Advertisement

ಪ್ರೊ ಕಬಡ್ಡಿ ಕಿರೀಟಕ್ಕೆ ಬೆಂಗಳೂರು-ಗುಜರಾತ್‌ ಫೈಟ್‌

12:30 AM Jan 05, 2019 | |

ಮುಂಬಯಿ: ಸತತ 3 ತಿಂಗಳ ಕಬಡ್ಡಿ ಜಾತ್ರೆ ಕೊನೆಯ ಹಂತಕ್ಕೆ ತಲುಪಿದೆ. ಶನಿವಾರ ಮುಂಬಯಿಯಲ್ಲಿ ನಡೆಯಲಿರುವ ಫೈನಲ್‌ನಲ್ಲಿ “ಎ’ ವಲಯದ ಅಗ್ರ ತಂಡ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಹಾಗೂ “ಬಿ’ ವಲಯದ ಅಗ್ರಸ್ಥಾನಿ ಬೆಂಗಳೂರು ಬುಲ್ಸ್‌ ತಂಡ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಯಾರೇ ಗೆದ್ದರೂ ಮೊದಲ ಬಾರಿಗೆ ಪ್ರೊ ಕಬಡ್ಡಿ ಕಿಂಗ್‌ ಎನಿಸಲಿವೆ.

Advertisement

ಪ್ರೊ ಕಬಡ್ಡಿ 6ನೇ ಆವೃತ್ತಿಯ ಫೈನಲ್‌ ಪಂದ್ಯ ಹೆಚ್ಚು ಕುತೂಹಲಕಾರಿಯಾಗಿರಲಿದೆ. ಏಕೆಂದರೆ, ಎರಡೂ ತಂಡಗಳು ಇದಕ್ಕೂ ಮುನ್ನ ಫೈನಲ್‌ ಒತ್ತಡವನ್ನು ಅನುಭವಿಸಿವೆ. ಗುಜರಾತ್‌ 2017ರ ತನ್ನ ಚೊಚ್ಚಲ ಆವೃತ್ತಿಯಲ್ಲಿ ಫೈನಲ್‌ಗೆ ಲಗ್ಗೆ ಇರಿಸಿತ್ತು. ಅಲ್ಲಿ ಪಾಟ್ನಾ ಪೈರೇಟ್ಸ್‌ ವಿರುದ್ಧ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತ್ತು. ಬುಲ್ಸ್‌ 2015ರ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸಿ ಯು ಮುಂಬಾ ಎದುರು ಮುಗ್ಗರಿಸಿ ಪ್ರಶಸ್ತಿ ವಂಚಿತವಾಗಿತ್ತು. ಈ ಬಾರಿ ಎರಡೂ ತಂಡಗಳು ಮೊದಲ ಕಿರೀಟಕ್ಕಾಗಿ ಹಾತೊರೆಯುತ್ತಿವೆ. ಹೀಗಾಗಿ ಇದು ಇತ್ತಂಡಗಳಿಗೂ ಪ್ರತಿಷ್ಠೆಯ ಪಂದ್ಯವಾಗಲಿದೆ.

ಗುಜರಾತ್‌ ಹೆಚ್ಚು ಬಲಿಷ್ಠ
ಮೊದಲ ಕ್ವಾಲಿಫೈಯರ್‌ನಲ್ಲಿ ಬುಲ್ಸ್‌ ವಿರುದ್ಧ ಗುಜರಾತ್‌ ಸೋಲನುಭವಿಸಿದರೂ, 6ನೇ ಆವೃತ್ತಿಯಲ್ಲಿ ಗುಜರಾತ್‌ ತಂಡ ಬಲಿಷ್ಠ ತಂಡ ಎಂದು ಗುರುತಿಸಿಕೊಂಡಿದೆ. 22 ಪಂದ್ಯಗಳಲ್ಲಿ 17ರಲ್ಲಿ ಜಯಿಸಿರುವ ಗುಜರಾತ್‌ ಸೋತದ್ದು ಕೇವಲ ಮೂರರಲ್ಲಿ ಮಾತ್ರ. ಗುಜರಾತ್‌ ಗಳಿಸಿದ ಒಟ್ಟು ಅಂಕ 93.

