Advertisement

ಅಪಘಾತ: 6 ತಿಂಗಳಲ್ಲೇ 233 ಮಂದಿ ಸಾವು 

03:02 PM Jun 26, 2023 | Team Udayavani |

ಮಂಡ್ಯ: ಕಳೆದ ಕೇವಲ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಸುಮಾರು 233 ಮಂದಿ ಸಾವನ್ನಪ್ಪಿದ್ದು, 781 ಮಂದಿ ಗಾಯಾಳುಗಳಾಗಿದ್ದಾರೆ. ಅದರಲ್ಲೂ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದು ವಾಹನ ಸವಾರರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

Advertisement

ಜಿಲ್ಲೆಯಲ್ಲಿ ನಾಲ್ಕು ರಾಷ್ಟ್ರೀಯ ಹಾಗೂ ಏಳು ರಾಜ್ಯ ಹೆದ್ದಾರಿಗಳು ಹಾದು ಹೋಗುತ್ತವೆ. ಆದರೆ, ಕಳೆದ ವರ್ಷ ದಿಂದ ಸಂಚಾರಕ್ಕೆ ಮುಕ್ತವಾಗಿರುವ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾರಕ್ಕೆ ಎರಡ್ಮೂರು ಅಪಘಾತಗಳು ಸಂಭವಿಸುತ್ತಿದ್ದು, ಯಮಸ್ವರೂಪಿಯಾಗಿ ಬದಲಾಗಿದೆ. ಜಿಲ್ಲೆಯ ಹೆದ್ದಾರಿಗಳಲ್ಲಿ ಕಳೆದ ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೆ 233 ಜನರ ಬಲಿ ತೆಗೆದುಕೊಂಡು 781 ಮಂದಿ ಗಾಯಾಳುಗಳಾಗಿ ನರಳುವಂತಾಗಿದೆ. ಕಳೆದ ವರ್ಷ ಹೆದ್ದಾರಿಗಳಲ್ಲಿ 460 ಮಂದಿ ಜೀವ ತೆತ್ತು 1521 ಮಂದಿ ಗಾಯಾಳುಗಳಾ ಗಿದ್ದಾರೆ ಎಂದು ಪೊಲೀಸ್‌ ಮಾಹಿತಿಯಿಂದ ತಿಳಿದು ಬಂದಿದೆ.

ಒಂದೇ ತಿಂಗಳಲ್ಲಿ ಐದಾರು ಅಪಘಾತ: ಇದೇ ತಿಂಗಳ ಜೂನ್‌ನಲ್ಲಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಒಂದೇ ತಿಂಗಳಲ್ಲಿ ಆರಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಅನೇಕ ಮಂದಿ ಸಾವನ್ನಪ್ಪಿದರೆ, ಕೆಲವರು ಗಾಯಗೊಂಡಿದ್ದಾರೆ. ಇದು ರಾಷ್ಟ್ರೀಯ ಹೆದ್ದಾರಿ ಪ್ರಯಾಣಕ್ಕೆ ಸುರಕ್ಷಿತವಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಂಡ್ಯ ತಾಲೂಕಿನ ಹಳೇ ಬೂದನೂರು, ಮದ್ದೂರಿನ ಬಳಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.

ಅಪಘಾತದ ಅಂಕಿ-ಅಂಶಗಳ ವಿವರ: ಕಳೆದ ಜನವರಿಯಲ್ಲಿ ಜಿಲ್ಲೆಯ ವಿವಿಧ ರಸ್ತೆ ಅಪಘಾತಗಳಲ್ಲಿ 38 ಮಂದಿ ಸಾವು, 219 ಮಂದಿ ಗಾಯಾಳುಗಳಾಗಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ 25 ಸಾವು, 222 ಮಂದಿ ಗಾಯಾಳು, ಮಾರ್ಚ್‌ನಲ್ಲಿ 49 ಸಾವು, 211 ಮಂದಿ ಗಾಯಳು, ಏಪ್ರಿಲ್‌ನಲ್ಲಿ 46 ಸಾವು, 248 ಗಾಯಾಳು ಹಾಗೂ ಮೇ ತಿಂಗಳಿನಲ್ಲಿ 47 ಸಾವು, 205 ಮಂದಿ ಗಾಯಾಳುಗಳಾಗಿದ್ದಾರೆ.

