Advertisement

ಬೆಂಗಳೂರು ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆ

09:27 PM Nov 16, 2021 | Team Udayavani |

ಬೆಂಗಳೂರು: ಈಗಾಗಲೇ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ತನ್ನ ರಾತ್ರಿ ಸೇವೆಯನ್ನು ವಿಸ್ತರಿಸಿದ್ದು ಅದರ ಬೆನ್ನಲ್ಲೆ ಈಗ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿ ಎಲ್‌) ಕೂಡ ನಮ್ಮ ಮೆಟ್ರೋ ಸೇವೆಯನ್ನು ರಾತ್ರಿ ಸೇವೆಯನ್ನು 11.30ವರೆಗೂ ವಿಸ್ತರಣೆ ಮಾಡಿದೆ.ನ.18ರಿಂದ ಪ್ರಯಾಣಿಕರಿಗೆ ಈ ಸೇವೆ ದೊರೆಯಲಿದೆ.

Advertisement

ನಮ್ಮ ಮೆಟ್ರೋ ನಿಗಮದ ಈ ನಿರ್ಧಾರದಿಂದಾಗಿ ಇನ್ನು ಮುಂದೆ ಮೆಜೆಸ್ಟಿಕ್‌ನ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲುಗಳು ರಾತ್ರಿ 11.30ಕ್ಕೆ ಹೊರಡಲಿವೆ.

ಭಾನುವಾರ ಹೊರತು ಪಡಿಸಿ ಸೋಮವಾರದಿಂದ ಶನಿವಾರದ ವರೆಗೆ ನಾಗಸಂದ್ರ,ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ನಮ್ಮ ಮೆಟ್ರೋ ನಿಲ್ದಾಣದಿಂದ ಮೆಟ್ರೋ ರೈಲು ಬೆಳಗ್ಗೆ 6.30ಕ್ಕೆ ಹೊರಡಲಿದೆ.ಭಾನುವಾರ ರಜೆ ದಿನ ಆಗಿರುವ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 7 ಗಂಟೆಗೆ ರೈಲುಗಳು ಸಂಚಾರ ಆರಂಭಿಸಲಿವೆ.

ಹಾಗೆಯೇ ನ.18ರಿಂದ ದಿನದ ಕೊನೆಯ ರೈಲು ರಾತ್ರಿ 11ಗಂಟೆಗೆ ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ಮೆಟ್ರೊನಿಲ್ದಾಣಗಳಿಂದ ಪ್ರಯಾಣಿಕರನ್ನು ಹೊತ್ತು ಕೆಂಪೇಗೌಡ ನಿಲ್ದಾಣದತ್ತ ಸಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಹಸಿವು ನೀಗಿಸುವ ಯೋಜನೆ ಜಾರಿ ಮಾಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌

Advertisement

ಜತೆಗೆ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ನಾಲ್ಕೂ ದಿಕ್ಕುಗಳ ಕಡೆಗೆ ಕೊನೆಯ ರೈಲುಗಳು ರಾತ್ರಿ 11.30ಕ್ಕೆ ಹೊರಡಲಿವೆ ಎಂದು ತಿಳಿಸಿದ್ದಾರೆ.

ಪ್ರಯಾಣಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮೆಟ್ರೋ ರೈಲು ಸೇವೆಯನ್ನು ವಿಸ್ತರಣೆ ಮಾಡಿದೆ.ಆ ಹಿಂದೆ ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ರಾತ್ರಿ ಕರ್ಫ್ಯೂ ಜಾರಿಗೊಳಿಸಿತ್ತು.

ಹೀಗಾಗಿ ಮೆಟ್ರೋ ರೈಲು ನಿಗಮ ಕೂಡ ತನ್ನ ರಾತ್ರಿ ಸೇವೆಯನ್ನು ಮೊಟಕುಗೊಳಿಸಿತ್ತು. ಇದೀಗ ಸರ್ಕಾರ ಕೋವಿಡ್‌ ರಾತ್ರಿ ಕರ್ಫ್ಯೂ ಹಿಂಪಡೆದಿದ್ದು ಆ ಹಿನ್ನೆಲೆಯಲ್ಲಿ ಮೆಟ್ರೋ ರೈಲು ನಿಗಮ ಕೂಡ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಣೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next