ದೇವನಹಳ್ಳಿ: ಕೆಆರ್‌ಎಸ್‌ಅಣೆಕಟ್ಟು ಬಿರುಕುಬಿಟ್ಟಿದೆಎನ್ನುವ ವಿಚಾರ ಕುರಿತುಸರ್ಕಾರ ಏನು ಹೇಳುತ್ತಿಲ್ಲ ಎಂದು ಮಾಧ್ಯಮಗಳಲ್ಲಿವರದಿಗಳಾಗುತ್ತಿವೆ.ನಾನುಹೇಳಿದ್ದೇನೆ. ನೀರಾವರಿಇಲಾಖೆ ಎಂಜಿನಿಯರ್‌ಸ್ಪಷ್ಟಪಡಿಸಿದ್ದಾರೆ.
ಕೆಆರ್‌ಎಸ್ ಅಣೆಕಟ್ಟುಸುರಕ್ಷಿತವಾಗಿದೆ. ಈ ಹಿಂದೆ ದುರಸ್ತಿ ಕಾರ್ಯಮಾಡಿದ್ದಾರೆ. ಈಗ ಬಿರುಕು ಉಂಟಾಗಿಲ್ಲ. ಈ ಬಗ್ಗೆನೀರಾವರಿ ತಜ್ಞರು ವರದಿ ಕೊಟ್ಟಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆಮಾತನಾಡಿ, ಈ ಬಗ್ಗೆ ಗಣಿ ಸಚಿವರು, ಸಂಬಂಧಪಟ್ಟ ಎಂಜಿನಿಯರುಗಳಿಂದ ಮಾಹಿತಿಪಡೆಯಲಾಗಿದೆ. ಈ ಬಗ್ಗೆ ಯಾವುದೇಅನುಮಾನಗಳಿದ್ದರೆ ಸರ್ಕಾರದೊಂದಿಗೆ ಚರ್ಚೆನಡೆಸಿ, ಪರಿಹರಿಸಿಕೊಳ್ಳಬೇಕು. ಆದರೆ, ಇದೇವಿಚಾರವನ್ನು ಮುಂದಿಟ್ಟುಕೊಂಡು ದೊಡ್ಡ ವಿಷಯಮಾಡುವುದು ಬೇಡ ಎಂದು ಸಂಸದೆ ಸುಮಲತಾಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿಮಾಡುತ್ತೇನೆ ಎಂದು ಹೇಳಿದರು.
ರೈತರು, ಸಾಮಾನ್ಯರಿಗೆ ಆತಂಕ: ಕೆಆರ್‌ಎಸ್‌ಅಣೆಕಟ್ಟು ಬಗ್ಗೆ ಮಾತನಾಡಬಾರದು. ಅಣೆಕಟ್ಟುಕೆಳಭಾಗದಲ್ಲಿ ವಾಸ ಮಾಡುವಂತಹ ರೈತರು,ಜನಸಾಮಾನ್ಯರಿಗೆ ಆತಂಕವಾಗುತ್ತದೆ. ಅಣೆಕಟ್ಟುಬಿರುಕು ಬಿಟ್ಟಿದ್ದರೆ ಸರ್ಕಾರ ಹೇಳಬೇಕು. ಬೇರೆಯಾರೂ ಮಾತನಾಡಬಾರದು. ಈ ಬಗ್ಗೆ ಅವರಿಗೆಸಂಶಯಗಳಿದ್ದರೆ, ನೀರಾವರಿ ಇಲಾಖೆಯಿದೆ.ಐಎಎಸ್ ಅಧಿಕಾರಿಗಳಿದ್ದಾರೆ. ಸರ್ಕಾರವಿದೆ. ಬಂದು ತಿಳಿದುಕೊಂಡು ಅನುಮಾನಗಳು ಬಗೆ ಹರಿಸಿಕೊಳ್ಳಲಿ.
ಬೇರೆ ಅಜೆಂಡಾ ಇಟ್ಟುಕೊಂಡುಇಬ್ಬರ ನಡುವೆ ವಾಕ್ಸಮರ ಶುರುವಾಗಿದೆ. ತಕ್ಷಣಕ್ಕೆನಿಲ್ಲುವ ಸೂಚನೆಗಳು ಕಾಣಿಸುತ್ತಿಲ್ಲ. ಈವಿಚಾರವನ್ನು ಇಲ್ಲಿಗೆ ಬಿಟ್ಟುಬಿಡುವಂತೆ ಇಬ್ಬರಿಗೂ ಮನವಿ ಮಾಡುತ್ತೇನೆ ಎಂದರು.ಇದನ್ನು ರಾಜಕೀಯವಾಗಿ ಮಾಡಬಾರದು. ಯಾರ ಮನಸ್ಸಿಗೂ ನೋವುಂಟು ಮಾಡುವಕೆಲಸವಾಗಬಾರದು. ಮಂಡ್ಯ, ಮೈಸೂರು,ಬೆಂಗಳೂರಿಗೆ ಇದು ಜೀವನದಿಯಾಗಿದೆ. ತಜ್ಞರುಮಾತ್ರ ಈ ಬಗ್ಗೆ ಮಾತನಾಡಲಿಕ್ಕೆ ಅಧಿಕಾರವಿದೆ.ಬೇರೆ ಯಾರೂ ಮಾತನಾಡಬಾರದು. ಇದುಅಣೆಕಟ್ಟು ವಿಚಾರವನ್ನು ಇಟ್ಟುಕೊಂಡುಶುರುವಾಗಿದ್ದು, ಹಿಂದಿನ ಲೋಕಸಭಾಚುನಾವಣೆಯ ಹಿನ್ನೆಲೆ ಅಷ್ಟೆ ಎಂದರು.