Advertisement
ಇದರಿಂದ ನೌಕರರಿಗೆ, ಕಾಲೇಜುಗಳಿಗೆ ಬೆಂಗಳೂರಿಗೆ ಹೋಗಬೇಕಿದ್ದ ವಿದ್ಯಾರ್ಥಿ ಗಳು ಹಾಗೂ ಸಾರ್ವಜನಿಕರು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡಿದರು. ಗುರುವಾರ ಬೆಳಗ್ಗೆ 5 ಗಂಟೆಯಿಂದಲೇ ಬಸ್ ಗಳಿಗಾಗಿ ಕಾದು ಕುಳಿತಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದ್ವಿಚಕ್ರ ವಾಹನಗಳಲ್ಲಿ ಬೆಂಗಳೂರಿಗೆ ಓಡಾಡುತ್ತಿದ್ದದ್ದು ಕಂಡು ಬಂತು. ಬುಧವಾರ ವರ್ತಕರು ಸ್ವಯಂ ಪ್ರೇರಿತವಾಗಿ ವ್ಯಾಪಾರ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಗುರುವಾರ ಎಂದಿನಂತೆ ಮಳಿಗೆಗಳನ್ನು ತೆರೆಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಬಂದು ಪೊಲೀಸರೆದುರೇ ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಿ, ಪ್ರತಿಭಟನೆಗೆ ಬೆಂಬಲ ಕೋರಿದರು.
Related Articles
Advertisement
ಸ್ಥಳೀಯ ಕಾಂಗ್ರೆಸ್ ಮುಖಂಡರಾದ ವಿಧಾನಪರಿಷತ್ ಸದಸ್ಯ ಎಸ್ ರವಿ ಸಾತನೂರು ಕಾಂಗ್ರೆಸ್ ಮುಖಂಡ ಶ್ರೀಕಂಠು ಸೇರಿದಂತೆ ಬಹುತೇಕ ಸ್ಥಳಿಯ ನಾಯಕರುಗಳು ಡೆಲ್ಲಿ ಬೆಂಗಳೂರು ಸೇರಿಕೊಂಡಿದ್ದು ಪ್ರತಿಭಟನೆಯಲ್ಲಿ ನಾಯಕರ ಕೊರತೆ ಎದ್ದುಕಾಣುತ್ತಿತ್ತು. ಮೊದಲದಿನ ಪ್ರತಿಭಟನೆಗೆ ಸ್ಪಂದಿಸಿದ ಸಾರ್ವಜನಿಕರು ಮತ್ತು ಕಾರ್ಯಕರ್ತರು ಎರಡನೇ ದಿನದ ಪ್ರತಿಭಟನೆಗೆ ಕೊಂಚ ಕಡಿಮೆ ಇದ್ದಂತೆ ಕಂಡಿತು.
ಪೊಲೀಸ್ ಬಿಗಿ ಭದ್ರತೆ: ತಾಲೂಕಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎಸ್ಪಿ ಅನುಪಮ್ ಅಗರವಾಲ್, ರಾಮನಗರ ಎಸ್ಪಿ ಅನುಪ್ ಎ ಶೆಟ್ಟಿ, ಐಜಿಪಿ ಶರತ್ ಚಂದ್ರ ಮತ್ತು ಹೆಚ್ಚುವರಿಯಾಗಿ ಎಸ್ಪಿ ಸುಜಿತ್ ಅವರನ್ನು ನಿಯೋಜಿಸಲಾಗಿತ್ತು. 600 ಮಂದಿ ಪೊಲೀಸರು ಮೂರು ಕೆಎಸ್‌ಆರ್‌ಪಿ ತುಕಡಿಗಳು 2 ಜಿಲ್ಲಾ ಶಸ್ತ್ರಾಸ್ತ್ರ ಮೀಸಲು ಪಡೆ ನಿಯೋಜಿಸಲಾಗಿತ್ತು.