Advertisement
ಬೆಂ-ಮೈ ಹೆದ್ದಾರಿಯಲ್ಲಿ ಸಂಭವಿ ಸುತ್ತಿರುವ ನಿರಂತರ ಅಪಘಾತಗಳಿಂದ ಡೆತ್ ವೇ ಎಂಬ ಅಪಖ್ಯಾತಿ ಗೆ ತುತ್ತಾಗಿದೆ. ಬೆಂಗಳೂರು- ಮೈಸೂರು ನಗರದ ನಡುವೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಿ, ಎರಡು ನಗರಗಳ ನಡುವೆ ಸಾಧಿಸಬೇಕಾದ ಎಕ್ಸ್‌ಪ್ರೆಸ್ ಹೈವೇ ಪ್ರಯಾಣಿಕರ ಜೀವಕ್ಕೆ ಕಂಟಕ ಪ್ರಾಯವಾಗಿದ್ದು, ಇಷ್ಟೊಂದು ಸಾವಿಗೀಡಾದರೂ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಂಡಿಲ್ಲ.
Related Articles
Advertisement
ರಾಮನಗರ: ಎಕ್ಸ್‌ಪ್ರೆಸ್ ವೇನಲ್ಲಿ ಹೆಚ್ಚುತ್ತಿರುವ ಸಾವಿನ ಸರಣಿ ತಗ್ಗಿಸಲು ಕೊನೆಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಡೆತ್ ವೇ ಆಗಿರುವ ಬೆಂ-ಮೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಪಘಾತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಟೋಲ್ ಬಳಿ ಪ್ರಯಾಣಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಪೊಲೀಸ್ ಅಧಿಕಾರಿಗಳು ಕೈಗೊಂಡಿದ್ದಾರೆ. ಸುರಕ್ಷಿತ ಪ್ರಯಾಣಕ್ಕೆ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ವಾಹನ ಚಾಲಕರಿಗೆ ಟೋಲ್‌ನಲ್ಲೇ ಪೊಲೀಸರು ಪಾಠಮಾಡು ತ್ತಿದ್ದಾರೆ. ಇನ್ನು ಮುದ್ರಿತ ಕರಪತ್ರವನ್ನು ನೀಡಿ ಪ್ರಯಾ ಣಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಟೋಲ್ ಬಳಿ ಮೈಕ್ ಅಳವಡಿಸಿ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತಿದೆ.
ಅಪಘಾತ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸಲಹೆ: ಬೆಂ-ಮೈ ಎಕ್ಸ್‌ಪ್ರೆಸ್ ಹೆ„ವೆಯಲ್ಲಿ ಸಂಭವಿಸಿರುವ ಅಪಘಾತಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆ 54 ಸ್ಥಳಗಳನ್ನು ಗುರುತಿಸಿದ್ದು, ಎಂಜಿನಿಯರಿಂಗ್ ಪಾಲ್ಟ್‌ಗಳನ್ನು ಈ ಸ್ಥಳದಲ್ಲಿ ಗುರುತು ಮಾಡಿ ಸಮಸ್ಯೆ ಪರಿಹರಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಸಲಹೆ ನೀಡಿದೆ. ಚನ್ನಪಟ್ಟಣ ವ್ಯಾಪ್ತಿಯಲ್ಲಿ 18 ಸ್ಥಳಗಳಲ್ಲಿ ಅತಿ ಹೆಚ್ಚು ಅಪಘಾತ ನಡೆದಿದ್ದು, ಇಲ್ಲಿ 27 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಬಿಡದಿ ವ್ಯಾಪ್ತಿಯಲ್ಲಿ ಕೆಲ ಜಾಗದಲ್ಲಿ ಅಪಘಾತಗಳು ಸಂಭವಿಸುತ್ತಿರುವುದನ್ನು ಗುರುತಿಸಿ ಈಸ್ಥಳಗಳಲ್ಲಿ ಅಪಘಾತ ನಿಯಂತ್ರಣಕ್ಕೆ ಕೈಗೊಳ್ಳಬೇಕಾಗದ ಕ್ರಮಗಳ ಬಗ್ಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಕೆಲ ಶಿಫಾರಸುಗಳೊಂದಿಗೆ ಪೊಲೀಸ್ ಇಲಾಖೆ ಅಪಘಾತ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ.
ಗ್ರಾಮ ಪರಿಮಿತಿಯಲ್ಲಿ ಪಾದಚಾರಿಗಳು ಬೆಂಗಳೂರು-ಮೈಸೂರು ಹೆದ್ದಾರಿ ದಾಟಲು ಸ್ಕೈವಾಕ್‌ಗಳನ್ನು ನಿರ್ಮಿಸಬೇಕು.
