ನೆಲಮಂಗಲ: ರೈತರಿಗೆ ಬೆಳೆ ನಷ್ಟವಾದರೇಆರ್ಥಿಕ ಭದ್ರತೆಯನ್ನು ನೀಡುವುದು ಬೆಳೆವಿಮೆ ಮಾತ್ರ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು.
ನಗರದ ತಾಪಂ ಆವರಣದಲ್ಲಿ ಕೃಷಿಇಲಾಖೆ ಹಾಗೂ ವಿವಿಧ ಇಲಾಖೆಯಿಂದನಡೆದ ಕೃಷಿ ಅಭಿಯಾನದ ರಥಯಾತ್ರೆಗೆಚಾಲನೆ ನೀಡಿ ಮಾತನಾಡಿ, ರೈತರು ರಾಗಿಬೆಳೆಗೆ ಎಕರೆಗೆ 300 ರೂ. ಹಣ ಪಾವತಿಮಾಡಿ, 15ರಿಂದ 20ಸಾವಿರ ಹಣವನ್ನುಪಡೆಯಬಹುದಾಗಿದೆ.
2021ರ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿಫಸಲ್ ಬಿಮಾ ಯೋಜನೆಯ ಮೂಲಕಪ್ರತಿ ರೈತರು ತಾವು ಬೆಳೆಯುವ ರಾಗಿ, ಭತ್ತ,ಜೋಳ, ತೊಗರಿ ಸೇರಿದಂತೆ ವಿವಿಧ ಬೆಳೆಗಳಿಗೆ ವಿಮೆ ಕಡ್ಡಾಯವಾಗಿ ಮಾಡಿಸಬೇಕು. ಮಾನವರು ಆರೋಗ್ಯ ವಿಮೆ ಮಾಡಿಸಿದಂತೆ ಪ್ರತಿ ರೈತರು ಸಂಕಷ್ಟಕ್ಕೆ ಸ್ಪಂದಿಸುವ ಬೆಳೆವಿಮೆ ಮಾಡಿಸಬೇಕು ಎಂದರು.
ರೈತರಿಗೆ ಉತ್ತಮವಾಗಿ ಸ್ಪಂದಿಸಿ: ತಾಪಂಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಬಿ.ರಂಗನಾಥ್‌ಮಾತನಾಡಿ, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಅನೇಕ ಸೌಲಭ್ಯವನ್ನುಇಲಾಖೆಯಿಂದ ನೀಡಲಾಗುತ್ತಿದೆ. ರೈತರುರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿಸೌಲಭ್ಯ ಪಡೆದುಕೊಳ್ಳಬೇಕು. ರೈತರಿಗೆ ಸರಕಾರ ಹೆಚ್ಚಿನ ಸಹಕಾರ ನೀಡಬೇಕು.
ರೈತರಿಗೆಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಬೇಕುಎಂದು ಹೇಳಿದರು.ಗ್ರಾಮಗಳ ರೈತರಿಗೆ ಮಾಹಿತಿ: ಕೃಷಿಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಮಾತನಾಡಿ, ಕೊರೊನಾ ಸಮಯದಲ್ಲಿ ಆರಂಭವಾಗಿರುವಕೃಷಿ ಅಭಿಯಾನದ ರಥಯಾತ್ರೆ ಮೂಲಕ ಜು.9ರವರೆಗೂಗ್ರಾಪಂ ಮಟ್ಟದಲ್ಲಿ ಪ್ರತಿ ಗ್ರಾಮಗಳ ರೈತರಿಗೆಮಾಹಿತಿ ನೀಡಲಾಗುತ್ತದೆ. ಮೀನುಗಾರಿಕೆ,ರೇಷ್ಮೆ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ಸಮನ್ವಯ ಇಲಾಖೆಗಳ ಸೌಲಭ್ಯಗಳನ್ನು ರೈತರಿಗೆ ತಿಳಿಸಲಾಗುತ್ತದೆ ಎಂದರು.
ಫಸಲ್ ಬಿಮಾ ಯೋಜನೆ ಮಾಹಿತಿಹಾಗೂ ಸಮನ್ವಯ ಇಲಾಖೆಯ ಕೃಷಿ ಪತ್ರವನ್ನು ಶಾಸಕ ಶ್ರೀನಿವಾಸಮೂರ್ತಿ ಬಿಡುಗಡೆಮಾಡಿದರು. ತಹಶೀಲ್ದಾರ್ ಮಂಜುನಾಥ್,ಇಒ ಮೋಹನ್‌ಕುಮಾರ್,ಕೃಷಿ ಸಮಾಜದಅಧ್ಯಕ್ಷ ಸಿದ್ದಪ್ಪ, ಭಾರತೀಯ ಕಿಸಾನ್‌ಸಂಘದ ಅರುಣ್ ಕುಮಾರ್, ನಾಗೇಶ್,ಸಹಾಯಕ ನಿರ್ದೇಶಕರಾದ ರಾಘವೇಂದ್ರ,ಸುಬ್ರಹ್ಮಣ್ಯ, ಸಿದ್ದಪ್ಪ ಉಪಸ್ಥಿತರಿದ್ದರು.