Advertisement
ಬಂದರು ಪ್ರದೇಶ ನಗರದ ಆರ್ಥಿಕ ವಹಿವಾಟಿನ ಪ್ರಮುಖ ಕೇಂದ್ರವೂ ಆಗಿದೆ. ಆದ್ದರಿಂದ ವಿವಿಧ ಗೋದಾಮುಗಳು, ಹೋಲ್‌ಸೇಲ್ ಅಂಗಡಿಗಳಿಗೆ ಸಾಮಾನು – ಸರಂಜಾಮುಗಳನ್ನು ತರುವ ಉದ್ದನೆಯ ಲಾರಿಗಳು, ಅಂಗಡಿಗಳಿಂದ ಸಮಾನುಗಳನ್ನು ಬೇರೆಕಡೆಗೆ ಸಾಗಿಸುವ ಟೆಂಪೋಗಳು, ಗೂಡ್ಸ್ ರಿಕ್ಷಾ ಸಹಿತ ವಿವಿಧ ಗೂಡ್ಸ್ ವಾಹನಗಳನ್ನು ರಸ್ತೆಯಲ್ಲೇ ಪಾರ್ಕ್ ಲೋಡಿಂಗ್- ಅನ್‌ಲೋಡಿಂಗ್ ಮಾಡುತ್ತಿ ರುವುದರಿಂದ ಇತರ ವಾಹನಗಳ ಸಂಚಾರಕ್ಕೆ ಅವಕಾಶವೇ ಇಲ್ಲದಂತಾಗಿದೆ.
ಬಂದರ್ ಜೆ.ಎಂ.ರೋಡ್, ನೆಲ್ಲಿಕಾಯಿ ರಸ್ತೆ, ಅಝೀಜುದ್ದೀನ್ ರೋಡ್ ಸಹಿತ ವಿವಿಧ ರಸ್ತೆಗಳಲ್ಲಿ ಇದೇ ಸಮಸ್ಯೆಯಾಗಿದೆ. ಮುಂಜಾನೆಯಿಂದ ಸಂಜೆ ವರೆಗೆಗೂ ಲಾರಿಗಳು ರಸ್ತೆಯಲ್ಲೇ ನಿಲ್ಲುತ್ತವೆ. ಇಲ್ಲಿನ ರಸ್ತೆಗಳು ದ್ವಿಪಥ ರಸ್ತೆಗಳಾಗಿದ್ದು, ಅಗಲ ಕಿರಿದಾಗಿದೆ. ಇಂತಹ ರಸ್ತೆಯ ಎರಡು ಲಾರಿಗಳು ಒಂದೇ ಸ್ಥಳದಲ್ಲಿ ಎದುರು ಬದುರಾಗಿ ನಿಂತು ಇತರ ವಾಹನಗಳಿಗೆ ಸಂಚಾರಕ್ಕೆ ಅಡ್ಡಿ ಮಾಡುವ ಉದಾಹರಣೆಗಳೂ ಇವೆ. ಇದರಿಂದಾಗಿ ತುರ್ತು ಕಾರ್ಯಗಳಿಗೆ ಸಾಗುವವರಿಗೂ ಸಮಸ್ಯೆಯಾಗುತ್ತದೆ. ಕೆಲವು ಅಂಗಡಿಯವರು ತಮಗೆ ಸಂಬಂಧಿಸಿದ ಸಾಮಾನುಗಳನ್ನು ರಸ್ತೆಯ ಬದಿಯಲ್ಲೇ ಇರಿಸುತ್ತಿದ್ದು, ಇದರಿಂದ ಪಾದಚಾರಿಗಳಿಗೆ ಸಮಸ್ಯೆ ಉಂಟು ಮಾಡುವುದರ ಜತೆಗೆ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.
Related Articles
Advertisement