Advertisement

ಬೆಂಗಳೂರು: “ಮಹಿಳಾ ಯಕ್ಷೋತ್ಸವ 2022”, ಭರತನಾಟ್ಯ ಪ್ರದರ್ಶನ

11:09 AM Dec 21, 2022 | Team Udayavani |

ಬೆಂಗಳೂರು: ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು ಇವರಿಂದ “ಮಹಿಳಾ ಯಕ್ಷೋತ್ಸವ 2022” ಎನ್ನುವ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಕೆಂಪೆಗೌಡ ನಗರದ ಉದಯಬಾನು ಕಲಾ ಸಂಘದಲ್ಲಿ ನಡೆಯಿತು.

Advertisement

ಯಕ್ಷಗಾನದ ಕುರಿತು ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ‘ಯಕ್ಷಗಾನ ರಸಪ್ರಶ್ನೆ’ ಕಾರ್ಯಕ್ರಮವನ್ನು ಪ್ರೇಕ್ಷಕರಿಗಾಗಿ ನಡೆಸಲಾಯಿತು. ಯಕ್ಷಗಾನದ ಪೂರ್ವ ರಂಗ ಬಾಲಗೋಪಾಲ – ಪೀಠಿಕೆ ಸ್ತ್ರೀ ವೇಷದ ಜೊತೆಗೆ ಡಾ. ಸುಪ್ರೀತ ಗೌತಮ್ ಇವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

“ಶಿವ ಪಂಚಾಕ್ಷರಿ ಮಹಿಮೆ” ಎನ್ನುವ ಪ್ರಸಂಗ ಯಕ್ಷಗಾನ ಗುರು – ಕಲಾವಿದರಾದ ಕೆ ಗೌರಿ ಇವರ ನಿರ್ದೇಶನದಲ್ಲಿ ಸೊಗಸಾಗಿ ಮೂಡಿಬಂತು. ಭಾಗವತರಾಗಿ ಸುಬ್ರಹ್ಮಣ್ಯ ನಾವಡ, ಮೃದಂಗದಲ್ಲಿ ಅಜಿತ್ ಕುಮಾರ್, ಚಂಡೆಯಲ್ಲಿ ಸುಬ್ರಹ್ಮಣ್ಯ ಹಿಮ್ಮೇಳದಲ್ಲಿ ಸಹಕರಿಸಿದರು.

ಮುಮ್ಮೇಳದಲ್ಲಿ ಕಲಾವಿದರಾಗಿ ಕೆ. ಗೌರಿ, ಆಶಾ ರಾಘವೇಂದ್ರ, ಲತಾ ಕೃಷ್ಣಮೂರ್ತಿ, ಅಂಬಿಕ, ಶಶಿಕಲಾ, ಅನ್ನಪೂರ್ಣೇಶ್ವರಿ, ಸುಮಾ ಅನಿಲ್ ಕುಮಾರ್, ಚೈತ್ರ ರಾಜೇಶ್, ಚೈತ್ರ ಭಟ್, ಶರ್ವಾಣಿ ಹೆಗಡೆ, ಸೌಜನ್ಯ ನಾವಡ, ಸರಯು, ಧೃತಿ ಅಮ್ಮೆಂಬಳ, ಚಿನ್ಮಯ್ ನಾವಡ ತಮ್ಮ ಪಾತ್ರವನ್ನು ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next