ಬೆಂಗಳೂರು: ಕೇಂದ್ರ ಸರ್ಕಾರದ ಹಿಂದಿ ಭಾಷೆಹೇರಿಕೆಯನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್‌ಪಕ್ಷದ ನಾಯಕ ವಾಟಾಳ್ ನಾಗರಾಜ್ ಭಾನುವಾರಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಜತೆಗೂಡಿಹಿಂದಿ ಭಾಷೆ ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರದ ವಿರುದ್ಧಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿಮಾತನಾಡಿದ ವಾಟಾಳ್ ನಾಗರಾಜ್ ಯಾವುದೇಕಾರಣಕ್ಕೂ ಬಲವಂತವಾಗಿ ಹಿಂದಿ ಭಾಷೆ ಹೇರಿಕೆಮಾಡವುದನ್ನು ಸಹಿಸಿಕೊಳ್ಳಲಾಗದು.
ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಸಾರ್ವಭೌಮ ಎಂದುಹೇಳಿದರು. ಬ್ಯಾಂಕ್, ರೈಲ್ವೆ ಸೇರಿದಂತೆ ಎಲ್ಲೆಡೆ ಕನ್ನಡ ಭಾಷೆ ಅನುರಣಿಸಬೇಕು. ಬ್ಯಾಂಕ್‌ಗಳಲ್ಲಿ ಬಹುತೇಕ ಹಿಂದಿಮಾತನಾಡುತ್ತಿರುವವರೇ ತುಂಬಿ ಕೊಂಡಿದ್ದಾರೆ. ಹೀಗಾಗಿಕನ್ನಡಿಗರಿಗೆ ವ್ಯವಹಾರಿಕೆಯಲ್ಲಿ ತೊಂದರೆ ಉಂಟಾಗಿದೆ.ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ತಿಳಿಸಿದರು.ಸರ್ಕಾದ ಆಡಳಿತ ಯಂತ್ರದಲ್ಲಿ ಬರೀ ಉತ್ತರ ಪ್ರದೇಶದಮೂಲದವರೇ ಹೆಚ್ಚಾಗಿ ಹೋಗಿದ್ದಾರೆ. ಆ ಹಿನ್ನೆಲೆಯಲ್ಲಿ ಹಿಂದಿ ಭಾಷೆಯ ಬಗ್ಗೆ ಒಲವು ತೋರಿಸುತ್ತಿದ್ದಾರೆ.
ಹಿಂದಿ ಹೇರಿಕೆ ಬಗ್ಗೆ ಸದನಲ್ಲಿ ಶಾಸಕರು ಮಾತನಾಡದೇಇರುವುದು ಖೇದಕರ ಸಂಗತಿ ಆಗಿದೆ ಎಂದು ಹೇಳಿದರು.ರೈಲ್ವೆ ಮತ್ತು ಬ್ಯಾಂಕಿಂಗ್‌ನಲ್ಲಿ ಕನ್ನಡಿಗರಿಗೆ ಉದ್ಯೋಗದೊರಕಬೇಕು. ಆ ಹಿನ್ನೆಲೆಯಲ್ಲಿ ಹಿಂದಿ ಭಾಷೆಯವಿರುದ್ಧದ ಹೋರಾಟ ಹೀಗೆ ಮುಂದುವರಿಯಲಿದೆಎಂದು ತಿಳಿಸಿದರು.
ರಾಜ್ಯದಿಂದ ಆಯ್ಕೆ ಆಗಿರುವ ಸಂಸದರು ಸಂಸತ್‌ನಲ್ಲಿಈ ಬಗ್ಗೆ ದ್ವನಿ ಎತ್ತುತ್ತಿಲ್ಲ. ಅವರಿಗೆ ಪ್ರಧಾನಿ ಮೋದಿ ಕಂಡರೆಭಯ. ರಾಜ್ಯ ಸರ್ಕಾರ ಕೂಡ ಹಿಂದಿ ಭಾಷೆ ಹೇರಿಕೆ ಬಗ್ಗೆಮಾತನಾಡುತ್ತಿಲ್ಲ. ಒಕ್ಕೂಟ ರಾಷ್ಟ್ರದಲ್ಲಿ ಎಲ್ಲಾ ಭಾಷೆಗಳಿಗೂಮಾನ್ಯತೆ ದೊರೆಯಬೇಕು. ಆದರೆ ಕೇಂದ್ರ ಸರ್ಕಾರ ಹಿಂದಿಭಾಷೆಯನ್ನು ಹೊತ್ತು ಮೆರೆಯಲು ಹೊರಟಿದೆ.ಇದಕ್ಕೆಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.