ನಗರದಲ್ಲಿ ಶುಕ್ರ ವಾರಸುದ್ದಿಗಾರರೊಂದಿಗೆ ಮಾತನಾಡಿದ ಅವರು,2008ರಲ್ಲಿ ಪ್ರಾರಂಭವಾದ ಗುಜರಾತಿನ ಧೋಲೇರಾ ಸಿಟಿ ಪ್ರಾಜೆಕr… 2021 ಆದರೂ ಮುಗಿದಿಲ್ಲ.ಅಂತಹ ಯೋಜನೆಯ ಅಧ್ಯಯನಕ್ಕೆ ಸಚಿವ ಜಗದೀಶ್ ಶೆಟ್ಟರ್ ಹೋಗಿದ್ದಾರೆ.ಈಧೋಲೇರಾ ಸಿಟಿ ಪ್ರಾಜೆಕ್ಟ್ ನೋಡಲು ಗುಜರಾತ್‌ಗೆ ಹೋಗುವುದು ಬೇಕಾಗಿಲ್ಲ.
ಯೂಟ್ಯೂಬ್‌ನಲ್ಲಿ ನೋಡಿದರೆ ಸಾಕು, ಯಾವ ಸ್ಥಿತಿಯಲ್ಲಿಪ್ರಾಜೆಕr…ಇದೆಅಂತ ಗೊತ್ತಾಗುತ್ತದೆ. ನಮ್ಮ ರಾಜ್ಯದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳು ದೇಶಕ್ಕೆ ಮಾದರಿ ಯಾದ ಉದಾಹರಣೆಗಳಿವೆ.ಹೀಗಿರುವಾಗ, ಧೋಲೇರಾಸಿಟಿ ನೋಡಿ ಕರ್ನಾಟಕ ಕಟ್ಟಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದರು.ಧೋಲೇರಾ ಸಿಟಿ ಮುಕ್ತಾಯಕ್ಕೆ ಇನ್ನೂ ನೂರು ವರ್ಷಬೇಕು. ಹೀಗಾಗಿ, ಜಗದೀಶ್ ಶೆಟ್ಟರ್ ಗುಜರಾತ್ ಮಾದರಿಬಿಟ್ಟು ರಾಜ್ಯದಲ್ಲೇ ಉತ್ತಮ ಮಾದರಿ ನಿರ್ಮಿಸಲಿ ಎಂದ ಕುಮಾರಸ್ವಾಮಿ, ಧೋಲೇರಾ ಸಿಟಿ ಮಾಡಲ್ ನಮ್ಮರಾಜ್ಯಕ್ಕೆ ಅವಶ್ಯಕತೆ ಇಲ್ಲ. ನಮಗೆ ಬೇಕಾಗಿರೋದು ಜನರಬದುಕು ಬದಲು ಮಾಡಲು ಏನು ಮಾಡಬೇಕೋ ಅದನ್ನು ನೋಡಿ. ಶಿಕ್ಷಣ, ಆರೋಗ್ಯ,ಕೃಷಿ, ಉದ್ಯೋಗ ಸೃಷ್ಟಿಗೆ ಏನ್ ಮಾಡಬೇಕುಅಂತ ಇಲ್ಲಿಕುಳಿತು ಚರ್ಚೆ ಮಾಡಬೇಕು.
Advertisement
ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಧೋಲೇರಾ ಸಿಟಿ ಪ್ರಾಜೆಕ್ಟ್ ಇನ್ನೂ ಮುಗಿದಿಲ್ಲ.ಆಗಲೇ ಅಯೋಧ್ಯೆಯಲ್ಲಿ 10 ಸಿಟಿ ಘೋಷಣೆಮಾಡಿ¨ªಾರೆ. ಉತ್ತರ ಪ್ರದೇಶ ಚುನಾವಣೆ ಇರುವುದರಿಂದಬಿಜೆಪಿಯು ಆ ರಾಜ್ಯದಲ್ಲಿ3ಡಿ ತೋರಿಸುತ್ತಿದೆ.3ಡಿ ಯಲ್ಲಿಏನು ಬೇಕಾದ್ರು ತೋರಿಸಿಕೊಳ್ಳಬಹುದು.ಯಾವುದೇರಾಜ್ಯದ ಮಾದರಿ ಅಂತ ಹೋಗಿ ನಮ್ಮ ರಾಜ್ಯದ ಗೌರವಹಾಳು ಮಾಡುವುದು ಬೇಡ. ನಮ್ಮ ರಾಜ್ಯದಲ್ಲೇ ಉತ್ತಮಕಾರ್ಯಕ್ರಮ ಕೊಡುವವರು ಬೇಕಾದಷ್ಟು ಜನ ಇದ್ದಾರೆ.ಅವರನ್ನು ಬಳಕೆ ಮಾಡಿಕೊಂಡು ಕೆಲಸ ಮಾಡಲಿ ಎಂದೂಸಲಹೆ ಮಾಡಿದರು.