Advertisement

ರಾಜಧಾನಿಯಲ್ಲಿ ಬಿಗಿ ನೈಟ್‌ಕರ್ಫ್ಯೂ ಜಾರಿ

02:18 PM Aug 07, 2021 | Team Udayavani |

ಬೆಂಗಳೂರು: ಕೋವಿಡ್‌ ಮೂರನೇ ಅಲೆ ಭೀತಿ ಸಂಬಂಧ ರಾಜ್ಯ ಸರ್ಕಾರ ಶನಿವಾರದಿಂದ ನೈಟ್‌ ಕರ್ಫ್ಯೂ ಜಾರಿಗೊಳಿಸಿದ್ದರೂ ನಗರ ಪೊಲೀಸರು ಶುಕ್ರವಾರ ಸಂಜೆಯಿಂದಲೇ ನಗರದ ಎಲ್ಲಾ ವಿಭಾಗದ ಹೊಯ್ಸಳ ವಾಹನಗಳ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ನೈಟ್‌ ಕರ್ಫ್ಯೂ ಬಗ್ಗೆ ಮಾಹಿತಿ ನೀಡಿದರು.

Advertisement

ಸಂಜೆ ಆರು ಗಂಟೆಯಿಂದಲೇ ಪೊಲೀಸರು ಧ್ವನಿವರ್ಧಕಗಳ ಮೂಲಕ ಸರ್ಕಾರದ ಕೋವಿಡ್‌-19ರ ಹೊಸನಿಯಮಗಳ ಬಗ್ಗೆ ಮಾಹಿತಿ ನೀಡಿ, ಸರ್ಕಾರದ ಪರಿಷ್ಕೃತ ಆದೇಶದಂತೆ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್‌ಕರ್ಫ್ಯೂ ಜಾರಿ ಮಾಡಲು ಆದೇಶಿಸಲಾಗಿದೆ.

ಹೀಗಾಗಿ ರಾತ್ರಿ 9 ಗಂಟೆಯ ಬಳಿಕ ಅಂಗಡಿ-ಮುಂಗಟ್ಟುಗಳು, ವಾಹನ ಸಂಚಾರ ಸೇರಿ ಎಲ್ಲ ಚಟುವಟಿಕೆಗಳನ್ನೂ ಸ್ಥಗಿತಗೊಳಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸಿಟಿ ಮಾರುಕಟ್ಟೆ, ಚಿಕ್ಕಪೇಟೆ, ಸೇರಿ ಪಶ್ಚಿಮ ವಿಭಾಗದ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರು ಧ್ವನಿವರ್ಧಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ನಿಯಮ ಪಾಲಿಸದಿದ್ದರೆ ಶಿಸ್ತುಕ್ರಮ
ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಮೇಲೆ ಕಾರು ಹರಿಸಿ ಕೊಲೆಗೆ ಯತ್ನ: ಮೂವರ ಬಂಧನ!

ಚೆಕ್‌ ಪೋಸ್ಟ್‌ಗಳು ನಿರ್ಮಾಣ: ಶುಕ್ರವಾರ ರಾತ್ರಿ 9 ಗಂಟೆಯಾಗುತ್ತಿದ್ದಂತೆ ನಗರದ ವಿವಿಧೆಡೆ ಪೊಲೀಸರು ಗಸ್ತು ತಿರುಗಿ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನ ಸವಾರರನ್ನು ಮನೆಗೆ ಕಳುಹಿಸಿದರು. ಕೆಲ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದರು.
ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದರು.

Advertisement

ನಗರದ ವಿವಿಧ ಚೆಕ್‌ ಪೋಸ್ಟ್‌ಗಳಿಗೆ ಪೊಲೀಸ್‌ ಆಯುಕ್ತಕಮಲ್‌ ಪಂತ್‌ ಭೇಟಿ ನೀಡಿ ಪರಿಶೀಲಿಸಿದರು.ಜತೆಗೆ ನಗರದ ಎಲ್ಲ ವಿಭಾಗಗಳಲ್ಲಿ ಆಯ್ದ ಜಾಗಗ ಳಲ್ಲಿ ಚೆಕ್‌ಪೋಸ್ಟ್‌ ತೆರೆದು ವಾಹನಗಳ ತಪಾಸಣೆ ನಡೆಸಿದರು. ಪ್ರಮುಖವಾಗಿ ನಗರ ಪ್ರವೇಶಿಸುವ ಮೈಸೂರು ರಸ್ತೆ, ತುಮಕೂರು, ಹೊಸೂರು, ಬಳ್ಳಾರಿಯಲ್ಲಿ ಚೆಕ್‌ ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ಹೆಚ್ಚಾಗಿತ್ತು. ಮೊದಲ ದಿನವಾದರಿಂದ ಯಾವುದೇ ದಂಡ ವಿಧಿಸದೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಆದರೆ, ಮದ್ಯಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿತು

ಬಿಎಂಟಿಸಿ ಬಸ್‌, ನಮ್ಮ
ಮೆಟ್ರೋದಲ್ಲಿ ವ್ಯತ್ಯಾಸ
ಬೆಂಗಳೂರು:
ರಾತ್ರಿ ಕರ್ಫ್ಯೂಬೆನ್ನಲ್ಲೇ ಬಿಎಂಟಿಸಿಬಸ್‌ ಮತ್ತು ನಮ್ಮ ಮೆಟ್ರೋ ಸೇವೆಯಲ್ಲಿ ತುಸು ವ್ಯತ್ಯಯ ಉಂಟಾಗಲಿದೆ. ಮೆಟ್ರೋ ಕೊನೆಯ ರೈಲು ಸೇವೆ ಈ ಮೊದಲು ರಾತ್ರಿ 9 ಗಂಟೆಗೆ ಇತ್ತು. ಕರ್ಫ್ಯೂ ಹಿನ್ನೆಲೆಯಲ್ಲಿ ಸೇವೆಯಲ್ಲಿ ಒಂದು ತಾಸು ಕಡಿತಗೊಳಿಸಲಾಗಿದೆ ಅಂದರೆ ನಾಲ್ಕೂ
ಟರ್ಮಿನಲ್‌ ಗಳಿಂದ ಕೊನೆಯ ರೈಲುಗಳು ರಾತ್ರಿ 8 ಗಂಟೆಗೆ ಹೊರಡಲಿವೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಅದೇ ರೀತಿ,ಬಸ್‌ ಸೇವೆ ಕೂಡ 9 ಗಂಟೆಗೆ ಸೀಮಿತವಾಗಲಿದೆ ಎಲ್ಲ ಪ್ರಮುಖನಿಲ್ದಾಣಗಳು ಮತ್ತುಟಿಟಿಎಂಸಿ ಗಳಿಂದ ಕೊನೆಯ
ಬಸYಳು ರಾತ್ರಿ 9ಕ್ಕೆ ಹೊರಡಲಿವೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next