Advertisement

ಬೆಂಗಳೂರು ಪೊಲೀಸ್‌ ಕಮಿಷನರ್‌ ಪ್ರವೀಣ್‌ ಸೂದ್‌ ವರ್ಗಾವಣೆ

06:56 PM Jul 31, 2017 | Karthik A |

ಬೆಂಗಳೂರು: ಹಿರಿಯ ಐಪಿಎಸ್‌ ಅಧಿಕಾರಿ ಹಾಗೂ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಮತ್ತು ಪೊಲೀಸ್‌ ಕಮೀಷನರ್‌ ಆಗಿದ್ದ ಪ್ರವೀಣ್‌ ಸೂದ್‌ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಸೋಮವಾರದಂದು ಆದೇಶ ಹೊರಡಿಸಿದೆ.

Advertisement

ವರ್ಗಾವಣೆಗೊಂಡಿರುವ ಪ್ರವೀಣ್‌ ಸೂದ್‌ ಅವರ ಜಾಗಕ್ಕೆ ಟಿ. ಸುನೀಲ್‌ ಕುಮಾರ್‌ ಅವರನ್ನು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಾಗೂ ಪೊಲೀಸ್‌ ಕಮಿಷನರ್‌ ಆಗಿ ನೆಮಿಸಲಾಗಿದೆ. ತತ್‌ ಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರವು ಈ ಆದೇಶವನ್ನು ಹೊರಡಿಸಿದೆ. ಸುನಿಲ್‌ ಕುಮಾರ್‌ ಅವರು ಈ ಹಿಂದೆ ಕರ್ನಾಟಕ ರಾಜ್ಯ ಪೊಲೀಸ್‌ ಹೌಸಿಂಗ್‌ ಕಾರ್ಪೊರೇಷನ್‌ ಇದರ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಹಾಗೂ ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಕಮಿಷನರ್‌ ಹುದ್ದೆಯಿಂದ ವರ್ಗಾವಣೆಗೊಂಡಿರುವ ಪ್ರವೀಣ್‌ ಸೂದ್‌ ಅವರು ಇನ್ನು ಮುಂದೆ ಕಮ್ಯುನಿಕೇಷನ್‌, ಲಾಜಿಸ್ಟಿಕ್ಸ್‌ ಮತ್ತು ಮಾಡರ್ನೆçಜೇಶನ್‌ ಬೆಂಗಳೂರು ಇದರ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾಗಿ ನಿಯಕ್ತಿಗೊಂಡಿದ್ದಾರೆ. ಇದಲ್ಲದೆ ಆಶಿತ್‌ ಮೋಹನ್‌ ಪ್ರಸಾದ್‌ ಅವರನ್ನು ಪೊಲೀಸ್‌ ಮಹಾನಿರ್ದೇಶಕರ ಹುದ್ದೆಗೆ ಭಡ್ತಿ ನೀಡಲಾಗಿದೆ. ಮತ್ತು ಬೆಂಗಳೂರು ಇಂಟಲಿಜೆನ್ಸ್‌ ಪೊಲೀಸ್‌ ಮಹಾನಿರ್ದೇಶಕರ ಹುದ್ದೆಯನ್ನು ಸ್ಥಾನಮಾನ ಹಾಗೂ ಜವಾಬ್ದಾರಿ ನೆಲೆಯಲ್ಲಿ ಪೊಲೀಸ್‌ ಮಹಾನಿರ್ದೇಶಕರು, ಕಮಾಂಡೆಂಟ್‌ ಜನರಲ್‌, ಹೋಮ್‌ ಗಾರ್ಡ್ಸ್, ಎಕ್ಸ್‌-ಆಫಿಸಿಯೋ ಡೈರೆಕ್ಟರ್‌ ಅಗ್ನಿಶಾಮಕ ದಳ ಬೆಂಗಳೂರು ಇವುಗಳ ತತ್ಸಮಾನ ಸ್ಥಾನಕ್ಕೇರಿಸಿಯೂ ಕೂಡ ರಾಜ್ಯಸರಕಾರವು ಆದೇಶವನ್ನು ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next