Advertisement

ಮುಂದಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಲಿದೆ

04:54 PM Jul 05, 2021 | Team Udayavani |

ಬೆಂಗಳೂರು: ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕೋವಿಡ್‌ 3ನೇ ಅಲೆಯಲ್ಲಿ ಸಾಕಷ್ಟುಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿದ್ದು, ಈ ಹಂತದಲ್ಲಿ ವೈದ್ಯಕೀಯ ಉದ್ದೇಶದಿಂದರಕ್ತದ ಅವಶ್ಯಕತೆ ಹೆಚ್ಚಾಗಲಿದೆ ಎಂದು ಮಹಾತ್ಮಗಾಂಧಿ ಸೇವಾ ಟ್ರÓr… ವಿನಯ್‌ ಗುರೂಜಿಅಭಿಪ್ರಾಯಪಟ್ಟರು.

Advertisement

ವೈಟ್‌ಫೀಲ್ಡ್‌ನ ಫಿನಿಕÕ… ಮಾರುಕಟ್ಟೆ ಸಮೀಪಭಾನುವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆಚಾಲನೆ ನೀಡಿ ಮಾತನಾಡಿದ ಅವರು, ಕೊರೊನಾ3ನೇ ಅಲೆ ಸಂದರ್ಭದಲ್ಲಿ ರಕ್ತದಾನ ಮಾಡಲುಸಾಕಷ್ಟು ಸಮಸ್ಯೆಗಳು ಎದುರಾಗಲಿದೆ. ವೈದ್ಯಕೀಯಉದ್ದೇಶದಿಂದ ರಕ್ತದಾನದ ಮಹತ್ವದ ಬಗ್ಗೆ ಅರಿವುಮೂಡಿಸಲು ಮುಂದಾಬೇಕು ಎಂದರು.ಮೊದಲ ಅಲೆ ಸಂದರ್ಭದಲ್ಲಿ ವೈದ್ಯಕೀಯಮೂಲಸೌಕರ್ಯದ ಸಮಸ್ಯೆ ಎದುರಾಗಿತ್ತು.

2ನೇ ಅಲೆ ಕಾಲದಲ್ಲಿ ಆಮ್ಲಜನಕಕ್ಕೆ ತೀವ್ರ ಅಭಾವಸೃಷ್ಟಿಯಾಗಿತ್ತು. 3ನೇ ಅಲೆ ಸಂದರ್ಭದಲ್ಲಿ ರಕ್ತದಕೊರತೆ ಸೇರಿ ಇನ್ನೂ ಹಲವಾರು ಸಮಸ್ಯೆಗಳುಎದುರಾಗುವ ಸಂಭವವಿದೆ ಎಂದು ಹೇಳಿದರು.3ನೇ ಅಲೆ ನಿಯಂತ್ರಣಕ್ಕೆ ಮಹಾತ್ಮ ಗಾಂಧಿಸೇವಾ ಟ್ರಸ್ಟ್‌ನಿಂದ ಹಲವಾರು ಮುನ್ನೆಚ್ಚರಿಕಾಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೊರೊನಾ ದಿಂದಪೋಷಕರನ್ನು ಕಳೆದುಕೊಳ್ಳುವ ಮಕ್ಕಳ ರಕ್ಷಣೆಗೆವಿಶೇಷ ಗಮನ ಹರಿಸಲಾಗುತ್ತಿದೆ. ಯಾರೂಅನಾಥರಲ್ಲ ಎನ್ನುವ ಅಭಿಯಾನ ಆರಂಭಿಸಲಾಗುತ್ತಿದೆ.ಇಂಥಮಕ್ಕಳನ್ನುದತ್ತು ಪಡೆದು ಪಾಲನೆಪೋಷಣೆ ಮಾಡಲಾಗುವುದು ಎಂದು ಹೇಳಿದರು.

ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂಟಿಬಿನಾಗರಾಜ್‌, ಕರ್ನಾಟಕ ಕರಕುಶಲ ಅಭಿವೃದ್ಧಿನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರಶೆಟ್ಟಿಅವರು ಪೌರ ಕಾರ್ಮಿಕರಿಗೆಉಚಿತಆರೋಗ್ಯತಪಾಸಣೆ ಹಾಗೂ ದಿನಸಿ ಕಿಟ್‌ ವಿತರಿಸಿದರು.ವಿನಯ್‌ ಗುರೂಜಿ ಸಾಥ್‌ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next