Advertisement

RBI ಮೋಸ ಮಾಡ್ತಿದೆ;ಹಳೇ Note ಸ್ವೀಕಾರಕ್ಕೆ ನಕಾರ, ಸಾರ್ವಜನಿಕರ ತರಾಟೆ

04:27 PM Jan 02, 2017 | Team Udayavani |

ಬೆಂಗಳೂರು:ನಿಷೇಧಿತ 500, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬೆಂಗಳೂರು ಆರ್ ಬಿಐ ಶಾಖೆಯಲ್ಲಿ ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ ಗಲಾಟೆ ನಡೆಸಿದ ಘಟನೆ ಸೋಮವಾರ ನಡೆದಿದೆ.

Advertisement

ಬೆಳಗ್ಗೆಯಿಂದ ಬೆಂಗಳೂರಿನ ಆರ್ ಬಿಐ ಎದುರು ನೂರಾರು ಮಂದಿ ಹಳೇ ನೋಟು ಬದಲಾವಣೆಗಾಗಿ ಆಗಮಿಸಿದ್ದರು. ಆದರೆ ಹಳೇ ನೋಟು ಸ್ವೀರಿಸೋದಿಲ್ಲ ಎಂಬ ಆರ್ ಬಿಐ ಸಿಬ್ಬಂದಿ ಹೇಳಿಕೆಯಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 31ರವರೆಗೆ ಹಳೇ ನೋಟು ಸ್ವೀಕರಿಸಬೇಕೆಂದು ಆರ್ ಬಿಐ ಪ್ರಕಟಣೆ ನೀಡಿದೆ. ಆದರೆ ಇದೀಗ ಆರ್ ಬಿಐ ನಮಗೆ ಮೋಸ ಮಾಡುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next