Advertisement
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದೇವಿಪುರ ಗ್ರಾಮದ ರೈತ ಸಣ್ಣಪ್ಪ ಎಂಬುವವರ ಬಂಡೂರು ತಳಿಯ ಟಗರನ್ನು ಮಂಡ್ಯ ತಾಲ್ಲೂಕಿನ ಬಿದರಕೋಟೆಯ ರೈತ ಕೃಷ್ಣೇಗೌಡರಿಗೆ 1.91 ಲಕ್ಷ ರೂ. ಗೆ ಮಾರಾಟ ಮಾಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿ ಗ್ರಾಮದ ಸೋಮಣ್ಣ ಅವರ ಬಳಿ ಒಂದು ಲಕ್ಷದ ಐದು ಸಾವಿರ ಈ ಟಗರನ್ನು ಖರೀದಿ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಸಣ್ಣಪ್ಪ ಅವರು ವಿಶೇಷ ಕಾಳಜಿಯಿಂದ ಈ ಟಗರನ್ನು ಸಾಕಿದ್ದರು. ಹೀಗಾಗಿ ಎರಡು ವರ್ಷಗಳ ಬಳಿಕ ಈಗ ಟಗರು ದುಬಾರಿ ಬೆಲೆಗೆ ಮಾರಾಟವಾಗಿದೆ.
Related Articles
Advertisement
ಈ ತಳಿ ಟಗರು ಉಳಿದ ಸಾಮಾನ್ಯ ಕುರಿಗಳಿಂದ ವಿಭಿನ್ನವಾಗಿ ಕಂಡು ಬರುತ್ತದೆ. ನೋಡಲು ಅತ್ಯಂತ ಆಕರ್ಷಣೀಯವಾಗಿದ್ದು, ಸಾಮಾನ್ಯ ಕುರಿಗಿಂತ ಗಿಡ್ಡನೆಯ ಕಾಲು, ಉದ್ದವಾದ ದೇಹವನ್ನು ಹೊಂದಿದೆ. ಅಲ್ಲದೆ ಈ ಕುರಿಯ ಮಾಂಸ ಸಾಮಾನ್ಯ ಕುರಿ ಹಾಗೂ ಮೇಕೆಗಳಿಗಿಂತ ಅತ್ಯುತ್ತಮ ರುಚಿ ಇರುತ್ತದೆ ಎನ್ನಲಾಗುತ್ತದೆ. ಈ ತಳಿಯ ಕುರಿಗಳು ಇರುವುದು ಕೂಡ ಬೆರಳೆಣಿಕೆಯಷ್ಟು, ಹೀಗಾಗಿ ಸಣ್ಣಪ್ಪ ಈ ಟಗರಿನ ಮೂಲಕ ನೂರಾರು ಬಂಡೂರು ತಳಿಯ ಕುರಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ.