Advertisement

ಬಂಡೀಪುರ: ಸಂಚಾರ ನಿಷೇಧ ಮುಂದುವರಿಕೆ

11:39 PM Aug 07, 2019 | Team Udayavani |

ನವದೆಹಲಿ: ಬಂಡೀಪುರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಮುಂದುವರಿಯಲಿದೆ ಎಂದು ಸುಪ್ರೀಂಕೋರ್ಟ್‌ ಬುಧವಾರ ಆದೇಶಿಸಿದೆ. ಹುಲಿ ಅಭಯಾರಣ್ಯದ ಮೂಲಕ ಸಾಗುವ ಹೆದ್ದಾರಿಯಲ್ಲಿನ ಸಮಸ್ಯೆ ನಿವಾರಿಸಲು ಶಾಶ್ವತ ಕ್ರಮವನ್ನು ಪ್ರಸ್ತಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್‌ ಸೂಚನೆ ನೀಡಿದೆ.

Advertisement

ಪರ್ಯಾಯ ಮಾರ್ಗವನ್ನು ಸುಧಾರಿಸಬೇಕಿದೆ. ಹೀಗಾಗಿ, ಈ ರಸ್ತೆಯನ್ನು ದೀರ್ಘಾವಧಿಯಲ್ಲಿ ಮುಚ್ಚುವುದಕ್ಕಾಗಿ ಪರಿಸರ ಮತ್ತು ಅರಣ್ಯ ಇಲಾಖೆಯ ಸಲಹೆಯ ಮೇರೆಗೆ ಮುಂದಿನ ನಾಲ್ಕು ವಾರಗಳಲ್ಲಿ ಅಫಿಡವಿಟ್‌ ಸಲ್ಲಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸೂಚಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ಆರ್‌.ಎಫ್.ನಾರಿಮನ್‌ ಮತ್ತು ಸೂರ್ಯಕಾಂತ್‌ರನ್ನೊಳಗೊಂಡ ಸುಪ್ರೀಂಕೋರ್ಟ್‌ ಪೀಠ ಹೇಳಿದೆ. ಕರ್ನಾಟಕದ ಪರ ಹಿರಿಯ ವಕೀಲ ಬಸವ ಪಿ ಪಾಟೀಲ್‌, ಕೇರಳದ ಪರ ವಕೀಲ ಜಯದೀಪ್‌ ಗುಪ್ತಾ ವಾದಿಸಿದರು.

ಕರ್ನಾಟಕ ಮತ್ತು ತಮಿಳುನಾಡು ರಸ್ತೆ ನಿಷೇಧದ ಪರ ವಾದಿಸಿದರೆ, ರಸ್ತೆ ನಿಷೇಧದಿಂದ ಅಗತ್ಯ ಸಾಮಗ್ರಿಗಳ ಸಾಗಣೆಗೆ ತೊಂದರೆಯಗುತ್ತದೆ ಎಂದು ಕೇರಳ ವಾದಿಸಿತು. ಈ ಮಧ್ಯೆ, ಇತರ ಪ್ರಕರಣಗಳಲ್ಲಿ ವಾದಿಸುವುದಕ್ಕಾಗಿ ಕೋರ್ಟ್‌ನಲ್ಲಿ ಹಾಜರಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಮಧ್ಯ ಪ್ರವೇಶಿಸಿ, ಅಭಯಾರಣ್ಯಗಳನ್ನು ನಾವು ರಕ್ಷಿಸುವ ಅಗತ್ಯವಿದೆ. ಇದಕ್ಕಾಗಿ ಒಂದು ಮೈಲು ಹೆಚ್ಚು ಪ್ರಯಾಣವನ್ನೂ ಮಾಡಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next