ಬೆಂಗಳೂರು: ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಬೆಂಗಳೂರಿಗೆ ಆಗಮಿಸಿದಾಗ ಅವರ ಅಭಿಮಾನಿಗಳುಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯವಿಮಾನ ನಿಲ್ದಾಣಕ್ಕೆ ಶುಕ್ರವಾ ಸಂಜೆ ಆಗಮಿಸುತ್ತಿದ್ದಂತೆಸಾವಿರಾರು ಅವರ ಬೆಂಬಲಿಗರು ಅವರಿಗೆ ಹೂ ಮಾಲೆಹಾಕಿ ಸ್ವಾಗತಿಸಿದರು. ಸದಾನಂದಗೌಡರೆ ನಾವು ನಿಮ್ಮಜೊತೆಗಿದ್ದೇವೆ ಎನ್ನುವ ಫಲಕಗಳನ್ನು ಕಾರ್ಯಕರ್ತರುಪ್ರದರ್ಶನ ಮಾಡಿದರು.ವಿಮಾನ ನಿಲ್ದಾಣದಿಂದ ತಮ್ಮ ನಿವಾಸಕ್ಕೆ ಆಗಮಿಸಿದಸದಾನಂದಗೌಡರು ನಾನು ಪಕ್ಷದ ನಿಷ್ಠಾವಂತಕಾರ್ಯಕರ್ತ ರಾಷ್ಟ್ರೀಯ ಅಧ್ಯಕ್ಷರು ನನ್ನನ್ನು ಪಕ್ಷಕ್ಕೆತೊಡಗಿಸಿಕೊಳ್ಳುತ್ತೇವೆ ಎಂದು ಕರೆ ಮಾಡಿ ಹೇಳಿದ್ದಾರೆ.
ಹಾಗಾಗಿ ಸಂತೋಷದಿಂದ ನಾನು ಸಚಿವ ಸ್ಥಾನಕ್ಕೆರಾಜೀನಾಮೆ ನೀಡಿ ಬಂದಿದ್ದೇನೆ. ಮುಂದೆ ಪಕ್ಷಸಂಘಟನೆಯೇ ನನ್ನ ಗುರಿ. ಹಿರಿಯರು ಏನುಹೇಳ್ತಾರೋ ಹಾಗೆ ನಡೆಯುತ್ತೇನೆ. ಇಂದು ನನ್ನಕಾರ್ಯಕರ್ತರು ಇಟ್ಟಿರುವ ಅಭಿಮಾನವನ್ನುತೋರಿಸಿದೆ. ಕಳೆದ 27 ವರ್ಷಗಳಿಂದ ನಾನುಜವಾಬ್ದಾರಿಯಲ್ಲಿದ್ದೇನೆ. ಪಕ್ಷದ ಸಂಘಟನೆಗೆ ಬೇಕುಅಂತಾದಾಗ ಹಿಂದೆಯೂ ನನ್ನನ್ನು ಪಕ್ಷ ಬಳಸಿಕೊಂಡಿದೆ.ನಿಮ್ಮನ್ನು ಪಕ್ಷಕ್ಕೆ ಬಳಸಿಕೊಳ್ಳುತ್ತೇವೆ ಅಂತಾ ಜೆ.ಪಿ. ನಡ್ಡಾಹೇಳಿದ್ದಾರೆ.
ಇದನ್ನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆಎಂದರು.ರಾಜ್ಯದ ಬಗ್ಗೆ ಅಂತಾ ಹೇಳಿಲ್ಲ ಕಾಶ್ಮೀರದಿಂದಕನ್ಯಾಕುಮಾರಿ ವರೆಗೆ ಅಸ್ಸಾಂನಿಂದ ಗುಜರಾತ್ ವರೆಗೆಎಲ್ಲಾ ಕಡೆ ಬಿಜೆಪಿ ಇರುವ ಸಂದರ್ಭದಲ್ಲಿ ಪಕ್ಷ ನನ್ನಉಪಯೋಗ ಮಾಡಬಹುದು ಎಂದು ನನ್ನ ಅನಿಸಿಕೆ.ಪಕ್ಷಕ್ಕಾಗಿ ಅಥವಾ ಸರ್ಕಾರಕ್ಕಾಗಿ ಯಾವುದನ್ನೂ ನಾನುಅಪೇಕ್ಷೆ ಮಾಡಲಿಲ್ಲ ನಿರೀಕ್ಷೆಯೂ ಮಾಡಲಿಲ್ಲ, ಕನಸೂಕಾಣಲಿಲ್ಲ.
