Advertisement
ಈ ಸೀ ಲಿಂಕ್ ಯೋಜನೆಯು ರಸ್ತೆ, ಸುರಂಗ ಹಾಗೂ ಸೀ ಲಿಂಕ್‌ಗಳ ಮೂಲಕ ದಕ್ಷಿಣ ಮುಂಬಯಿಯನ್ನು ಪಶ್ಚಿಮ ಉಪನಗರಗಳಿಗೆ ಸಂಪರ್ಕಿಸುವ ಕೋಸ್ಟಲ್ ರೋಡ್ ಯೋಜ ನೆಯ ಪ್ರಮುಖ ಅಂಶವಾಗಿದೆ.
ಸಮಿತಿಯು ಕ್ಯಾಶ್ ಕಾಂಟ್ರ್ಯಾಕ್ಟ್ ಮಾದರಿಯ ಆಧಾರದ ಮೇಲೆ ಬಾಂದ್ರಾ- ವಸೋìವಾ ಸೀ ಲಿಂಕ್‌ನ್ನು ನಿರ್ಮಿಸಲು ತನ್ನ ಅನುಮತಿಯನ್ನು ನೀಡಿದೆ. ಅಂದರೆ ರಾಜ್ಯ ಸರಕಾರವು ಸ್ವತಃ ಈ ಸೀ ಲಿಂಕ್ ಅನ್ನು ನಿರ್ಮಾಣ ಮಾಡಿ, ತದನಂತರ ಟೋಲ್ ವಿಧಿಸುವ ಮೂಲಕ ಅದರ ವೆಚ್ಚವನ್ನು ವಸೂಲಿ ಮಾಡಲಿದೆ ಎಂದು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್‌ಆರ್‌ಡಿಸಿ)ಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಂಎಸ್‌ಆರ್‌ಡಿಸಿ ಇತ್ತೀಚೆಗೆ ರಾಜ್ಯ ಸರಕಾರದಿಂದ ಈ ಯೋಜನೆಗೆ ಪರಿಸರ ಅನುಮತಿ ಪಡೆದುಕೊಂಡಿದೆ. 9.5 ಕಿ.ಮೀ. ಉದ್ದದ ಸೀ ಲಿಂಕ್ ನಿರ್ಮಾಣ ಮಾಡಲು ಸಂಸ್ಥೆಯು ಈಗಾಗಲೇ ಕೇಂದ್ರ ಸಂಸ್ಥೆಗ ಳಿಂದ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝೆಡ್) ಅನುಮತಿ ಯನ್ನು ಪಡೆದುಕೊಂಡಿದೆ. ಈ ಯೋಜನೆಗೆ ಅಂದಾಜು 7,502 ಕೋ.ರೂ. ಖರ್ಚಾಗಲಿದೆ.
Related Articles
ಈ ಹೊಸ ಸೀ ಲಿಂಕ್ ನಿರ್ಮಾಣಕ್ಕಾಗಿ ನೋಡಲ್ ಏಜೆನ್ಸಿಯಾಗಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು ಸುರಂಗ ಹಾಗೂ ಸೇತುವೆಗಳ ನಿರ್ಮಾಣ ಕ್ಷೇತ್ರದಲ್ಲಿ ಎಕ್ಸ್ ಪರ್ಟ್ ಆಗಿರುವ 5 ಕಂಪೆನಿಗಳನ್ನು ಶಾಟ್ ìಲಿಸ್ಟ್ ಮಾಡಿದ್ದು, ಅ. 1ರಿಂದ ನಿರ್ಮಾಣ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ಎಂಎಎಸ್‌ಆರ್‌ಡಿಸಿ ಬಾಂದ್ರಾ-ವಸೋìವಾ ಸೀ ಲಿಂಕ್ ಯೋಜನೆಯನ್ನು 2020 ರೊಳಗೆ ಪೂರ್ಣಗೊಳಿಸಲು ಗುರಿ ನಿಗದಿಪಡಿಸಿದೆ.
Advertisement
ಬಾಂದ್ರಾ-ವರ್ಲಿ ಸೀ ಲಿಂಕ್‌ನ ವಿಸ್ತರಣಾ ಯೋಜನೆಯಾಗಿರುವ ಇದು ಬಾಂದ್ರಾ ಸೀ ಲಿಂಕ್ ಅನ್ನು ವಸೋìವಾಗೆ ಜೋಡಿಸಲಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ವಾಹನ ಸವಾರರಿಗೆ ಬಾಂದ್ರಾ-ವಸೋìವಾ ನಡುವೆ ಜುಹೂವಿನ ಕೋಳಿವಾಡಾ ಮತ್ತು ವಸೋìವಾದ ನಾನಾ-ನಾನಿ ಪಾರ್ಕ್ ಸಮೀಪ ರಸ್ತೆ ಬದಲಾವಣೆಯ ಸೌಲಭ್ಯ ಸಿಗಲಿದೆ. ದೇಶೀಯ ಸಾಲದಾತರು ಇದಕ್ಕೆ ಹಣಕಾಸು ನೆರವು ನೀಡಲಿದ್ದಾರೆ.