ಸೊಳ್ಳೆ ಉತ್ಪತ್ತಿ ಆಗದಂತೆ ಗಮನಹರಿಸಬೇಕು. ● ಡಾ.ವಿಜಯೇಂದ್ರ, ಜಿಲ್ಲಾ ಆರೋಗ್ಯಾಧಿಕಾರಿ.
● ಎಸ್.ಮಹೇಶ್