ರಸ್ತೆಯ ತಿರುವು, ಎಕ್ಸ್ಟಿಟ್, ಎಂಟ್ರಿ, ಹಗ್ಗು ದಿಣ್ಣೆಯ ಬಗ್ಗೆ ಚಾಲಕರಿಗೆ ಮಾಹಿತಿ ನೀಡುವ ಸೈನ್‌ಬೋರ್ಡ್‌ಗಳನ್ನು ಅಳವಡಿಸಬೇಕು.
6 ಪಥದ ಎಕ್ಸ್‌ಪ್ರೆಸ್ ವೇ ಗೆ ಪ್ರಾಣಿಗಳು, ಜನರು ಪ್ರವೇಶಿಸದಂತೆ ಹಾಕಿರುವ ತಂತಿ ಬೇಲಿ ಅಲ್ಲಲ್ಲಿ ಕಿತ್ತು ಹೋಗಿದ್ದು, ಇದನ್ನು ದುರಸ್ತಿಗೊಳಿಸಬೇಕು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನ ಲೇನ್‌ಗಳಿಗೆ ವೇಗಮಿತಿ ಯನ್ನು ನಿಗದಿ ಮಾಡಬೇಕು. ವೇಗ ಮಿತಿ ದಾಟದಂತೆ ಕ್ರಮ ವಹಿಸಬೇಕು.
ಪ್ರಯಾಣಿಕರಿಗೆ ಸೂಚನಾ ಫಲಕಗಳು, ಮಾಹಿತಿ ಫಲಕಗಳು ಕಾಣಿಸುವಂತೆ ರೇಡಿಯಂ ಹಾಗೂ ಸೋಲಾರ್ ಲೈಟ್‌ಗಳನ್ನು ಬಳಸಬೇಕು.
ಪ್ಲೇಓವರ್, ಸೇತುವೆಗಳ ಬಳಿ ರಾತ್ರಿವೇಳೆ ವಿದ್ಯುತ್ ದೀಪಗಳು ಬೆಳಗುವಂತೆ ನೋಡಿಕೋಳ್ಳಬೇಕು. ಯಾವುದೇ ಕಾರಣಕ್ಕೆ ನಂದಿಸಬಾರದು.
ಪೊಲೀಸ್ ಇಲಾಖೆ ಹೆದ್ದಾರಿಯಲ್ಲಿ ಗಸ್ತು ಮಾಡಲಿದ್ದು, ಇಲಾಖೆಯ ಜೊತೆಗೆ ಎನ್ ಎಚ್‌ಎಐ ಸಹ ಹೈವೇ ಪೆಟ್ರೋಲಿಂಗ್ ವ್ಯವಸ್ಥೆ ಮಾಡಬೇಕು.
ಅನಗತ್ಯವಾಗಿ ವಾಹನಗಳು ನಿಲುಗಡೆ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಕೆಟ್ಟು ನಿಲ್ಲುವ ವಾಹನಗಳನ್ನು ತೆರವುಗೊಳಿಸಲು ಟ್ರೋಲ್ ವಾಹನದ ವ್ಯವಸ್ಥೆ ಮಾಡಬೇಕು. ಇದಕ್ಕೆ ಪೊಲೀಸ್ ಇಲಾಖೆ ಸಹ ಸಹಕಾರ ನೀಡುತ್ತದೆ.
ಹೆದ್ದಾರಿಯಲ್ಲಿ ಅಪಘಾತ ನಿಯಂತ್ರಣಕ್ಕೆ ಸಂಬಂಧಿಸಿದಂತೆ 54 ಸಂಗತಿಗಳನ್ನು ಗಮನಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ನೀಡಲಾಗಿದೆ. ಅಪಘಾತ ಪ್ರಮಾಣವನ್ನು ತಗ್ಗಿಸಲು ಎಲ್ಲಾ ರೀತಿಯ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳುತ್ತಿದೆ. ಸದ್ಯದಲ್ಲೇ ಅಪಘಾತ ಪ್ರಮಾಣ ತಗ್ಗಿಸಲಾಗುವುದು. ● ಕಾರ್ತಿಕ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ
ಬೆಂ-ಮೈ ಎಕ್ಸ್‌ಪ್ರೆಸ್ ಹೈವೇನಲ್ಲಿ ಬ್ಲಾಕ್‌ಸ್ಪಾಟ್ ಗುರುತಿಸಲು ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸದ್ಯದಲ್ಲೇ ರಸ್ತೆ ಸುರಕ್ಷತಾ ಸಭೆಯನ್ನು ನಡೆಸುವಂತೆ ಸಹ ತಿಳಿಸಿದ್ದು, ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಜೊತೆ ಸಹ ಈ ಬಗ್ಗೆ ಚರ್ಚಿಸುತ್ತೇನೆ ● ಡಿ.ಕೆ.ಸುರೇಶ್, ಸಂಸದ
– ಸು.ನಾ.ನಂದಕುಮಾರ್