Advertisement
ಮಂಗಳವಾರವಷ್ಟೇ ಬಂಧನಕ್ಕೊಳಗಾದ ಸೈಯದ್ ಫಜಿ ಉರ್ ರೆಹಮಾನ್, ಅಲ್- ಹಿಂದ್ ಸಂಘಟನೆಯ ಮುಖ್ಯಸ್ಥ ಮೆಹಬೂಬ್ ಪಾಷಾ ಸೂಚನೆಯ ಮೇರೆಗೆ ಬಂಡೀಪುರ ಅಭಯಾರಣ್ಯವನ್ನು ಆಯ್ಕೆ ಮಾಡಿಕೊಂಡಿದ್ದ.
ಕರ್ನಾಟಕ – ಕೇರಳ ಮತ್ತು ತಮಿಳುನಾಡು ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬಂಡೀಪುರ ಅಭಯಾರಣ್ಯದಲ್ಲಿ ಶಂಕಿತರು ಹತ್ಯೆ ನಡೆಸುವ ತರಬೇತಿ ಪಡೆಯಲು ಸಂಚು ರೂಪಿಸಿದ್ದರು. ಒಂದೆರಡು ಬಾರಿ ಅರಣ್ಯಕ್ಕೆ ತೆರಳಿ ಸ್ಥಳವನ್ನು ನೋಡಿಕೊಂಡು ಬಂದಿದ್ದರು ಎನ್ನಲಾಗಿದೆ. ಆರಂಭದಲ್ಲಿ ಭದ್ರತೆಯ ಬಗ್ಗೆ ಅಂಜಿದ್ದ ಆರೋಪಿಗಳು ಅನಂತರ ಮೂರು ರಾಜ್ಯಗಳ ಗಡಿಭಾಗದಲ್ಲಿ ತರಬೇತಿ ಕೇಂದ್ರ ಸ್ಥಾಪಿಸಲು ಮುಂದಾಗಿದ್ದರು.
Related Articles
ಕಾಡುಗಳ್ಳ ವೀರಪ್ಪನ್ ಮಾದರಿ ಹತ್ತಾರು ವರ್ಷಗಳ ಕಾಲ ಕಾಡಿನಲ್ಲೇ ವಾಸವಾಗಿದ್ದು ನಾಡಿನಲ್ಲಿ ತಮ್ಮ ಸಹಚರರ ಮೂಲಕ ಹಿಂದೂ ಮುಖಂಡರ ಹತ್ಯೆ ಮತ್ತು ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದರು. ಮಂಡ್ಯ, ಕೋಲಾರ, ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ಸಭೆ ನಡೆಸಿದ್ದರು ಎಂಬುದು ಗೊತ್ತಾಗಿದೆ. ಈ ಮೂಲಕ 3 ರಾಜ್ಯಗಳಲ್ಲಿಯೂ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.
Advertisement
ಏನೆಲ್ಲ ತರಬೇತಿ?ಅಲ್-ಹಿಂದ್ ಸಂಘಟನೆಯನ್ನು ದಕ್ಷಿಣ ಭಾರತದ ಮೂರು ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ವಿಸ್ತರಣೆ ಮಾಡಿಕೊಳ್ಳು ತ್ತಿದ್ದುದಲ್ಲದೆ ಸಂಘಟನೆಯ ಸದಸ್ಯರನ್ನು ಜಿಹಾದಿಗಳನ್ನಾಗಿ ಪರಿವರ್ತಿಸಿದ್ದರು. ಅವರನ್ನು ಬಂಡೀಪುರಕ್ಕೆ ಕರೆದೊಯ್ದು ರಹಸ್ಯ ಸ್ಥಳದಲ್ಲಿ ಐಇಡಿ ತಯಾರಿ, ಬಂದೂಕು ಬಳಕೆ ಎಂಬೆಲ್ಲ ತರಬೇತಿ ನೀಡಲು ಮುಂದಾಗಿದ್ದರು. ಹತ್ಯೆಯಾದ ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂಘಟನೆಯ ಸದಸ್ಯರ ಜತೆಯೂ ಶಂಕಿತರು ಸಂಪರ್ಕ ಹೊಂದಿದ್ದರು ಎಂದು ಗುಪ್ತಚರ ಮೂಲಗಳು ತಿಳಿಸಿವೆ. ವಿದೇಶದಿಂದ ಸಂದೇಶ ರವಾನೆ
ಐಸಿಸ್ ಸಂಘಟನೆಯ ಹಿರಿಯ ಸದಸ್ಯನೊಬ್ಬ ವಿದೇಶದಲ್ಲಿದ್ದು ಅಲ್-ಹಿಂದ್ ಸಂಘಟನೆಯ ಸದಸ್ಯರಿಗೆ ಆನ್‌ಲೈನ್ ಮತ್ತು ಇಂಟರ್‌ನೆಟ್ ಕರೆ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಸೂಚಿಸುತ್ತಿದ್ದ. ಅದರಂತೆ ಖ್ವಾಜಾ ಮೊಯ್ದಿàನ್ ಮತ್ತು ಮೆಹಬೂಬ್ ಪಾಷಾ ಹಾಗೂ ಇತರರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ. – ಮೋಹನ್ ಭದ್ರಾವತಿ