ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೆಸರಿನಲ್ಲಿ ಕೋಟ್ಯಂತರರೂ. ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರಆಪ್ತ ಸಹಾಯಕ ರಾಜಣ್ಣ(35) ಅವರನ್ನು ಆಡುಗೋಡಿಯ ಟೆಕ್ನಿಕಲ್ ಸೆಂಟರ್‌ನಲ್ಲಿ ವಿಚಾರಣೆನಡೆಸಿ ಕಳುಹಿಸಲಾಗಿದೆ.
ಸಣ್ಣ ನೀರಾವರಿ ಇಲಾಖೆಯಲ್ಲಿನ ಗುತ್ತಿಗೆಕೊಡಿಸುವ ಸಂಬಂಧ ರಾಜಣ್ಣ ನಡೆಸಿದ್ದಾರೆಎನ್ನಲಾದ ಡೀಲ್ ಸಂಬಂಧ ಮೊಬೈಲ್‌ನಲ್ಲಿನಡೆಸಿರುವ ಸಂಭಾಷಣೆಯ ಮೂರು ಆಡಿಯೊಲಭ್ಯವಾಗಿದೆ ಎಂದುಹೇಳಲಾಗಿದೆ.ಈ ಆಡಿಯೊಗಳಲ್ಲಿ ಕೋಡ್ ಪದಗಳನ್ನು ಬಳಸಿ ಡೀಲ್‌ಮಾತುಕತೆ ನಡೆದಿದೆ.
ಈ ಆಡಿಯೊದಲ್ಲಿ ಇರುವಧ್ವನಿ ರಾಜಣ್ಣ ಅವರದ್ದೆ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳಲು ರಾಜಣ್ಣ ಅವರ ಧ್ವನಿಸ್ಯಾಂಪಲ್ ಪಡೆದು,ಆ ಧ್ವನಿಯನ್ನುವಿಧಿವಿಜ್ಞಾನಪ್ರಯೋಗಾಲಕ್ಕೆಕಳುಹಿಸಲಾಗಿದೆ. ಅಲ್ಲದೆ, ಮತ್ತೂಮ್ಮೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಡಿಯೊ ಕ್ಲಿಪ್ನಲ್ಲಿ ಏನಿದೆ?: ಮೂರುಆಡಿಯೊ ಕ್ಲಿಪ್ ದೊರೆತಿದ್ದು, ಅವುಗಳನ್ನು ಸಿಸಿಬಿಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ನೀರಾವರಿ ಇಲಾಖೆಯ ಗುತ್ತಿಗೆ ನೀಡುವವಿಚಾರದಲ್ಲಿ ಗುತ್ತಿಗೆದಾರನ ಜತೆ ನಡೆಸಿರುವ ಒಂದು ಆಡಿಯೊದಲ್ಲಿ 75 ಲಕ್ಷ ರೂ.ಗೆ ಬೇಡಿಕೆ ಇಡಲಾಗಿದೆ.
ಎರಡನೇ ಆಡಿಯೊದಲ್ಲಿ ಒಂದುಕೋಟಿ ಹಾಗೂ ಮೂರನೇ ಆಡಿಯೊದಲ್ಲಿಮೂರು ಕೋಟಿ ರೂ. ಹಣ ಕೇಳಲಾಗಿದೆ. ಒಟ್ಟು4.75ಕೋಟಿ ರೂ.ಗೆ ಡೀಲ್ ನಡೆದಿರುವುದು ಈಆಡಿಯೊದಲ್ಲಿ ಇದೆ ಎಂದು ಹೇಳಲಾಗಿದೆ.
ಮತ್ತೂಂದೆಡೆ ರಾಜಣ್ಣ ವಿಚಾರಣೆ ಬಳಿಕವೈರಲ್ ಆಗಿರುವ ಆಡಿಯೊದಲ್ಲಿರುವುದು ನನ್ನಧ್ವನಿ ಅಲ್ಲ. ನಾನು ಯಾವುದೇ ಅವ್ಯವಹಾರದಲ್ಲಿಭಾಗಿಯಾಗಿಲ್ಲ ಎಂದು ಫೇಸ್‌ಬುಕ್ ಮೂಲಕಹೇಳಿಕೊಂಡಿದ್ದಾರೆ.ತಮ್ಮ ಹೆಸರಿನಲ್ಲಿ ವಂಚನೆ ಮಾಡುತ್ತಿರುವುದುಬೆಳಕಿಗೆ ಬಂದ ಕೂಡಲೇ ವಿಜಯೇಂದ್ರ ಅವರುಆಡಿಯೊ ಕ್ಲಿಪ್‌ಗ್ಳ ಸಮೇತ ಜೂ. 28ರಂದುಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರುನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆನಡೆಸಿ ಸಿಸಿಬಿ ಪೊಲೀಸರು ಶ್ರೀರಾಮುಲು ಆಪ್ತಸಹಾಯಕ ರಾಜಣ್ಣನನ್ನು ಜುಲೈ 1ರಂದು ವಶಕ್ಕೆಪಡೆಯಲಾಗಿತ್ತು.