Advertisement
ಕೊರೊನಾದಿಂದ ಸಂಕಷ್ಟ ಎದುರಿಸುತ್ತಿರುವ ಕರಾವಳಿ ಜಿಲ್ಲೆಗಳ ಮೀನುಗಾರರಲ್ಲಿಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿತ 18,746ಮೀನುಗಾರರಿಗೆ ತಲಾ 3 ಸಾವಿರ ರೂ.ಗಳಂತೆ ಪರಿಹಾರ ನೀಡಲು 5.62 ಕೋಟಿ ರೂ.ಅನುದಾನವನ್ನು ಮತ್ತು 7,668 ನಾಡದೋಣಿ ಹೊಂದಿರುವ ಮೀನುಗಾರರಿಗೆ ತಲಾ 3ಸಾವಿರ ರೂ.ಗಳಂತೆ ಪರಿಹಾರ ನೀಡಲು 2.30 ಕೋಟಿ ಅನುದಾನ ಸೇರಿ ಒಟ್ಟು 7.92ಲಕ್ಷ ಅನುದಾನವನ್ನು ಮೀಸಲಿಟ್ಟಿದೆ.
Related Articles
Advertisement
ಡಿಸೇಲ್ ಕರ ಪಾವತಿ ಮಾಡಬೇಕಿದ್ದರಿಂದ ದೋಣಿಮಾಲೀಕರಿಗೆ ಹೊರೆಯಾಗುತ್ತಿತ್ತು. ಈ ಪ್ರಕ್ರಿಯೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿಸಲು 2021-22ನೇ ಸಾಲಿನಿಂದ 1.5 ಲಕ್ಷ ಕಿಲೋ ಮೀಟರ್ ಡೀಸೆಲ್‌ಅನ್ನುಯಾಂತ್ರೀಕೃತ ದೋಣಿಗಳಿಗೆ ಡೆಲಿವರಿ ಪಾಯಿಂಟ್‌ನಲ್ಲಿಯೇ ಕರರಹಿತ ದರದಲ್ಲಿವಿತರಿಸಲಾಗುತ್ತದೆ.
ಬಂದರುಗಳ ಅಭಿವೃದ್ಧಿ: ಮಲ್ಪೆ, ಮಂಗಳೂರು, ಕಾರವಾರದ ಪ್ರಮುಖ ಬಂದರೂಸೇರಿದಂತೆ ಗಂಗೊಳ್ಳಿ, ಹೆಜಮಾಡಿ, ಭಟ್ಕಳ ಸಹಿತವಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿರುವ ಬಂದರು, ಕಿರು ಬಂದರು, ದೋಣಿ ಇಳಿದಾಣ ಕೇಂದ್ರ, ಹೊರಬಂದರು ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ಘೋಷಣೆಯ ಜತೆಗೆ ಕಾಮಗಾರಿಯನ್ನು ವೇಗವಾಗಿ ನಡೆಸುತ್ತಿದೆ.
ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಮೀನುಗಾರಿಕೆ ಬಂದರನ್ನು 180.84 ಕೋಟಿಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಅನುದಾನ ಮಂಜೂರುಮಾಡಲಾಗಿದೆ. ಇದಕ್ಕಾಗಿ ಪ್ರಥಮ ಕಂತಿನ ಅನುದಾನ 13.86 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ.
ಯೋಜನೆಗೆ ಅವಶ್ಯವಿರುವ ಖಾಸಗಿ ಭೂಮಿಯನ್ನು ಖರೀದಿಸುವ ಪ್ರಕ್ರಿಯೆಜಾರಿಯಲ್ಲಿದೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯ ಅಳ್ವೆಕೋಡಿ-ತೆಂಗಿನಗುಂಡಿಮೀನುಗಾರಿಕೆ ಇಳಿದಾಣ ಕೇಂದ್ರದ ಅಲೆ ತಡೆಗೋಡೆ ನಿರ್ಮಾಣವನ್ನು 86.08ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಡೆಸಲು ರಾಜ್ಯ ಸರ್ಕಾರ ಆಡಳಿತಾತ್ಮಕಮಂಜೂರಾತಿ ನೀಡಿದೆ. ಹಾಗೆಯೇ ಈ ಯೋಜನೆಗೆ ಕೇಂದ್ರ ಸರ್ಕಾರವುಶೇ.50ರಷ್ಟು (43.04 ಕೋಟಿ) ನೆರವು ನೀಡುತ್ತಿದ್ದು, ಪ್ರಸ್ತುತ 1.47 ಕೋಟಿಅನುದಾನ ಬಿಡುಗಡೆಯಾಗಿರುತ್ತದೆ.
ಇಳಿದಾಣ ಕೇಂದ್ರದ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಯೂ ಈಗಾಗಲೇ ಆರಂಭವಾಗಿದೆ. 22 ಕೋಟಿ ರೂ.ವೆಚ್ಚದಲ್ಲಿ ಮಂಗ ಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ಕಾಮಗಾರಿಗಳನ್ನುಕೈಗೊಳ್ಳಲು ಮಂಜೂರಾತಿ ನೀಡಲಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಮರವಂತೆಯಲ್ಲಿ ಹೊರಬಂದರಿನ 2ನೇ ಹಂತದ ಕಾಮಗಾರಿಗಳನ್ನು 85. ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.
ಇದರಿಂದ ತಾಲೂಕು ವ್ಯಾಪ್ತಿಯ ನಾಡದೋಣಿ ಮೀನುಗಾರರಿಗೆ ಮತ್ತು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಸಾವಿರಾರುಮೀನುಗಾರರಿಗೆ ಅನುಕೂಲವಾಗಿದೆ. 2ನೇ ಹಂತದ ಕಾಮಗಾರಿಗೆ ಸಂಬಂಧಿಸಿದಂತೆ ಸರ್ಕಾರವು ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಹಾಗೆಯೇ ತಾಲೂಕಿನ ಕೊಡೇರಿಕಿರು ಬಂದರು ಪ್ರದೇಶದ ಅಭಿವೃದ್ಧಿ ಕಾಮಗಾರಿಗಾಗಿ 2 ಕೋಟಿ ರೂ.ಗಳನ್ನು ಒದಗಿಸಿ,ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಇದರಿಂದ ಕೊಡೇರಿ ಕಿರು ಬಂದರುವ್ಯಾಪ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯಲಿದೆ.