Advertisement

ಬಂಡೀಪುರ: ನುರಿತ ಐಸಿಟಿ ಪದವೀಧರರು, ಅರಣ್ಯಾಧಿಕಾರಿಗಳಿಂದ ಹುಲಿ ಗಣತಿ

07:44 PM Jan 22, 2022 | Team Udayavani |

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆರಂಭವಾಗಿರುವ ಹುಲಿ ಗಣತಿ ಕಾರ್ಯ ಶನಿವಾರ ಮೊದಲ ಹಂತದಲ್ಲಿ ನಾಲ್ಕು ವಲಯಗಳಲ್ಲಿ ನಡೆಯಿತು. ಬಂಡೀಪುರ, ಗೋಪಾಲಸ್ವಾಮಿಬೆಟ್ಟ, ಕುಂದುಕೆರೆ ಮತ್ತು ಮದ್ದೂರು ವಲಯದಲ್ಲಿ ನುರಿತ ಐಸಿಟಿ ಪದವೀಧರರು, ವಿಶೇಷ ಹುಲಿ ಸಂರಕ್ಷಣಾ ದಳದ ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ನೌಕರರು ಗಣತಿ ನಡೆಸಿದ್ದು, ಮೊಬೈಲ್ ಆ್ಯಪ್‍ನಲ್ಲಿ ದತ್ತಾಂಶ ದಾಖಲಿಸುವ ಕೆಲಸ ಮಾಡಿದ್ದಾರೆ.

Advertisement

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುವ ಗಣತಿಗೆ 300 ಮಂದಿ ನೌಕರರನ್ನು ನಿಯೋಜಿಸಲಾಗಿದೆ. ವೀಕ್ಷಕರು, ಮೊಬೈಲ್ ನಿರ್ವಹಣೆ ಮಾಡುವವರು ಹಾಗೂ ಒಬ್ಬ ಗಾರ್ಡ್ ಒಳಗೊಂಡ ಮೂವರ ತಂಡ ರಚಿಸಲಾಗಿದೆ. ಇವರು ಲಭ್ಯವಾದ ದೈನಂದಿನ ಮಾಹಿತಿಯನ್ನು ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡುತ್ತಾರೆ.

ಹಿಂದೆ ಕ್ಯಾಮರಾ ಟ್ರ್ಯಾಪಿಂಗ್, ಟ್ರಾನ್ಜಾಕ್ಟ್ ಲೈನ್ ಮೂಲಕ ಹುಲಿ ಗಣತಿ ನಡೆಯುತ್ತಿತ್ತು. ಆದರೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಎಂ ಸ್ಟ್ರೈಪ್ಸ್ ಮಾನಿಟರಿಂಗ್ ಸಿಸ್ಟಮ್ ಫಾರ್ ಟೈಗರ್ಸ್ ಇಂಟೆನ್ಸಿವ್ ಪ್ರೆಟೆಕ್ಷನ್  ಹಾಗೂ ಇಕಾಲಾಜಿಕಲ್ ಸ್ಟೇಟಸ್ ಎಂಬ ಆ್ಯಪ್ ಮೂಲಕ ಗಣತಿ ನಡೆಸಲಾಗುತ್ತಿದೆ.

ಗಣತಿ ಕಾರ್ಯ ಸುಲಭವಾಗಲೆಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಿಭಾಗದಲ್ಲೂ ಆರು ದಿನ ಗಣತಿ ನಡೆಯಲಿದ್ದು, ಮೊದಲ ಮೂರು ದಿನ ನಿಗಧಿಯಾದ ಸ್ಥಳದಲ್ಲಿ ಆನೆ, ಜಿಂಕೆ, ಕಡವೆ, ಕಾಡೆಮ್ಮೆ ಮತ್ತು ಹುಲಿ ವಾಸಕ್ಕೆ ಅನುಕೂಲಕರವಾದ ಪರಿಸ್ಥಿತಿ ಇದೆಯೇ ಎಂಬುದು ಗಮನಿಸಲಾಗುತ್ತದೆ. ನಂತರದ ಮೂರು ದಿನ ಟ್ರಾಂಜೆಕ್ಟ್ ಲೈನಿನಲ್ಲಿ 5 ಕಿ.ಮೀ. ದೂರ ಕ್ರಮಿಸಿ ವಿವಿಧ ರೀತಿಯ ಮಾಹಿತಿ ಕಲೆ ಹಾಕಲಾಗುತ್ತದೆ. ಒಂದನೇ ಕ್ಷೇತ್ರದಲ್ಲಿ ಜ.22 ರಿಂದ 27. ಎರಡರಲ್ಲಿ ಜ.28 ರಿಂದ ಫೆ.2,  ಮತ್ತು  ಮೂರರಲ್ಲಿ ಫೆ. 3ರಿಂದ 8 ರವರೆಗೆ ಗಣತಿ ನಡೆಯಲಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಗಣತಿ ಕಾರ್ಯ ಮೊದಲ ದಿನ ಮಾಂಸಹಾರಿ ಪ್ರಾಣಿಗಳು ಮತ್ತು ದೊಡ್ಡ ಸಸ್ಯಹಾರಿ ಪ್ರಾಣಿಗಳ ಪ್ರತ್ಯೇಕ್ಷ ಮತ್ತು ಪರೋಕ್ಷ ಸಾಕ್ಷ್ಯಗಳನ್ನು ಗುರುತಿಸುವ ಮೂಲಕ ಗಣತಿ ಆರಂಭಿಸಲಾಗಿದೆ. ಪ್ರಾಣಿಗಳ ಚಲಲನವಲನ, ಹೆಜ್ಜೆ ಗುರುತು, ಲದ್ದಿ ಸೇರಿದಂತೆ ಇತರೆ ಆಧಾರ ಮೇಲೆ ಮಾಹಿತಿ ದಾಖಲಿಸಲಾಗುತ್ತಿದೆ.ಕೆ.ಪರಮೇಶ್, ಎಸಿಎಫ್ ಬಂಡೀಪುರ.

Advertisement
Advertisement

Udayavani is now on Telegram. Click here to join our channel and stay updated with the latest news.

Next