Advertisement

ಬೆಂಗಳೂರು ಐಐಎಂ ವಾರ್ಷಿಕ ಶೈಕ್ಷಣಿಕ ಶುಲ್ಕ 22 ಲಕ್ಷ ರೂ.ಗೆ ಏರಿಕೆ

11:36 AM Apr 14, 2018 | Team Udayavani |

ನವದೆಹಲಿ: ದೇಶದ ಪ್ರತಿಷ್ಠಿತ ಉದ್ಯಮಾಡಳಿತ ಬೋಧನಾ ಸಂಸ್ಥೆಗಳಾಗಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ (ಐಐಎಂ)ಗಳಲ್ಲಿ ಕಲಿಯುತ್ತೀರಾ? ಹಾಗಿದ್ದರೆ ನೀವು ಶೇ.5ರಿಂದ 17ರ ವರೆಗೆ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

Advertisement

ಬೆಂಗಳೂರು, ಕಲ್ಕತಾ, ಅಹಮದಾಬಾದ್‌ನ ಐಐಎಂಗಳಲ್ಲಿ ಎಂ.ಬಿ.ಎ. ಅಧ್ಯಯನಕ್ಕಾಗಿ 21 ಲಕ್ಷ ರೂ.ಗಳಿಂದ 22 ಲಕ್ಷ ರೂ.ಗಳ ವರೆಗೆ ಪಾವತಿ ಮಾಡಬೇಕು. ಕಳೆದ ವರ್ಷದ ವರೆಗೆ ಬೆಂಗಳೂರಿನ ಐಐಎಂನಲ್ಲಿ ವಾರ್ಷಿಕ ಶೈಕ್ಷಣಿಕ ಶುಲ್ಕ 19 ಲಕ್ಷ ರೂ. ಇದ್ದದ್ದು, ಹಾಲಿ ವರ್ಷದಿಂದ 21 ಲಕ್ಷ ರೂ.ಗಳಿಗೆ ಏರಿಕೆಯಾಗಲಿದೆ.

ಮೂಲ ಸೌಕರ್ಯಗಳ ನಿರ್ವಹಣೆ, ಪ್ರಾಧ್ಯಾಪಕರ ವೇತನ, ಹಣದುಬ್ಬರ ಹೆಚ್ಚಾದ್ದರಿಂದ ಶೈಕ್ಷಣಿಕ ಶುಲ್ಕ ಪರಿಷ್ಕರಣೆಗೆ ಕಾರಣ. 2018-2020ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಆಯಾ ಐಐಎಂಗಳನ್ನು ಅನುಸರಿಸಿ 80 ಸಾವಿರ ರೂ.ಗಳಿಂದ 2 ಲಕ್ಷ ರೂ.ವರೆಗೆ ಶುಲ್ಕ ಹೆಚ್ಚಳವಾಗಲಿದೆ ಎಂದು ಬೆಂಗಳೂರು ಐಐಎಂ ನಿರ್ದೇಶಕ ರಿಷಿಕೇಶ್‌ ಕೃಷ್ಣನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next