ಆದರೆ ರೈಡಿಂಗ್‌ನಲ್ಲಿ ಹೆಚ್ಚು ಬಲಿಷ್ಠವಾಗಿರುವ ಗುಜರಾತ್‌ ಡಿಫೆನ್ಸ್‌ನಲ್ಲಿ ದುರ್ಬಲವಾಗಿದೆ. ರೈಡಿಂಗ್‌ನಲ್ಲಿ ಕೆ. ಪ್ರಪಂಚನ್‌ ಹಾಗೂ ಸಚಿನ್‌ ತಂಡಕ್ಕೆ ಆಸರೆಯಾಗಿದ್ದರೆ, ಡಿಫೆನ್ಸ್‌ನಲ್ಲಿ ನಾಯಕ ಸುನೀಲ್‌ ಕುಮಾರ್‌ ಜಾಗೂ ಸಚಿನ್‌ ವಿಟuಲ್‌ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಯುಪಿ ಯೋಧ ವಿರುದ್ಧದ 2ನೇ ಕ್ವಾಲಿಫೈಯರ್‌ನಲ್ಲಿ ಅಲ್‌ರೌಂಡರ್‌ ಜೋಡಿ ಹದಿ ಒಶೊràರಕ್‌ ಹಾಗೂ ರೋಹಿತ್‌ ಗುಲಿಯ ಅದ್ಭುತ ಆಟವಾಡಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಡಿಫೆನ್ಸ್‌ನಲ್ಲಿ ಗುಜರಾತ್‌ ಇನ್ನಷ್ಟು ಪಳಗಿದರೆ ಪ್ರಶಸ್ತಿ ತನ್ನದಾಗಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ಅಚ್ಚರಿ ಮೂಡಿಸಿರುವ ಬುಲ್ಸ್‌
ಪ್ರಸಕ್ತ ಋತುವಿನಲ್ಲಿ ಎಂದಿಗಿಂತ ಅತ್ಯುತ್ತಮ ಆಟವಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿರುವ ಬೆಂಗಳೂರು ತಂಡ ಕ್ವಾಲಿಫೈಯರ್‌ನಲ್ಲಿ ಗುಜರಾತ್‌ ತಂಡವನ್ನು 29 ಅಂಕಗಳಿಗೆ ಕಟ್ಟಿ ಹಾಕಿ ನೇರವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತ್ತು. ಇದೇ ಆಟವನ್ನು ಮುಂದುವರಿಸಿ ಪ್ರಶಸ್ತಿ ಬಾಚಿಕೊಳ್ಳುವ ತವಕದಲ್ಲಿದೆ. 13 ಪಂದ್ಯಗಳನ್ನು ಗೆದ್ದಿರುವ ಬೆಂಗಳೂರು ತಂಡದ ಒಟ್ಟು ಅಂಕ 78.  ರೈಡಿಂಗ್‌ ಹಾಗೂ ಡಿಫೆನ್ಸ್‌ ವಿಭಾಗಗಳೆರಡರಲ್ಲೂ ಉತ್ತಮವಾಗಿರುವ ಬೆಂಗಳೂರಿಗೆ ಅದೃಷ್ಟ ಕೈಹಿಡಿಯಬೇಕಿದೆ, ಅಷ್ಟೇ. ನಾಯಕ ರೋಹಿತ್‌ ಕುಮಾರ್‌ ಅವರ ತಾಳ್ಮೆಯ ಆಟ, ಪವನ್‌ ಶೆಹ್ರಾವತ್‌ ಹಾಗೂ ಕಾಶಿಲಿಂಗ ಅಡಕೆ ಅವರ ಅಮೋಘ ರೈಡಿಂಗ್‌, ಮಹೇಂದರ್‌ ಸಿಂಗ್‌, ಅಮಿತ್‌ ಶೆರೋನ್‌ ಅವರ ಡಿಫೆನ್ಸ್‌ ಬೆಂಗಳೂರು ತಂಡದ ಪ್ಲಸ್‌ ಪಾಯಿಂಟ್‌.

Advertisement

“ಯುಪಿ ಯೋಧ ವಿರುದ್ಧದ ಪಂದ್ಯದಲ್ಲಿ ನಾವು ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಂಡರೆ ಮಾತ್ರ ಈ ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯ. ಡಿಫೆನ್ಸ್‌ ವಿಭಾಗ ಇನ್ನಷ್ಟು ಬಲಿಷ್ಠವಾಗಬೇಕಾದ ಅಗತ್ಯವಿದೆ’
– ಮನ್‌ಪ್ರೀತ್‌ ಸಿಂಗ್‌, ಗುಜರಾತ್‌ ಕೋಚ್‌

“ಗುಜರಾತ್‌ ತಂಡ ಡಿಫೆನ್ಸ್‌ ಹಾಗೂ ರೈಡಿಂಗ್‌ನಲ್ಲಿ ಉತ್ತಮವಾಗಿದೆ. ಗುಜರಾತ್‌ ವಿರುದ್ಧ ಮೊದಲ ಪಂದ್ಯವನ್ನು ಟೈ ಮಾಡಿದ್ದೆವು. ಅಜೇಯ ದಾಖಲೆಯನ್ನು ಗಮನದಲ್ಲಿರಿಸಿಕೊಂಡು ಫೈನಲ್‌ ಆಡಳಿಯುತ್ತೇವೆ’
-ಬಿ.ಸಿ. ರಮೇಶ್‌, ಬುಲ್ಸ್‌ ಕೋಚ್‌

Advertisement

Udayavani is now on Telegram. Click here to join our channel and stay updated with the latest news.

Next