Advertisement
ಬಂಡೀಪುರ ಸಫಾರಿಗೆ ತೆರಳುವ ವಾಹನಗಳಿಗೆ ಒಂದು ವಲಯದಲ್ಲಿ ಪ್ರಾಣಿಗಳು ಕಂಡರೆ ಉಳಿದ ಸಫಾರಿ ಚಾಲಕರಿಗೆ ಫೋನ್ ಮೂಲಕ ಮಾಹಿತಿ ತಿಳಿಸಿ ಸ್ಥಳಕ್ಕೆ ಬರುವಂತೆ ಮಾಡುತ್ತಿದ್ದರು. ಇದರಿಂದಾಗಿ ಕಿರಿದಾದ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆಯಾಗುವ ಜೊತೆಗೆ ಹಳ್ಳಕೊಳ್ಳದಲ್ಲಿ ವಾಹನಗಳನ್ನು ಬಿಡುತ್ತಿದ್ದರು. ಈ ಕಾರಣದಿಂದ ಪ್ರವಾಸಿಗರಿಗೆ ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ಕೆಲ ಪ್ರವಾಸಿಗರು ಹಿಂದೆ ಹುಲಿ ಯೋಜನೆನಿರ್ದೇಶಕರಾಗಿದ್ದ ಅಂಬಾಡಿ ಮಾಧವ್ ಅವರ ಗಮನಕ್ಕೆ ತಂದಿದ್ದರು. ಅಂದೇ ವಲಯವಾರುವಿಂಗಡನೆಗೆ ಚಿಂತನೆ ನಡೆಸಿದ್ದರು. ಆದರೆ, ಬಳಿಕ ಬಂದನಿರ್ದೇಶಕರು ಈ ಬಗ್ಗೆ ಗಮನ ಹರಿಸದ ಕಾರಣ, ಈ ಕಾರ್ಯ ಚಾಲ್ತಿಗೆ ಬರಲಿಲ್ಲ.
Related Articles
Advertisement
ಪ್ರವಾಸಿಗರು ಸಫಾರಿಗೆ ತೆರಳಿದ ವೇಳೆ ಅಭಯಾರಣ್ಯದಲ್ಲಿ ಎಲ್ಲೋ ಒಂದು ಕಡೆ ಹುಲಿ ಕಂಡರೆ ಎಲ್ಲಾ ವಾಹನಗಳು ಒಂದೇ ಕಡೆ ಜಮಾಯಿಸುತ್ತವೆ. ಇದರಿಂದ ಕಾಡುಪ್ರಾಣಿಗಳ ಸಾಮಾನ್ಯ ಜೀವನ ಶೈಲಿಗೆ ತೊಂದರೆ ಆಗುವುದನ್ನು ತಪ್ಪಿಸಲು ಎ ಮತ್ತು ಬಿ ಝೋನ್ ಗಳಾಗಿ ವಿಂಗಡಿಸಿ ಎ ಝೋನ್‌ನಲ್ಲಿ 13 ವಾಹನ ಮತ್ತು ಬಿ ಝೋನ್ ನಲ್ಲಿ 13 ವಾಹನಗಳು ಪ್ರತ್ಯೇಕವಾಗಿ ಸಂಚರಿಸುವಂತೆ ಮಾಡಲು ಉದ್ದೇಶಿಸಲಾಗಿದೆ.
ಬಂಡೀಪುರ ಸಫಾರಿಯಲ್ಲಿ ಎ ಮತ್ತು ಬಿ ಝೋನ್ ವಿಂಗಡಣೆಯಿಂದ ಪ್ರವಾಸಿಗರು ಕಿರಿಕಿರಿ ಇಲ್ಲದೆ ಸಫಾರಿ ಮಾಡಬಹುದಾಗಿದೆ. ಬಂಡೀಪುರ ಹುಲಿಸಂರಕ್ಷಿತ ಪ್ರದೇಶ 50 ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಶಾಶ್ವತವಾದ ಯೋಜನೆ ನೀಡಬೇಕು ಎಂಬ ಉದ್ದೇಶದಿಂದ ಝೋನ್‌ವ್ಯವಸ್ಥೆಗೆ ಚಿಂತನೆ ನಡೆಸಲಾಗಿದೆ.– ಡಾ.ರಮೇಶ್ ಕುಮಾರ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ.
– ಬಸವರಾಜು ಎಸ್.ಹಂಗಳ