ವೇಗದ ಮಿತಿ ಇಲ್ಲದಿರುವುದೇ ಕಾರಣ: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಪ್ರಮುಖವಾಗಿ ವೇಗ ಮಿತಿ ಇಲ್ಲದಿರುವುದು ಅಪಘಾತಗಳ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹೆದ್ದಾರಿ ಹೊಂದಿರಬೇಕಾದ ಪ್ರಮುಖ ಸುರಕ್ಷತಾ ಕ್ರಮಗಳನ್ನು ಅನುಸರಿಸದಿರುವುದು ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿ ಪ್ರಾಧಿಕಾ ರವು ಯಾವುದೇ ವೇಗ ನಿಯಂತ್ರಣಕ್ಕೆ ಕಡಿ ವಾಣ ಹಾಕದಿರುವುದು, ಪ್ರವೇಶ, ನಿರ್ಗಮನ ವ್ಯವಸ್ಥೆ ಸರಿ ಇಲ್ಲದಿರುವುದು, ಅವೈಜ್ಞಾನಿಕ ರಸ್ತೆ ನಿರ್ಮಾಣ, ವೇಗ ನಿಯಂತ್ರಣಕ್ಕೆ ಸೂಚನಾ ಫಲಕ ಅಳವಡಿಸದಿರುವುದು ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

Advertisement

ಯಮಸ್ವರೂಪಿಯಾದ ಹೆದ್ದಾರಿ: ಬೆಂಗಳೂರು -ಬಂಟ್ವಾಳ, ಬೆಂಗಳೂರು -ದಿಂಡಿಗಲ್‌, ಶ್ರೀರಂಗ ಪಟ್ಟಣ- ಬೀದರ್‌ ಹಾಗೂ ಬೆಂಗಳೂರು -ಮಂಗಳೂರು ಸೇರಿದಂತೆ 210 ಕಿಮೀ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಜಿಲ್ಲೆ ವ್ಯಾಪ್ತಿಯಲ್ಲಿದೆ. ನಾಗಮಂಗಲ ವ್ಯಾಪ್ತಿಯ ಬೆಂಗಳೂರು -ಮಂಗಳೂರು ಹೆದ್ದಾರಿ ಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಅದರಂತೆ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಹೆಚ್ಚು ಅಪಘಾತ ಸಂಭವಿಸಿ ಸಂಚಾರಿಗಳ ಪಾಲಿಗೆ ಯಮಸ್ವರೂಪಿಯಾಗಿದೆ. ಅಪಘಾತ, ಸಾವು -ನೋವು ಸಂಭವಿಸುವ ಮೂಲಕ ವಾಹನ ಸವಾರರಲ್ಲಿ ಆತಂಕ ತಂದೊಡ್ಡಿದೆ.

ಭಾನುವಾರ ಮುಂಜಾ ನೆಯೂ ಸಹ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಕಾರುಗಳ ನಡುವೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ್ದರು. ಅಲ್ಲದೆ, ಬೂದನೂರು ಬಳಿ ಇತ್ತೀಚೆಗೆ ರಸ್ತೆ ಅಪಘಾತಕ್ಕೆ ನಾಲ್ಕು ಮಂದಿ ಮೃತಪಟ್ಟಿದ್ದರು.

ಮದ್ದೂರು ಪ್ಲೆ„ಓವರ್‌ಗಿಲ್ಲ ವೇಗ ನಿಯಂತ್ರಣ: ಮದ್ದೂರು ಪಟ್ಟಣದಲ್ಲಿ ಹಾದು ಹೋಗುವ ಪ್ಲೆ„ಓವರ್‌ ಮೇಲೆ ವೇಗ ನಿಯಂತ್ರಣ ಇಲ್ಲದಂತಾಗಿದೆ. ಈಗಾಗಲೇ ಮೂರ್‍ನಾಲ್ಕು ಅಪಘಾತ ಪ್ರಕರಣಗಳು ನಡೆದಿವೆ. ಆದರೂ, ಪದೇ ಪದೆ ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಅಲ್ಲದೆ, ಅವೈಜ್ಞಾನಿಕ ಕಾಮಗಾರಿಯಿಂದ ಪ್ಲೆçಓವರ್‌ ಮೇಲಿಂದ ಮಳೆ ಹಾಗೂ ತ್ಯಾಜ್ಯದ ನೀರು ಸೋರುತ್ತಿದೆ. ಇದರಿಂದ ಪ್ಲೆ„ಓವರ್‌ ಕೆಳಗೆ ಸಂಚರಿಸುವ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಅಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸುರಕ್ಷತಾ ಕ್ರಮ ಅಗತ್ಯ: ಬೆಂಗಳೂರು- ಜಲಸೂರು, ಮೈಸೂರು- ಚನ್ನರಾಯಪಟ್ಟಣ- ಶಿವಮೊಗ್ಗ, ಪಾವಗಡ- ಮದ್ದೂರು- ಮಳವಳ್ಳಿ, ಹಲಗೂರು -ಚನ್ನಪಟ್ಟಣ, ಶಿರಾ- ನಂಜನಗೂಡು, ಶ್ರೀರಂಗಪಟ್ಟಣ- ಬನ್ನೂರು ಹಾಗೂ ಮಂಡ್ಯ- ಗುಬ್ಬಿ- ಹೂವಿನಹಡಗಲಿ ಸೇರಿದಂತೆ 262 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ ಹೊಂದಿರುವ ಜಿಲ್ಲೆ ರಸ್ತೆಯುದ್ದಕ್ಕೂ ಸುರಕ್ಷತಾ ಕ್ರಮ ವಹಿಸುವ ಅಗತ್ಯ ಹೆಚ್ಚಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತುರ್ತು ಸೇವೆ ಇಲ್ಲ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತಾ ಕ್ರಮ ಅನುಸ ರಿಸುತ್ತಿರುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಲ್ಲ. ರಸ್ತೆಯುದ್ದಕ್ಕೂ ವೇಗ ನಿಯಂತ್ರಣ, ಸಂಚಾರ ನಿಯಮ ಫಲಕ ವನ್ನೇ ಅಳವಡಿಸಿಲ್ಲ. ಆದರೆ, ಪ್ರವೇಶ, ನಿರ್ಗಮನ ಸ್ಥಳದಲ್ಲಿ ಮಾತ್ರ ಮೂರ್‍ನಾಲ್ಕು ಫಲಕಗಳ ಅಳವಡಿಸಿರುವುದು ಬಿಟ್ಟರೆ ಬೇರೆ ಯಾವುದೇ ಸೂಚನಾ ಫಲಕಗಳಿಲ್ಲ. ಸಹಾಯ ವಾಣಿ ಮಾಹಿತಿ, ತುರ್ತು ಆರೋಗ್ಯ ಸೇವೆ, ವಾಹನಗಳ ಸ್ಥಳಾಂತರಕ್ಕೆ ಟೋಯಿಂಗ್‌, ಹೆದ್ದಾರಿ ಗಸ್ತು ಮುಂತಾದ ಸೇವೆ ಲಭ್ಯವಾಗುತ್ತಿಲ್ಲ.

