Advertisement

ಕವಿ ಸಿದ್ಧಲಿಂಗಯ್ಯರ ಹೆಸರು ಚಿರಸ್ಥಾಯಿ

06:30 PM Jun 22, 2021 | Team Udayavani |

ಬೆಂಗಳೂರು: ದಲಿತ ಚಳವಳಿಗೆ ಹೊಸ ವೇಗ ಮತ್ತು ಹೊಸಸ್ಪರ್ಶ ನೀಡಿದ ಶ್ರೇಯಸ್ಸು ಕವಿ ಸಿದ್ದಲಿಂಗಯ್ಯ ಅವರಿಗೆಸಲ್ಲುತ್ತದೆ. ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಕಲಾಗ್ರಾಮದಲ್ಲಿ ನಡೆದಕವಿ ಸಿದ್ದಲಿಂಗಯ್ಯ ಅವರ ಸ್ಮರಣೆಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದಲಿಂಗಯ್ಯಅವರುಕನ್ನಡನಾಡು ಕಂಡ ಶ್ರೇಷ್ಠ ಕವಿ. ದಲಿತರ ನೋವನ್ನು ಸಮರ್ಥವಾಗಿಅಕ್ಷರ ರೂಪ ನೀಡಿ ಜಾಗೃತಗೊಳಿಸಿದರು ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ಅಣ್ಣಬಸವಣ್ಣಅವರ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡುಹೋದಕಡೆಗಳಲ್ಲಾ ಈ ಮಹಾನೀಯರ ವಿಚಾರಧಾರೆಗಳನ್ನುಪ್ರಚಾರಪಡಿಸಿಜನರನ್ನುಜಾಗೃತಗೊಳಿಸಿದರು. ಸಿದ್ದಲಿಂಗಯ್ಯಅವರ ಭಾಷಣವನ್ನು ಜನರು ಕವಿಗೊಟ್ಟು ಕೇಳುತ್ತಿದ್ದರು.

ಅಸಂಖ್ಯಾತ ಸಂಖ್ಯೆಯಲ್ಲಿ ಅವರ ಭಾಷಣ ಕೇಳಲುಸೇರುತ್ತಿದ್ದರು ಎಂದು ತಿಳಿಸಿದರು.ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವವಿ.ಸೋಮಣ್ಣ, ಶ್ರೀರಾಮಲು, ಶಾಸಕ ಮುನಿರತ್ನ,ಸಿದ್ದಲಿಂಗಯ್ಯ ಅವರ ಪುತ್ರಿ ಮಾನಸ ಸಿದ್ದಲಿಂಗಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next