Advertisement
ರಾಜಗೋಪಾಲನಗರ ನಿವಾಸಿ ಸಿದ್ದರಾಜು (24) ಶಿಕ್ಷೆಗೊಳಗಾದವ.
ಆದರೆ, ಡಿ.11ರಂದು ಯುವತಿ ಮನೆಗೆ ಬಂದಿದ್ದು, ಬಳಿಕ ಪೋಷಕರ ಜತೆ ಪೊಲೀಸ್ ಠಾಣೆಗೆ ಬಂದು ತನ್ನ ಮೇಲಿನ ದೌರ್ಜನ್ಯದ ಕುರಿತು ದೂರು ನೀಡಿದ್ದಳು. ಈ ಸಂಬಂಧ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಅಂದಿನ ಠಾಣಾಧಿಕಾರಿ ದಿನೇಶ್ ಪಾಟೀಲ್, ಆರೋಪಿ ಸಿದ್ದರಾಜುನನ್ನು ಬಂಧಿಸಿ, ಕೃತ್ಯಕ್ಕೆ ಸಂಬಂಧಿಸಿದ ಸಾಕ್ಷ್ಯ ಸಂಗ್ರಹಿಸಿ, ಕೋರ್ಟ್ಗೆ ಆರೋಪಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಅಪರಾಧಿಗೆ 20 ವರ್ಷದ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
Related Articles
Advertisement