Advertisement
ಪಶ್ಚಿಮ ಬಂಗಾಳ ಮೂಲದ ದೇವಿ ತೋಮಾಂಗ್(46) ಮತ್ತು ಆಕೆಯ ಪ್ರಿಯಕರ ಅಸ್ಸಾಂ ಮೂಲದ ಜೈನುಲ್ ಅಲಿ ಬಾಬು (30) ಬಂಧಿತರು.
Related Articles
Advertisement
ಅದರಂತೆ ಇಬ್ಬರು ಸಂಚು ರೂಪಿಸಿ ನ.5ರಂದು ಮದ್ಯದ ಬಾಟಲಿಗಳು ಮತ್ತು ಕಬಾಬ್ ತಂದಿದ್ದ ದೇವಿ, ಪತಿಗೆ ಕಂಠಪೂರ್ತಿ ಮದ್ಯ ಕುಡಿಸಿದ್ದಾಳೆ. ಬಳಿಕ ಆತ ಮಲಗಿದ್ದಾಗ ಜೈನುಲ್ ಬಾಬು ಆತನ ಕುತ್ತಿಗೆ ಹಿಸುಕಿದರೆ, ದೇವಿ ಪತಿಯ ಕೈ, ಕಾಲು ಹಿಡಿದುಕೊಂಡು ಕೊಲೆಗೆ ಸಹಕರಿಸಿದ್ದಳು. ಮರುದಿನ ಪತಿ ಮದ್ಯಪಾನ ಮಾಡಿ ಎದೆ ಊರಿ ಎಂದು ಹೇಳುತ್ತ ಮೃತಪಟ್ಟಿದ್ದಾರೆ ಎಂದು ನಾಟಕ ಮಾಡಿದ್ದಳು.
ಬಳಿಕ ಸ್ಥಳಕ್ಕೆ ಬಂದು ಸಂಬಂಧಿಯೊಬ್ಬರು ರಾಕೇಶ್ ಕುತ್ತಿಗೆ ಬಳಿಯಿದ್ದ ಗುರುತು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ ಎಂಬುದು ಪತ್ತೆಯಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಿಯಕರನಿಗೆ ಗಂಡಸ್ತನ ಸವಾಲು!:
“ನೀನು ಗಂಡಸಾಗಿದ್ದರೆ ನನ್ನ ಪತಿಯನ್ನು ಕೊಲೆ ಮಾಡು. ಆಗ ಮಾತ್ರ ನನ್ನ ಜತೆ ಮಲಗಲು ಅವಕಾಶ ನೀಡುತ್ತೇನೆ. ಇಲ್ಲವಾದರೆ ನನ್ನನ್ನು ಬಿಟ್ಟು ಬಿಡು. ನಮ್ಮಿಬ್ಬರ ಸಂಬಂಧಕ್ಕೆ ಪತಿ ರಾಕೇಶ್ ಅಡ್ಡಿ ಆಗುತ್ತಿದ್ದಾನೆ. ಆತನನ್ನು ಮುಗಿಸಿಬಿಡು’ ಎಂದು ಸವಾಲು ಹಾಕಿದ್ದಳು. ಅದರಿಂದ ಪ್ರಚೋದನೆಗೊಂಡ ಕೊಲೆಗೈದಿದ್ದಾನೆ ಎಂದು ಪೊಲೀಸರು ಹೇಳಿದರು.
ಒಂಭತ್ತು ದಿನಗಳ ಕಾಲ ಮನೆಯಲ್ಲೇ ಇದ್ದ ಪ್ರಿಯಕರ!
ನ.6ರಂದು ರಾಕೇಶ್ ಕೊಲೆಯಾಗಿದ್ದರು. ಜೈನುಲ್ ಬಾಬು ಅ.29ರಂದು ರಾತ್ರಿಯೇ ರಾಕೇಶ್ ಮನೆಗೆ ಬಂದಿದ್ದ. ಮನೆಯಲ್ಲಿ ಎರಡು ಬೆಡ್‌ರೂಮ್ ಇದ್ದು, ಅದರಲ್ಲಿ ಒಂದು ಸ್ಟೋರ್ ರೂಮ್ ಇತ್ತು. ಅಲ್ಲಿ ಪ್ರಿಯಕರನನ್ನು ದೇವಿ ಇರಿಸಿದ್ದಳು. ಆತನಿಗೆ ಎಲ್ಲ ರೀತಿಯ ಉಪಚಾರ ಮಾಡುತ್ತಿದ್ದಳು. ಅ.29ರಂದು ಕೊಲೆಗೆ ಯತ್ನಿಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ನಂತರ 9 ದಿನಗಳು ಮನೆಯಲ್ಲೇ ಇದ್ದು, ನ.6ರಂದು ಕೊಲೆಗೈದು ಪರಾರಿಯಾಗಿದ್ದ. ಮತ್ತೂಂದೆಡೆ ಪೊಲೀಸರ ಕಣ್ಣು ತಪ್ಪಿಸಲು ದೇವಿ ತೋಮಾಂಗ್, ಪ್ರಿಯಕರ ಬಾಬುಗೆ ತನ್ನ ಹೆಸರಿನಲ್ಲಿಯೇ ಹೊಸ ಸಿಮ್ ಕಾರ್ಡ್ ಕೊಡಿಸಿದ್ದಳು. ಹೀಗಾಗಿ ಬಾಬು ಹಳೇ ಫೋನ್, ಸಿಮ್‌ಕಾರ್ಡ್ ಎಸೆದು ಹೊಸ ನಂಬರ್ ಬಳಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಪತಿ ಫೋನ್ ಪೇನಿಂದ ಪ್ರಿಯಕರನಿಗೆ ಹಣ ವರ್ಗ
ರಾಕೇಶ್ ಕೊಲೆಯಾದ ಮರುದಿನ ದೇವಿ, ತನ್ನ ಪತಿಯ ಫೋನ್ ಪೇನಿಂದ ಪ್ರಿಯಕರನಿಗೆ 50 ಸಾವಿರ ರೂ. ವರ್ಗಾಯಿಸಿದ್ದಳು. ದೇವಿಯ ಕಾಲ್ ಡಿಟೇಲ್ಸ್ ಮತ್ತು ಬ್ಯಾಂಕ್ ಮಾಹಿತಿ ಪಡೆದುಕೊಂಡು ತನಿಖೆ ನಡೆಸಿದಾಗ ಆರೋಪಿ ಹೊಸೂರು ಬಳಿ ಅಡಗಿಕೊಂಡಿರುವ ಮಾಹಿತಿ ಸಿಕ್ಕಿ, ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.