Advertisement

ಬೆಂಗಳೂರಲ್ಲಿ ಜುಲೈನಿಂದ ಕಾಪ್ಟರ್‌ ತರಬೇತಿ ಶುರು

03:45 AM Mar 27, 2017 | Team Udayavani |

ಮುಂಬೈ: ಕೇಂದ್ರ ಸರ್ಕಾರಿ ಸ್ವಾಮ್ಯದ ಪವನ್‌ ಹಂಸ್‌ ಸಂಸ್ಥೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಹಿಂದುಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಜತೆ ಪೈಲಟ್‌ಳಿಗೆ ಹೆಲಿಕಾಪ್ಟರ್‌ ತರಬೇತಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

Advertisement

ಜುಲೈನಿಂದ ಉದ್ಯಾನ ನಗರಿಯಲ್ಲಿ ಕೋರ್ಸ್‌ಗಳು ಆರಂಭವಾಗಲಿವೆ ಎಂದು ಪವನ್‌ ಹಂಸ್‌ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿ.ಪಿ.ಶರ್ಮಾ ತಿಳಿಸಿದ್ದಾರೆ. 

ಹೆಲಿಕಾಪ್ಟರ್‌ ತರಬೇತಿಗೆ ಸಂಬಂಧಿಸಿ ದೇಶದಲ್ಲಿ ಯಾವುದೇ ವ್ಯವಸ್ಥೆ ಇಲ್ಲದೇ ಇರುವುದರಿಂದ ಈ ಕ್ರಮಕ್ಕೆ ಮುಂದಾಗಿ ದ್ದೇವೆ ಎಂದು ಶರ್ಮಾ ತಿಳಿಸಿದ್ದಾರೆ. ಸದ್ಯ ಪೈಲಟ್‌ಗಳು ಬೇಕಾದರೆ ರಕ್ಷಣಾ ಪಡೆಗಳನ್ನೇ ಅವಲಂಬಿಸಬೇಕಾಗಿದೆ ಎಂದರು. ಆರಂಭದಲ್ಲಿ 60 ಮಂದಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಾಗಿರುವ ಯುದ್ಧ ವಿಮಾನಗಳ ಉತ್ಪಾದನೆ ಚುರುಕುಗೊಳಿಸಲು ಎಚ್‌ಎಎಲ್‌ ತೀರ್ಮಾನಿಸಿದೆ. 1 ಸಾವಿರದಷ್ಟು ಮಿಲಿಟರಿ ಕಾಪ್ಟರ್‌, 123 ತೇಜಸ್‌ ಹಗುರ ಯುದ್ಧ ವಿಮಾನಗಳನ್ನು ಸಂಸ್ಥೆ ವಾಯುಪಡೆಗೆ ಪೂರೈಸಬೇಕಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next