Advertisement

ಮರಿ ತಿರುಪತಿ ಖ್ಯಾಗಿಯ ದೇಗುಲ: ಬಂಡೆ ರಂಗನಾಥನ ಬೆಟ್ಟದಲ್ಲಿ ಹರ್ಷೋಲ್ಲಾಸ

06:15 PM Aug 30, 2021 | Team Udayavani |

ಸಿಂಧನೂರು:ಕಲ್ಯಾಣ ಕರ್ನಾಟಕದ ಮರಿ ತಿರುಪತಿ ಖ್ಯಾತಿಯ 474 ಮೆಟ್ಟಿಲುಳ್ಳ ರೌಡಕುಂದಾ ಗ್ರಾಮದ ಬಂಡೆರಂಗನಾಥ ದೇಗುಲ ಈಗ ಭಕ್ತರ ನೆಚ್ಚಿನ ತಾಣವಾಗಿದ್ದು, ವೀಕೆಂಡ್‌ ಟ್ರಕ್ಕಿಂಗ್‌ನೊಟ್ಟಿಗೆ ಭಕ್ತಗಣದ ಗಮನ ಸೆಳೆಯಲಾರಂಭಿಸಿದೆ. ಶ್ರೀಕ್ಷೇತ್ರ ಸಿದ್ಧಪರ್ವತ ಇರುವ ಅಂಬಾಮಠ ಸಮೀಪದ ರೌಡಕುಂದಾ ಗ್ರಾಮ ಬಂಡೆರಂಗನಾಥ ದೇಗುಲದಿಂದಲೇ ಹಿರಿಮೆಗೆಪಾತ್ರವಾಗಿದೆ.16ನೇಶತಮಾನದಲ್ಲಿನಿರ್ಮಾಣವಾದ ಕೋಟೆ, ಕೊತ್ತಲು ಸೇರಿದಂತೆ ಐತಿಹಾಸಿಕ ಬೆಟ್ಟದ ಮೇಲಿಂದ ಕಣ್ಣು ಹಾಯಿಸಿದಾಗ, ತುಂಗಭದ್ರೆ ತಟದಲ್ಲಿನ ಸುತ್ತಲಿನ ಹಸಿರು ಮನಮೋಹಕವಾಗಿ ಕಣ್ಮನ ತಣಿಸುತ್ತದೆ. ಇಂತಹ
ತಾಣವನ್ನು ಹುಡುಕಿಕೊಂಡು ಸಾಗುತ್ತಿರುವ ಭಕ್ತರು ಬೆಳಗ್ಗೆದ್ದು ಬೆಟ್ಟ ಏರಲು ಆರಂಭಿಸಿದ್ದಾರೆ.

Advertisement

ಒತ್ತಡ ‌ ಮುಕ್ತರಾಗಲು ವಿಹಾರ: ದೈನಂದಿನ ಕೆಲಸದ ಒತ್ತಡಗಳಿಂದ ‌ ವಿಶ್ರಾಂತಿ ಪಡೆಯಲು ವಾರಕ್ಕೊಮ್ಮೆ ಟ್ರಕ್ಕಿಂಗ್‌ ಮಾಡಲಿಕ್ಕೂ ಇದೀಗ ‌ ಬಂಡೆ ರಂಗನಾಥ ಸ್ವಾಮಿಯ ಬೆಟ್ಟ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಬರೋಬ್ಬರಿ 474 ಮೆಟ್ಟಿಲಿರುವ ಬೆಟ್ಟವನ್ನು ಏರಿ ಬಂಡೆರಂಗನಾಥನ ¨ ‌ದರ್ಶನ ಪಡೆದ ‌ ಬಳಿಕ ಅಲ್ಲಿಯೇ ವಿಶ್ರಾಂತಿ ಪಡೆಯಲಾಗುತ್ತಿದೆ.

