Advertisement

Bengaluru ಐಎಎಸ್‌ಸಿ ದೇಶದ ನಂ. 1ವಿಶ್ವವಿದ್ಯಾನಿಲಯ

12:19 AM Aug 13, 2024 | Team Udayavani |

ಹೊಸದಿಲ್ಲಿ: ಪ್ರಸ್ತುತ ಸಾಲಿನ ಶಿಕ್ಷಣ ಸಂಸ್ಥೆಗಳ (ಎನ್‌ಐಆರ್‌ಎಫ್ -ನ್ಯಾಶನಲ್‌ ಇನ್‌ಸ್ಟಿಟ್ಯೂಶನಲ್‌ ರ್‍ಯಾಂಕಿಂಗ್‌ ಫ್ರೇಮ್ ವರ್ಕ್‌) ರ್‍ಯಾಂಕಿಂಗ್‌ ಸೋಮವಾರ ಬಿಡುಗಡೆಗೊಂಡಿದ್ದು, ಸತತ 9ನೇ ಬಾರಿಯೂ ಬೆಂಗಳೂರಿನ ಐಐಎಸ್‌ಸಿ ನಂ. 1 ವಿ.ವಿ. ಆಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಸೋಮವಾರ ಈ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

Advertisement

ದೇಶದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿಯೂ 2ನೇ ಸ್ಥಾನ ಬೆಂಗಳೂರಿನ ಐಐಎಸ್‌ಸಿಗೆ ಸಂದಿದೆ. ಸತತ 6ನೇ ವರ್ಷ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಐಐಟಿ ಮದ್ರಾಸ್‌ ಉಳಿಸಿಕೊಂಡಿದೆ. ಐಐಟಿ ಬಾಂಬೆಗೆ 3ನೇ ಸ್ಥಾನ. ಐಐಟಿ ದಿಲ್ಲಿ, ಐಐಟಿ ಕಾನ್ಪುರ ಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದುಕೊಂಡಿವೆ.

ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಜೆಎನ್‌ಯು 2ನೇ ಸ್ಥಾನ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿ.ಯು 3ನೇ ಸ್ಥಾನವನ್ನು ಪಡೆದುಕೊಂಡಿವೆ. ಒಟ್ಟು 16 ವಿಭಾಗಗಳಲ್ಲಿ ದೇಶದ ವಿವಿಧ ಶಿಕ್ಷಣ ಸಂಸ್ಥೆಗಳ ರ್‍ಯಾಂಕಿಂಗ್‌ ಪ್ರಕಟಿಸಲಾಗಿದ್ದು, ಈ ಪೈಕಿ 14 ವಿಭಾಗಗಳಲ್ಲಿ ಕರ್ನಾಟಕದ 76 ಶಿಕ್ಷಣ ಸಂಸ್ಥೆಗಳು ವಿವಿಧ ಶ್ರೇಯಾಂಕ ಗಳಿಸಿಕೊಂಡಿವೆ. ಸಂಶೋಧನ ವಿಭಾಗದಲ್ಲಿಯೂ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ -ಬೆಂಗಳೂರು ಅಗ್ರ ರ್‍ಯಾಂಕಿಂಗ್‌ ಪಡೆದುಕೊಂಡಿದೆ.

ಜತೆಗೆ ನಾವೀನ್ಯತೆ ವಿಭಾಗದಲ್ಲಿಯೂ ಐಐಎಸ್‌ಸಿ -ಬೆಂಗಳೂರು 4ನೇ ಸ್ಥಾನ ಪಡೆದುಕೊಂಡಿದೆ. ಇದೇ ವೇಳೆ ಮಣಿಪಾಲ ಸಮೂಹದ 11 ಶಿಕ್ಷಣ ಸಂಸ್ಥೆಗಳಿಗೆ 9 ವಿಭಾಗದಲ್ಲಿ ವಿವಿಧ ರ್‍ಯಾಂಕಿಂಗ್‌ ದೊರೆತಿದೆ.

Advertisement

Udayavani is now on Telegram. Click here to join our channel and stay updated with the latest news.

Next