ಬೆಂಗಳೂರು: ರಾಜ್ಯ ದಲ್ಲಿ ಶನಿ ವಾರ ಮಳೆ ಪ್ರಮಾಣ ಕಡಿ ಮೆ ಯಾ ದರೂ, ಪ್ರವಾ ಹದ ಅಬ್ಬರ ಜೋರಾಗಿಯೇ ಇದೆ. ಕರಾವಳಿ, ಮಲೆನಾಡು ಹಾಗೂ ಉತ್ತರಕರ್ನಾಟಕ ಭಾಗದಲ್ಲಿ ಮಳೆ ಮತ್ತು ಪ್ರವಾಹ ತೀವ್ರಹಾನಿಯುಂಟು ಮಾಡಿದೆ.
ಇದುವರೆಗೆ 9 ಜನರ ಸಾವುಸಂಭವಿಸಿದ್ದು, 11 ಜಿಲ್ಲೆಗಳ 45 ತಾಲೂಕುಗಳಲ್ಲಿಮಳೆಯಿಂದಾಗಿ ಸಂಕಷ್ಟ ಎದುರಾಗಿದೆ. ಅಪಾರಪ್ರಮಾಣದ ಬೆಳೆ ಹಾನಿಯಾಗಿದೆ.ಪ್ರವಾಹದಿಂದಾಗಿ ರಾಜ್ಯದಲ್ಲಿ 58,960 ಎಕರೆಯಲ್ಲಿಬೆಳೆದ ಬೆಳೆ ಹಾನಿವುಂಟಾಗಿದ್ದು, 1962 ಎಕರೆಯಲ್ಲಿಬೆಳೆದಿದ್ದ ತೋಟಗಾರಿಕೆ ಬೆಳೆಗಳು ಸಹ ನಷ್ಟವಾಗಿವೆ.
ಸುಮಾರು 555 ಕಿ.ಮೀ ರಸ್ತೆ ಹಾಗೂ 123 ಸೇತುವೆ,213 ಶಾಲೆ, 33 ಆರೋಗ್ಯ ಕೇಂದ್ರಗಳಿಗೆಹಾನಿವುಂಟಾಗಿದೆ.ಜಿಲ್ಲೆ ಯಲ್ಲೇ ಇರಿ: ಪ್ರವಾಹ ಹಿನ್ನೆಲೆಯಲ್ಲಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರುಭಾನುವಾರ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದುಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲೇವಾಸ್ತವ್ಯ ಹೂಡಿ ಪರಿಹಾರ ಕಾರ್ಯ ನೋಡಿಕೊಳ್ಳುವಂತೆಉಸ್ತುವಾರಿ ಸಚಿವರಿಗೆ ನಿರ್ದೇಶನ ನೀಡಿದ್ದಾರೆ.
ಶನಿವಾರ ಪ್ರವಾಹದಿಂದ ತೊಂದರೆಗೊಳಗಾಗಿರುವಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿಸಚಿವರ ಜತೆ ಮಾತನಾಡಿ ಮಾಹಿತಿ ಪಡೆದರು.ಪ್ರವಾಹ ಪೀಡಿತ ಜಿಲ್ಲಾಧಿಕಾರಿಗಳ ಜತೆ ನಿರಂತರಸಂಪರ್ಕ ಸಾಧಿಸಿ ತುರ್ತು ಪರಿಹಾರ ಕಾರ್ಯ,ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆ, ಆಶ್ರಯಕೇಂದ್ರಗಳ ಸ್ಥಾಪನೆಗಳ ಬಗ್ಗೆ ನಿಗಾವಹಿಸುವಂತೆ ಸೂಚಿಸಿದ್ದಾರೆ.
ಪ್ರವಾಹ ಸ್ಥಿತಿ ಎದು ರಿ ಸಲು ಸಜ್ಜು: ರಾಜ್ಯ ದಲ್ಲಿ ಪ್ರವಾಹಪರಿ ಸ್ಥಿತಿ ಎದು ರಿ ಸಲು ಸುಮಾರು 950 ಕೋಟಿ ರೂ.ಮೀಸ ಲಿ ರಿ ಸ ಲಾ ಗಿದ್ದು, ಪ್ರವಾಹ ಪೀಡಿತ ಪ್ರದೇ ಶ ಗ ಳಲ್ಲಿಬಳ ಸಿ ಕೊ ಳ್ಳಲು ಜಿಲ್ಲಾ ಧಿ ಕಾ ರಿ ಗ ಳಿಗೆ ಸೂಚನೆ ನೀಡ ಲಾಗಿದೆ ಎಂದು ಕಂದಾಯ ಸಚಿವ ಆರ್. ಅ ಶೋಕ್ ಹೇಳಿದ್ದಾ ರೆ.
ಸಂಪೂರ್ಣವಾಗಿ ಮನೆ ಹಾನಿಯಾದಸಂತ್ರಸ್ತರಿಗೆ 5 ಲಕ್ಷ ರೂ. ನೀಡಲಾಗುವುದು ಹಾಗೂತಾತ್ಕಾಲಿಕವಾಗಿ 10,000ರೂ. ಗಳನ್ನು ನೀಡಲಾಗುತ್ತದೆ.ಪೂರ್ಣ ಹಾನಿಗೊಂಡಿರುವ ಮನೆಗಳಿಗೆ ತಕ್ಷಣ ಒಂದುಲಕ್ಷ ರೂ ಬಿಡುಗಡೆ ಮಾಡಲು ಆಯಾ ಜಿಲ್ಲೆಗಳಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ ಎಂದರು.