ಸೂರ್ಯೋದಯವನ್ನು ಶಿಖರ ಗ್ರಹದಲ್ಲಿ ಸವಿಯುವ ಜತೆಗೆ ಅಲ್ಲಿಯೇ ಪ್ರಾಣಾಯಾಮ, ಹಾಸ್ಯಾಸನ ‌, ಮೌನವಾಗಿ ಧ್ಯಾನ ‌, ಸಂಗೀತ, ಹಾಡಿನೊಟ್ಟಿಗೆ ಹಣ್ಣು, ಮೊಳಕೆ ಕಾಳುಗಳನ್ನು ಸವಿದು ವಾರಂತ್ಯದ ‌ ಭಾನುವಾರ ‌ ರಿಲ್ಯಾಕ್ಸ್ ಪಡೆಯುವವರ ಸಂಖ್ಯೆಯೂ ಹೆಚ್ಚಿದೆ. ಬೆಟ್ಟದ ಕೆಳಗೆ ಬರುತ್ತಿದ್ದ ‌ಸುತ್ತಲಿನ ಹಸಿರು ‌ಪರಿಸರ, ಆಲದ ಮರಗಳದಲ್ಲಿ ಜೋಕಾಲಿಯಾಡಿ ಭಾನುವಾರವನ್ನು ಸಂಭ್ರಮಿಸಲಾಗುತ್ತಿದೆ.

ಬೆಟ್ಟಕ್ಕಿದೆ ಐತಿಹಾಸಿಕ ಹಿನ್ನೆಲೆ
ಬಂಡೇರಂಗನಾಥ ದೇಗುಲದ ಮೇಲಿನಕೋಟೆಯೂ 16ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಸಣ್ಣಗುಡ್ಡ ಹಾಗೂ ದೊಡ್ಡ ಬೆಟ್ಟ ಜತೆಗೂಡಿವೆ. ತಾಲೂಕಿನಿಂದ 17 ಕಿ.ಮೀ. ಅಂತರದಲ್ಲಿರುವ ರೌಡಕುಂದಾ ಗ್ರಾಮವೂ ಕೂಡ ಬೆಟ್ಟದ ಮೇಲಿನ ರಂಗನಾಥ ದೇವಸ್ಥಾನದಿಂದಲೇ ಮಹತ್ವ ಪಡೆದಿದೆ. ಬೆಟ್ಟದ ಮೇಲಿನ ದೇವಸ್ಥಾನವನ್ನು “ಮರಿ ತಿರುಪತಿ’ ಎಂಬ ಅನ್ವರ್ಥಕ ನಾಮದಿಂದಲೇ ಕರೆಯಲಾಗುತ್ತದೆ.

ಸಿಂಧನೂರು ಹೆಲ್ತ್‌ ಕ್ಲಬ್‌ನ ಚಿತ್ತ
ವಾರಂತ್ಯದ ರಿಲ್ಯಾಕ್ಸ್‌ನೊಂದಿಗೆ ದಣಿವು ನಿವಾರಿಸಿಕೊಳ್ಳಲು ಉದ್ಯಮಿಗಳು, ವೈದ್ಯರು, ಉಪನ್ಯಾಸಕರು ಸೇರಿದಂತೆ ನಾನಾ ಕ್ಷೇತ್ರದ ಉದ್ಯೋಗಿಗಳು ಧಾವಿಸುತ್ತಿದ್ದಾರೆ. ಸಿಂಧನೂರು ಹೆಲ್ತ್‌ ಕ್ಲಬ್‌ನ ಸಂಚಾಲಕ ಎಂ.ಭಾಸ್ಕರ್‌ ಅವರು ಕೂಡ ಗೆಳೆಯರ ತಂಡ ಕಟ್ಟಿಕೊಂಡು ಈ ಬೆಟ್ಟದ ಮೇಲೆ ಬೆಳ್ಳಂಬೆಳಗ್ಗೆ ಯೋಗ ಹೇಳಿಕೊಡುವ ಮೂಲಕ ಹರ್ಷೋಲ್ಲಾಸ ಮೂಡಿಸುತ್ತಿದ್ದಾರೆ. ವಾಯುವನ್ನು ಆಸ್ವಾದಿಸಿ, ಯೋಗ ಹೇಳಿಕೊಡುವ ಮೂಲಕ ನಾನಾ ಕ್ಷೇತ್ರದ ವ್ಯಕ್ತಿಗಳನ್ನು ಒತ್ತಡ ಮುಕ್ತರನ್ನಾಗಿಸಲಾಗುತ್ತಿದೆ.

