ದೊಡ್ಡಬಳ್ಳಾಪುರ: ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ಆರೋಗ್ಯವಂತ ಸಮಾಜನಿರ್ಮಾಣವಾಗಲು ಸಾಧ್ಯ. ಈಉದ್ದೇಶದಿಂದ ಅಂಗನವಾಡಿ ಕಟ್ಟಡಗಳನ್ನುಸುಸಜ್ಜಿತವಾಗಿ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ತಾಲೂಕಿನ ಹಸನ್‌ಘಟ್ಟ ಸೇರಿದಂತೆಬೈರಸಂದ್ರ, ಉಜ್ಜನಿ, ಬೆನಸಿ ಹಟ್ಟಿ, ದಡಿಘಟ್ಟಮಡಗು ಗ್ರಾಮಗಳಲ್ಲಿ ಅಂಗನವಾಡಿಕೇಂದ್ರಗಳ ನೂತನ ಕಟ್ಟಡ ನಿರ್ಮಾಣಕ್ಕೆಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ,ರಾಜ್ಯದ ಖನಿಜ ಪ್ರತಿಷ್ಠಾನ ಇಲಾಖೆ ವತಿಯಿಂದ 75 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನಬೈರಸಂದ್ರ, ಉಜ್ಜನಿ, ಬೆಣಚಿಹಟ್ಟಿ, ದಡಘಟ್ಟಮಡಗು ಗ್ರಾಮಗಳಲ್ಲಿನೂತನಅಂಗನವಾಡಿಕೇಂದ್ರಗಳು ನಿರ್ಮಾಣವಾಗುತ್ತಿವೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಂಗನ ವಾಡಿಗಳು ಸ್ವಂತಕಟ್ಟಡ ಹೊಂದಿವೆ ಎಂದರು.
ಮಕ್ಕಳ ಆರೋಗ್ಯ ತಪಾಸಣೆ: ಸೋಂಕಿನಮೂರನೇ ಅಲೆಯು ಮಕ್ಕಳ ಮೇಲೆಪರಿಣಾಮಬೀರಲಿವೆ ಎನ್ನುವ ತಜ್ಞರ ವರದಿಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಗೂ ವೈದ್ಯರು ಭೇಟಿ ನೀಡಿಮಕಳ Rಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.ಮಕ್ಕಳಿಗೆ ಪೌಷ್ಟಿಕ ಆಹಾರ, ಔಷಧಿ ಕಿಟ್‌ನೀಡುವ ಮೂಲಕ ಮಕ್ಕಳ ಪೋಷಕರಿಗೆಆರೋಗ್ಯ ಸುಧಾರಣೆ ಕುರಿತಂತೆ ಸೂಚನೆನೀಡಲಾಗುತ್ತಿದೆ.
ಸೋಂಕಿತ ಲಕ್ಷಣಗಳುಕಂಡು ಬರುವ ಮಕ್ಕಳ ಆರೈಕೆಗೆ ಪ್ರತ್ಯೇಕವಾಗಿ ದೊಡ್ಡಬೆಳವಂಗಲದಲ್ಲಿ ಕೋವಿಡ್‌ಕೇಂದ್ರವನ್ನು ಸಿದ್ಧಪಡಿಲಾಗಿದೆ ಎಂದರು.ಕೊಡಿಗೇಹಳ್ಳಿ ಗ್ರಾಪಂ ಅಧ್ಯಕ್ಷ ಮುನಿರಾಜು, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್‌ಅಧ್ಯಕ್ಷ ಎಂ.ಬೈರೇಗೌಡ, ಮುಖಂಡರಾದಹಸನ್‌ಘಟ್ಟ ರವಿ, ಕೆ.ಎಂ.ಕೃಷ್ಣಮೂರ್ತಿ,ಎಂ.ಚಂದ್ರಶೇಖರ್, ಕೃಷ್ಣಮೂರ್ತಿ,ವೀರಭದ್ರಯ್ಯ, ಮುನಿಯಪ್ಪ, ಸಿಡಿಪಿಒ ಅನಿತಾಲಕ್ಷ್ಮೀ ಹಾಜರಿದ್ದರು.