Advertisement

ಬೆಂಗಳೂರು:ಗಣೇಶ ಪ್ರತಿಷ್ಠಾಪನೆ; ನೆಲಬಾಡಿಗೆ ವಿನಾಯ್ತಿ

12:12 PM Aug 15, 2018 | |

ಬೆಂಗಳೂರು: ನಗರದಲ್ಲಿ ಗಣೇಶ ಮೂರ್ತಿ ಪ್ರತಿ ಷ್ಠಾಪನೆಗೆ ಅನುಮತಿ ಪಡೆ ಯಲು ಅಲೆ ಯಬೇಕಿಲ್ಲ. ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಯಲ್ಲೇ ಪಡೆಯ ಬಹುದು. ಜತೆಗೆ, ಪ್ರತಿಷ್ಠಾಪನೆಗೆ ವಿಧಿಸಲಾಗುವ ನೆಲ ಬಾಡಿಗೆಯಿಂದಲೂ ವಿನಾಯ್ತಿ ನೀಡಲಾಗಿದೆ.

Advertisement

ಮಂಗಳವಾರ ಬಿಬಿಎಂಪಿ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಯಿತು. ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಪಾಲಿಕೆ, ತಾತ್ಕಾಲಿಕ ವಿದ್ಯುತ್‌ ಸಂಪರ್ಕಕ್ಕಾಗಿ ಬೆಸ್ಕಾಂ ಕಚೇರಿ ಮತ್ತು ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಇದಕ್ಕಾಗಿ ಮೂರೂ ಕಚೇರಿಗಳಿಗೆ ಅಲೆದಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಏಕಗವಾಕ್ಷಿ ಪದ್ಧತಿ ಅಡಿ ಒಂದೇ ಕಡೆ (ಆಯಾ ಜಂಟಿ ಆಯುಕ್ತರ ಕಚೇರಿ) ಅನುಮತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಮೇಯರ್‌ ಸಂಪತರಾಜ್‌ ತಿಳಿಸಿದರು.

ಅಷ್ಟೇ ಅಲ್ಲ, ಗಣೇಶನ ಪ್ರತಿಷ್ಠಾಪನೆಗೆ ಪ್ರತಿ ಚದರ ಮೀಟರ್‌ಗೆ 1 ರೂ. ನೆಲ ಬಾಡಿಗೆ ಪಡೆಯಲಾಗುತ್ತಿತ್ತು. ಇನ್ಮುಂದೆ ಇದನ್ನೂ ರದ್ದುಪಡಿಸಲಾಗಿದೆ ಎಂದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪದ್ಮನಾಭ ರೆಡ್ಡಿ, ಗಣೇಶನ ಪ್ರತಿಷ್ಠಾಪನೆಗೆ ವಿಧಿಸಲಾಗುವ ಶುಲ್ಕ ರದ್ದುಪಡಿಸಬೇಕು. ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಬೇಕು ಎಂದು ತಿಳಿಸಿದರು.

ಶಾಸಕ ಮುನಿರತ್ನ ಮಾತನಾಡಿ, ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸುವವರಿಗೆ ಮಾತ್ರ ಅನುಮತಿ ನೀಡಬೇಕು. ಈ ನಿಯಮ ಉಲ್ಲಂ ಸುವವರ ವಿರುದ್ಧ ಕೇಸು ದಾಖಲಿಸ ಬೇಕು ಎಂದರು. ಇದಕ್ಕೆ ಆಕ್ಷೇಪಿಸಿದ ಪದ್ಮನಾಭ ರೆಡ್ಡಿ, ಮನೆಯಲ್ಲಿ ಪಿಒಪಿ ಗಣೇಶ ಪ್ರತಿಷ್ಠಾಪಿಸಿದರೆ ಕೇಸು ಹಾಕಲು ಸಾಧ್ಯವೇ? ಎಂದರು.

Advertisement

Udayavani is now on Telegram. Click here to join our channel and stay updated with the latest news.

Next