Advertisement

ಭಾನುವಾರ ಕೂಡ ಇಂತಹ ತಂಡದ ಜತೆಗೆ ನಿವೃತ್ತ ಶಿಕ್ಷಕ ವೆಂಕನಗೌಡ ವಟಗಲ್‌, ವೈದ್ಯರಾದ ಡಾ|ಬಸವಪ್ರಭು, ಡಾ| ಪತ್ರೆಯ್ಯಸ್ವಾಮಿ, ಉದ್ಯಮಿ ಲಕ್ಷ್ಮಯ್ಯಶೆಟ್ಟಿ, ಎಲ್‌ಬಿಕೆ ಕಾಲೇಜು ಅಧ್ಯಕ್ಷ ಪರಶುರಾಮ ಮಲ್ಲಾಪುರ, ಕೋವಿಡ್‌ ನೋಡಲ್‌ ಅಧಿಕಾರಿ ಡಾ| ಜೀವನೇಶ್ವರಯ್ಯ ಅವರು ಸೂರ್ಯ ನಮಸ್ಕಾರ ಸೇರಿದಂತೆ ಬೆಟ್ಟದ ಮೇಲೆ ವ್ಯಾಯಾಮ, ವಿಹಾರ ಮಾಡಿಕೊಂಡು ಬಂದಿದ್ದಾರೆ. ಇಂತಹ ತಂಡಗಳು ಒಟ್ಟಾಗಿ ಬಂಡೆ ರಂಗನಾಥ ಸ್ವಾಮಿಯ ಬೆಟ್ಟ ಏರುತ್ತಿರುವುದು, ಇಲ್ಲಿನ ಮಹತ್ವ ಸಾರಲಾರಂಭಿಸಿದೆ. ಮಕ್ಕಳು, ದಂಪತಿಯೊಟ್ಟಿಗೂ ಇಲ್ಲಿಗೆ ಭೇಟಿ ನೀಡಲಾಗುತ್ತಿದೆ. ಪ್ರಾಕೃತಿಕ ಸೊಬಗಿನಿಂದ ಗಮನ ಸೆಳೆಯುತ್ತಿರುವ ಈ ಬೆಟ್ಟದಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿ ಆಚರಿಸಲು ಭಕ್ತರು ಸನ್ನದ್ಧರಾಗುತ್ತಿದ್ದಾರೆ.

ಬಂಡೆರಂಗನಾಥ ಸ್ವಾಮಿ ಬೆಟ್ಟದ ಮೇಲೆ ಗೆಳೆಯರು, ಬಂಧುಗಳು, ಮಕ್ಕಳೊಟ್ಟಿಗೆ ವಾಯುವಿಹಾರ ನಡೆಸಿ,ಯೋಗಾಭ್ಯಾಸ ನಡೆಸಿದ್ದು, ಸಂತಸ ತಂದಿದೆ. ಪ್ರಾಕೃತಿಕ ಸೊಬಗು ಆಸ್ವಾದಿಸಲು ಈ ಪ್ರದೇಶಹೇಳಿ ಮಾಡಿಸಿದಂತಿದೆ.
ಪರಶುರಾಮ ಮಲ್ಲಾಪುರ, ಎಲ್‌ಬಿಕೆ
ಕಾಲೇಜು ಅಧ್ಯಕ್ಷ, ಸಿಂಧನೂರ

ಒತ್ತಡ ನಿವಾರಣೆ,ಬಾಲ್ಯದ ಮುಗ್ಧತೆ ಮರುಕಳಿಸುವಿಕೆ, ಪ್ರಾಕೃತಿಕ ಆನಂದ ಸವಿಯುವ ಒಂದುಪರಿಸರಜೋಡಿಸುವುದು ನಮ್ಮಉದ್ದೇಶ.
ಎಂ.ಭಾಸ್ಕರ್‌
ಸಿಂಧನೂರು ಹೆಲ್ತ್‌ ಕ್ಲಬ್‌ ಸಂಚಾಲಕ

*ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next