Advertisement

ಬೆಂಗಳೂರು: ಹಾಡಹಗಲೇ ಕೈ ನಾಯಕ, APMC ಅಧ್ಯಕ್ಷನ ಮೇಲೆ Firing

01:06 PM Feb 03, 2017 | Team Udayavani |

ಬೆಂಗಳೂರು: ಯಲಹಂಕದ ಕೋಗಿಲು ಕ್ರಾಸ್‌ ಸಿಗ್ನಲ್‌ ಬಳಿ ಶುಕ್ರವಾರ ಹಾಡಹಗಲೇ ಎಪಿಎಂಸಿ ಅಧಕ್ಷ  ಶ್ರೀನಿವಾಸ್‌ ಕಡಬಗೆರೆ ಮೇಲೆ ಗುಂಡಿನ ದಾಳಿ ನಡೆದಿದೆ. 

Advertisement

ಸರ್ಕಾರಿ ಕಾರಿನಲ್ಲಿದ್ದ ಶ್ರೀನಿವಾಸ್‌ ಅವರ ಮೇಲೆ ಪಲ್ಸರ್‌ ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.ಈ ವೇಳೆ ಶ್ರೀನಿವಾಸ್‌ ಗನ್‌ಮ್ಯಾನ್‌ ಕೂಡ ಪ್ರತಿ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.   

ಗಂಭೀರವಾಗಿ ಗಾಯಗೊಂಡಿರುವ ಶ್ರೀನಿವಾಸ್‌ ಮತ್ತು ಚಾಲಕನನ್ನು ಹೆಬ್ಬಾಳದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲು  ಮಾಡಲಾಗಿದೆ. ಶ್ರೀನಿವಾಸ್‌ ಬೆನ್ನಿಗೆ ಗುಂಡು ಹೊಕ್ಕಿರುವುದಾಗಿ ತಿಳಿದು ಬಂದಿದೆ.ಮುಂಜಾಗೃತಾ ಕ್ರಮವಾಗಿ ಆಸ್ಪತ್ರೆಯ ಎದುರು 2 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. 

ಯಲಹಂಕ ಪೊಲೀಸರು,ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌  ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಸ್ಥಳದಲ್ಲಿ ನಾಲ್ಕು ಗುಂಡುಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. 

ರೌಡಿಶೀಟರ್‌ ಪಾಯ್ಸನ್‌ ರಾಮನ ಸ್ವಂತ ಅಣ್ಣನಾಗಿದ್ದ ಶ್ರೀನಿವಾಸ್‌ ಅಲಿಯಾಸ್‌ ಡಾಬಾ ಸೀನಾ ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿ ಎಪಿಎಂಸಿ ಸದಸ್ಯರಾಗಿ ಆಯ್ಕೆಯಾಗಿದ್ದರು. ನೆಲಮಂಗಲದ ದಾಸನಪುರದ ಎಪಿಎಂಸಿ ಅಧ್ಯಕ್ಷರಾಗಿದ್ದರು. ಈ ಹಿಂದೆ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

Advertisement

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next