ಮುಂದಿನ ಸಿಎಂ ಎಂಬ ಘೋಷಣೆಕಾರ್ಯಕರ್ತರ ಮನಸ್ಸಿನ ಭಾವನೆ. ಅದರ ಬಗ್ಗೆ ನಾನುಹೆಚ್ಚು ಹೇಳುವುದಿಲ್ಲಒಬ್ಬ ಪ್ರೀತಿಯಕಾರ್ಯಕರ್ತ ನನ್ನ ನಾಯಕ ದೊಡ್ಡಹುದ್ದೆಗೆ ಹೋಗಬೇಕು ಎಂದು ಭಾವಿಸುವುದು ಅವನಮನಸ್ಸಿನ ಭಾವನೆ, ಅದು ಪ್ರಚೋದನೆಯಿಂದ ಅಲ್ಲ.ನಾನು ಮಂತ್ರಿಯಾಗಿದ್ದರೂ ನನ್ನ ಕ್ಷೇತ್ರದ ಪ್ರತಿವಿಧಾನಸಭಾ ಕ್ಷೇತ್ರಕ್ಕೆ ನೂರಕ್ಕೂ ಹೆಚ್ಚು ಬಾರಿಹೋಗಿದ್ದೇನೆ. ಮುಂದಿನ ಅವಕಾಶದ ಬಗ್ಗೆ ನಾನೇನುಹೇಳುವಂತಹದ್ದು ಇಲ್ಲ. ಹಿರಿಯರ ಅಪೇಕ್ಷೆಯಂತೆನಡೆದುಕೊಂಡು ಹೋಗುತ್ತೇನೆ. ನಾನು ಸಿಎಂಆಗುವಾಗ, ಕೇಂದ್ರ ಸಚಿವನಾದಾಗ, ರಾಜ್ಯಾಧ್ಯಕ್ಷನಾದಾಗ ನನಗೇನೂ ಆಸಕ್ತಿ ಇರಲಿಲ್ಲ ಎಂದು ಹೇಳಿದರು.
ಇದಕ್ಕೂ ಮೊದಲು ಕಾರ್ಯಕರ್ತರನ್ನು ಉದ್ದೇಶಿಸಿಮಾತನಾಡಿದ ಅವರು, ಅಧಿಕಾರ ಕಳೆದುಕೊಂಡುಬಂದ ಬಳಿಕವೂ ನನ್ನನ್ನು ನೀವು ಸ್ವೀಕಾರ ಮಾಡಿದ ರೀತಿನೋಡಿದರೆ ನಾನೆಷ್ಟು ಪುಣ್ಯವಂತ ಅಂತಾ ಗೊತ್ತಾಗುತ್ತದೆ. ಏರ್ ಪೋರ್ಟ್‌ನಲ್ಲಿ ಸೇರಿದ್ದ ಜನ ನೋಡಿ ನನ್ನಕಣ್ಣಲ್ಲಿ ಆನಂದಭಾಷ್ಪ ಬರುವಂತಾಯ್ತು. ಆನಂದಭಾಷ್ಟಬಂದರೂ ಸದಾನಂದ ಗೌಡ ಅತ್ತುಬಿಟ್ಟರು ಅಂತಾಬರುತ್ತದೆ ಅಂತಾ ನನ್ನಷ್ಟಕ್ಕೆ ಉಳಿದೆ. ಕಳೆದ ಏಳುವರ್ಷದಲ್ಲಿ ಕ್ಷೇತ್ರದ ಪ್ರತಿ ಕಾರ್ಯಕರ್ತನಿಗೆ ಸಿಕ್ಕಿದ್ದೇನೆ.ಯಾರಲ್ಲೂ ದೊಡ್ಡ ಜಗಳ ಮಾಡಿಕೊಂಡಿಲ್ಲ. ಮುಂದಿನಬಾರಿ ಏಳು ಕ್ಷೇತ್ರದಲ್ಲೂ ಬಿಜೆಪಿ ಶಾಸಕರು ಗೆಲ್ಲುವಂತಾಗಬೇಕು. ನನ್ನ ಮೇಲೆ ಬರಬಹುದಾದ ಕಳಂಕಗಳ ಬಗ್ಗೆನಾನು ವಿಚಲಿತನಾಗಲ್ಲ. ಪಕ್ಷ ಸಂಘಟನೆಯಲ್ಲಿ ಇರುವಸಣ್ಣ ಪುಟ್ಟ ವ್ಯತ್ಯಾಸಗಳನ್ನು ಮೆಟ್ಟಿ ನಿÇÉೋಣ.ಬೆಂಗಳೂರು ಉತ್ತರ ಕ್ಷೇತ್ರ ಬಿಜೆಪಿಯ ಶಾಶ್ವತ ಕ್ಷೇತ್ರಎಂದು ಮತ್ತೆ ತೋರಿಸಿ ಕೊಡೋಣ ಮತ್ತೆ ಯಶಸ್ವಿಬಿಜೆಪಿ ಕಟ್ಟುವಕೆಲಸ ಮಾಡೋಣಎಂದು ಹೇಳಿದರು.