Advertisement

ಬೆಲೆ ಏರಿಕೆಗೆ ಜೆಡಿಎಸ್‌ ಖಂಡನೆ

06:18 PM Jun 23, 2021 | Team Udayavani |

ದೊಡ್ಡಬಳ್ಳಾಪುರ: ಪೆಟ್ರೋಲ್ , ಡಿಸೇಲ್‌ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ,ತಾಲೂಕು ತಹಶೀಲ್ದಾರ್‌ ಹಾಗೂ ಜಿಲ್ಲಾಆಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಅಧಿಕಾರಕ್ಕೆ ಬರುವಾಗಜನರಿಗೆ ನೀಡಿದ್ದ ಎಲ್ಲಾ ಭರವಸೆಗಳಿಗೂ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಸಾಮಾನ್ಯರ ಬದುಕು ದುಸ್ಥರವಾಗುವಂತೆಮಾಡಿರುವ ಕೀರ್ತಿ ಸರ್ಕಾರಕ್ಕೆ ಸಲ್ಲುತ್ತದೆ.ಸುಳ್ಳು ಭರವಸೆ ನೀಡಿವುದರಲ್ಲಿ ಬಿಜೆಪಿ ಮುಖಂಡರು ಮುಂದಿದ್ದಾರೆ.

Advertisement

ದೇಶವನ್ನು ಆರ್ಥಿಕವಾಗಿ ಮುಂದೆ ತೆಗೆದುಕೊಂಡು ಹೋಗುವುದಕ್ಕೆ ಅಲ್ಲ ಎಂದುಆರೋಪಿಸಿದರು.ಸಾಮಾನ್ಯರ ಬದುಕು ಸಂಕಷ್ಟ:ಪೆಟೊ›àಲ್‌ ಬೆಲೆ ಹತ್ತು ಪೈಸೆ ಏರಿಕೆಯಾದರು ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಬಿಜೆಪಿ ಮುಂದಾಳುಗಳು ಈಗ ಕಾಣೆಯಾಗಿದ್ದಾರೆ. ಇಂದು ಜನಜೀವನದಬದುಕಿನ ಒಂದು ಭಾಗವೇ ಆಗಿರುವ ತೈಲಬೆಲೆ ಏರಿಕೆಯಾದರೆ ಪ್ರತಿಯೊಂದುವಸ್ತುಗಳ ಬೆಲೆಯು ತಾನಾಗಿಯೇ ಏರಿಕೆಯಾಗುತ್ತ ಹೋಗುತ್ತವೆ. ಲಾಕ್‌ಡೌನ್‌ಜಾರಿಯಿಂದ ಜನ ಸಾಮಾನ್ಯರ ಬದುಕುಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿಯೇಬೆಲೆ ಏರಿಕೆಯು ಜನರ ಬದುಕು ಮತ್ತಷ್ಟು ದುಸ್ಥರವಾಗುವಂತೆ ಮಾಡಿದೆ ಎಂದರು.

ಜೆಡಿಎಸ್‌ ನಗರ ಘಟಕದ ಅಧ್ಯಕ್ಷವಡ್ಡರಹಳ್ಳಿ ರವಿ, ಪ್ರಧಾನ ಕಾರ್ಯದರ್ಶಿನಾಗರಾಜ…, ಕಾರ್ಯಾಧ್ಯಕ್ಷ ಆರ್‌.ಕೆಂಪರಾಜ್‌, ಟಿಎಪಿಎಂಸಿಎಸ್‌ ಉಪಾಧ್ಯಕ್ಷೆಚಂದ್ರಕಲಾ ಮಂಜುನಾಥ್‌, ನಿರ್ದೇಶಕಕೆ.ಸಿ.ಲಕ್ಷ್ಮೀನಾರಾಯಣ, ಆಂಜನಗೌಡ,ಜೆಡಿಎಸ್‌ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುನಿಲ…, ತಾಲೂಕು ಘಟಕದ ಮಂಜುನಾಥ್‌, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆದೇವರಾಜಮ್ಮ,ಮುಖಂಡರಾದ ತರಿದಾಳ್‌ಶ್ರೀನಿವಾಸ್‌, ತಳವಾರ್‌ನಾಗರಾಜ…,ಶಿವಕುಮಾರ್‌, ಮನೋಹರ್‌, ವಿನಯ…,ಹನುಮಂತು, ಶ್ರೀನಿವಾಸ್‌, ಮುತ್ತೂರುಮೂರ್ತಿ, ದೊvಬೆಳx ‌ವಂಗಲ ಹೋಬಳಿಅಧ್ಯಕ್ಷ ಸತೀಶ್‌ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next