Advertisement

ಹೊಸಮಾಲಂಗಿ ಗ್ರಾಮದಲ್ಲಿ ಬಂಡಿ ಹಬ್ಬದ ಸಂಭ್ರಮ

01:13 PM Jan 10, 2020 | Suhan S |

ಕೊಳ್ಳೇಗಾಲ: ಹಾಲರವಿ ಉತ್ಸವ ಮತ್ತು ಎತ್ತುಗಳ ಬಂಡಿ ಕಟ್ಟಿ ಹೋಡಿಸುವ ಬಂಡಿ ಹಬ್ಬ ತಾಲೂಕಿನ ಹೊಸಮಾಲಂಗಿ ಗ್ರಾಮದಲ್ಲಿ ಸಂಭ್ರಮದಿಂದ ನಡೆಯಿತು. ಗ್ರಾಮದ ರಾಜ ಬೀದಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಆರಂಭಗೊಂಡ ಬಂಡಿ ಹಬ್ಬವನ್ನು ವೀಕ್ಷಣೆ ಮಾಡಿ, ಸಂಭ್ರಮ ಆಚರಿಸಿದರು.

Advertisement

ಗ್ರಾಮಸ್ಥರು ಹಬ್ಬದ ಪ್ರಯುಕ್ತ ದೊಡ್ಡ ಕರೆಯಿಂದ ನೂರಾರು ಹೆಣ್ಣು ಮಕ್ಕಳು ಹಾಲರವಿ ಉತ್ಸವ ನಡೆದ ದಿನವೇ ತಾವರೆಕೆರೆ ಸುತ್ತಲು ಪಲ್ಲಕ್ಕಿ ಹೊತ್ತ ದರ್ಶನದಿಂದ ಅಲಂಕೃತಗೊಂಡ ತೆಪ್ಪದಲ್ಲಿ ಕುರಿಸಿ ತೆಪ್ಪೋತ್ಸವದಲ್ಲಿ ಪಾಲ್ಗೊಂಡರು. ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಸಂಬಂಧಿಕರು ಅಪಾರ ಸಂಖ್ಯೆಯಲ್ಲಿ ಬಂಡಿ ಹಬ್ಬದ ಉತ್ಸವವನ್ನು ವೀಕ್ಷಣೆ ಮಾಡಿದರು. ನಂತರ ಬಂಡಿಗೆ ಎತ್ತುಗಳನ್ನು ಕಟ್ಟಿದ ಬಂಡಿ ಓಟದವರು ಮುಂದೆ ಹೋಗುವ ಸಲುವಾಗಿ ನಾಮುಂದು ತಾಮುಂದು ಎಂದು ಬಿರುಸಾಗಿ ಹೋಡುವ ಮೂಲಕ ಬಂಡಿ ಮಾಳದಲ್ಲಿ ಉತ್ಸುಕರಾಗಿ ಜಾಮಾಯಿಸಿದ್ದ ಜನರು ವೀಕ್ಷಣೆ ಮಾಡಿ ಅಚ್ಚರಿಗೊಂಡರು.

ಈ ವೇಳೆ ಮಾಜಿ ಸಂಸದ ಆರ್‌ ಧ್ರುವನಾರಾಯಣ್‌, ಮಾಜಿ ಶಾಸಕರಾದ ಎಸ್‌.ಜಯಣ್ಣ, ಎ.ಆರ್‌.ಕೃಷ್ಣ ಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ತೋಟೇಶ್‌, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಚೇತನ್‌, ತಾಪಂ ಮಾಜಿ ಅಧ್ಯಕ್ಷ ಬಸವಣ್ಣ ಗ್ರಾಮಕ್ಕೆ ಬೇಟಿ ನೀಡಿ, ಮಹ ದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಂಡಿ ಹಬ್ಬ ಉತ್ಸವದಲ್ಲಿ ಗ್ರಾಮದ ಮುಖಂಡರಾದ ಉಮೇಶ್‌, ರಾಚಪ್ಪ, ಪ್ರಸನ್ನಮೂರ್ತಿ, ಪುಟ್ಟಸ್ವಾಮಿ, ಮಹ ದೇವ, ರಾಚಯ್ಯ, ಮಲ್ಲಪ್ಪ ನಾಯಕ, ಅರ್ಚಕ ಬಸವರಾಜು ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next