ಸ್ಕೈವಾಕ್‌ ನಿರ್ಮಾಣಕ್ಕೆ ಪ್ರಸ್ತಾವನೆ: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ರಸ್ತೆಗೆ ಅಡ್ಡಲಾಗಿ ಫೆನ್ಸಿಂಗ್‌ ಅಳವಡಿಸಿದ್ದರೂ ಅಲ್ಲಲ್ಲಿ ಕತ್ತರಿಸಿ ರಸ್ತೆ ದಾಟಲು ದಾರಿ ಮಾಡಿಕೊಂಡಿದ್ದಾರೆ. ಇದರಿಂದ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಆದ್ದರಿಂದ ಇದನ್ನು ತಪ್ಪಿಸಲು ಪ್ರಾಧಿಕಾರವು ಹೆದ್ದಾರಿಯ 118 ಕಿ.ಮೀ ವ್ಯಾಪ್ತಿಯಲ್ಲಿ ಸಿಗುವ ಸ್ಥಳೀಯ ಗ್ರಾಮಗಳಲ್ಲಿ 39 ಕಡೆ ಸ್ಕೈವಾಕ್‌ ನಿರ್ಮಾಣ ಮಾಡಲು ಮುಂದಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಹಾದು ಹೋಗುವ 58 ಕಿ.ಮೀ ವ್ಯಾಪ್ತಿಯ 18 ಕಡೆ ಹಾಗೂ ಇತರೆ ಜಿಲ್ಲೆಗಳಲ್ಲಿ 21 ಕಡೆ ನಿರ್ಮಾಣ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಆದರೆ, ಇದರ ಬಗ್ಗೆ ಮಾಹಿತಿ ನೀಡಲು ಯಾವ ಅಧಿಕಾರಿಗಳು ಮೊಬೈಲ್‌ ಕರೆ ಸ್ವೀಕರಿಸುತ್ತಿಲ್ಲ. ಅಲ್ಲದೆ, ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸ್ಥಳೀಯ ಸಮಸ್ಯೆಗಳ ಹೇಳಿಕೊಳ್ಳಲು ಭಾಷೆಯೂ ಅಡ್ಡಿಯಾಗುತ್ತಿದೆ. ಉತ್ತರ ಭಾರತದ ಅಧಿಕಾರಿಗಳನ್ನು ನೇಮಕ ಮಾಡಿರುವುದರಿಂದ ಕನ್ನಡ ಭಾಷೆಯೇ ಗೊತ್ತಿಲ್ಲ. ಹಿಂದಿಯಲ್ಲಿಯೇ ವ್ಯವಹರಿಸಬೇಕಿದೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್‌, ಕಿರಿಯ ಎಂಜಿನಿಯರ್‌ ನಿಶ್ಚಿತ್‌ ಎಂಬುವರನ್ನು ನೇಮಕ ಮಾಡಿದ್ದು, ಇವರ ಮೊಬೈಲ್‌ ಸಂಪರ್ಕವೇ ಸಿಗುತ್ತಿಲ್ಲ.

– ಎಚ್‌. ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next