Advertisement

ಪಾದಚಾರಿ ಮಾರ್ಗ ತೆರವಿಗೆ ಕ್ರಮ

06:10 PM Jul 11, 2021 | Team Udayavani |

ಬೆಂಗಳೂರು: ಪಾರ್ಕಿಂಗ್‌ ಸಮಸ್ಯೆದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜತೆಗೆಪಾದಚಾರಿ ಮಾರ್ಗ ತೆರವುಗೊಳಿಸಬೇಕು ಎಂದು ನೂರಾರು ಮಂದಿಸಾರ್ವಜನಿಕರು ನಗರ ಪೊಲೀಸ್‌ಆಯುಕ್ತ ಕಮಲ್‌ ಪಂತ್‌ ಅವರಿಗೆಮನವಿ ಮಾಡಿದರು.

Advertisement

ಸಂಚಾರ ಸಂಪರ್ಕ ದಿವಸ್‌ ಹಿನ್ನೆಲೆಯಲ್ಲಿ ಶನಿವಾರ ಬಸವನಗುಡಿ ಸಂಚಾರಠಾಣೆ ವ್ಯಾಪ್ತಿಯ ನ್ಯಾಷನಲ್‌ ಕಾಲೇಜುಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಸಾರ್ವಜನಿಕರುತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಪಾದಚಾರಿ ಮಾರ್ಗಗಳಲ್ಲಿ ತಳ್ಳುಗಾಡಿ ವ್ಯಾಪಾರಿಗಳು ಇರುತ್ತಾರೆ. ಅದರಿಂದ ಓಡಾಡಲು ಸಾಧ್ಯವಾಗುತ್ತಿಲ್ಲ.ಮನೆ, ಕಚೇರಿಗಳ ಮುಂದೆ ಅಪರಿಚಿತವ್ಯಕ್ತಿಗಳು ವಾಹನಗಳ ಪಾರ್ಕಿಂಗ್‌ಮಾಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ರಸ್ತೆನಿಮ್ಮದ ಎಂದೆಲ್ಲ ಪ್ರಶ್ನಿಸುತ್ತಾರೆ. ರಸ್ತೆಕಾಮಗಾರಿಗಳಿಂದ ಸಂಚಾರ ದಟ್ಟಣೆಅಧಿಕವಾಗಿದ್ದು, ಅದಕ್ಕೆ ಪರ್ಯಾಯಮಾರ್ಗ ಸೂಚಿಸಬೇಕು. ಹೀಗೆ ಹತ್ತಾರುಪ್ರಶ್ನೆಗಳನ್ನು ಆಯುಕ್ತರ ಮುಂದಿಟ್ಟರು.ಅದಕ್ಕೆ ಉತ್ತರಿಸಿದ ಪೊಲೀಸ್‌ಆಯುಕ್ತ ಕಮಲ್‌ ಪಂತ್‌, ಪಾದಚಾರಿಮಾರ್ಗ ತೆರವುಗೊಳಿಸುವ ಬಗ್ಗೆ ಈಗಾಗಲೇ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ.

ಮುಂದಿನ ದಿನಗಳಲ್ಲಿ ಜಂಟಿಯಾಗಿ ತೆರವು ಕಾರ್ಯ ನಡೆಯಲಿದೆ.ನಗರದಲ್ಲಿ ಪಾರ್ಕಿಂಗ್‌ ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಬಿಬಿಎಂಪಿ ಹಾಗೂಸಂಬಂಧಿಸಿದ ಇಲಾಖೆಗೆ ಜತೆ ಆಗಾಗ್ಗೆಚರ್ಚೆ ನಡೆಸಲಾಗುತ್ತಿದ್ದು, ಸದ್ಯದಲ್ಲೇಪರಿಹಾರಕಂಡುಕೊಳ್ಳಲಾಗುತ್ತದೆ. ಇನ್ನುನಗರದಲ್ಲಿ ರಸ್ತೆ ಹಾಗೂ ಇತರೆ ಕಾಮಗಾರಿಗಳು ನಡೆಯುತ್ತಿದ್ದರಿಂದ ಸಂಚಾರದಟ್ಟಣೆ ಹೆಚ್ಚಾಗಿರುವ ಬಗ್ಗೆ ದೂರುಗಳುಬಂದಿವೆ.

ಆದಷ್ಟು ಬೇಗನೆ ಕಾಮಗಾರಿಪೂರ್ಣಗೊಳಿಸುವಂತೆ ಸಂಬಂಧಿಸಿದಬಿಬಿಎಂಪಿ ಹಾಗೂ ಇತರೆ ಇಲಾಖೆಗೆಸೂಚಿಸಲಾಗಿದೆ ಎಂದು ಆಯುಕ್ತರುಉತ್ತರಿಸಿದರು.ಪಶ್ಚಿಮ ಸಂಚಾರ ವಿಭಾಗ ಡಿಸಿಪಿಕುಲದೀಪ್‌ ಕುಮಾರ್‌ ಜೈನ್‌, ದಕ್ಷಿಣವಿಭಾಗ ಡಿಸಿಪಿ ಹರೀಶ್‌ ಪಾಂಡೆ ಹಾಗೂಇತರೆ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next