Advertisement

ಟೆಸ್ಟ್‌ ತಂಡದಿಂದ ಬಾನ್‌ಕ್ರಾಫ್ಟ್ ಹೊರಕ್ಕೆ

12:23 AM Dec 05, 2019 | Team Udayavani |

ಮೆಲ್ಬರ್ನ್: ನ್ಯೂಜಿಲ್ಯಾಂಡ್‌ ಎದುರಿನ ತವರಿನ ಟೆಸ್ಟ್‌ ಸರಣಿಗೆ ತಂಡವನ್ನು ಪ್ರಕಟಿಸಿರುವ ಆಸ್ಟ್ರೇಲಿಯ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ ಕ್ಯಾಮರಾನ್‌ ಬಾನ್‌ಕ್ರಾಫ್ಟ್ ಅವರನ್ನು ಕೈಬಿಟ್ಟಿದೆ. ಉಳಿದಂತೆ ಪಾಕಿಸ್ಥಾನ ವಿರುದ್ಧ ಆಡಿದ ಆಟಗಾರರನ್ನೇ ಉಳಿಸಿಕೊಂಡಿದೆ.

Advertisement

“ಈಗಿನ ಬ್ಯಾಟಿಂಗ್‌ ಸರದಿಯನ್ನು ಉಳಿಸಿಕೊಂಡು ಇದನ್ನು ಗಟ್ಟಿಗೊಳಿಸುವುದು ನಮ್ಮ ಗುರಿ. ಹೀಗಾಗಿ ನ್ಯೂಜಿಲ್ಯಾಂಡ್‌ ಎದುರಿನ ಟೆಸ್ಟ್‌ ಸರಣಿಗೆ ಬಾನ್‌ಕ್ರಾಫ್ಟ್ ಅಗತ್ಯ ಕಂಡುಬರಲಿಲ್ಲ’ ಎಂಬುದಾಗಿ ಆಸ್ಟ್ರೇಲಿಯ ಆಯ್ಕೆ ಸಮಿತಿ ಅಧ್ಯಕ್ಷ ಟ್ರೆವರ್‌ ಹಾನ್ಸ್‌ ಹೇಳಿದರು.

ಸರಣಿಯ ಮೊದಲ ಟೆಸ್ಟ್‌ ಪಂದ್ಯ ಡಿ. 12ರಿಂದ ಪರ್ತ್‌ನಲ್ಲಿ ಆರಂಭವಾಗಲಿದೆ. ಬಳಿಕ ಬಾಕ್ಸಿಂಗ್‌ ಡೇ ಟೆಸ್ಟ್‌ (ಮೆಲ್ಬರ್ನ್) ಮತ್ತು ನ್ಯೂ ಇಯರ್‌ ಟೆಸ್ಟ್‌ (ಸಿಡ್ನಿ) ನಡೆಯಲಿದೆ.

ಆಸ್ಟ್ರೇಲಿಯ ತಂಡ: ಟಿಮ್‌ ಪೇನ್‌ (ನಾಯಕ), ಡೇವಿಡ್‌ ವಾರ್ನರ್‌, ಜೋ ಬರ್ನ್ಸ್, ಮಾರ್ನಸ್‌ ಲಬುಶೇನ್‌, ಸ್ಟೀವನ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ಮ್ಯಾಥ್ಯೂ ವೇಡ್‌, ಪ್ಯಾಟ್‌ ಕಮಿನ್ಸ್‌, ಜೋಶ್‌ ಹ್ಯಾಝಲ್‌ವುಡ್‌, ನಥನ್‌ ಲಿಯೋನ್‌, ಮೈಕಲ್‌ ನೆಸರ್‌, ಜೇಮ್ಸ್‌ ಪ್ಯಾಟಿನ್ಸನ್‌, ಮಿಚೆಲ್‌ ಸ್ಟಾರ್ಕ್‌.

Advertisement

Udayavani is now on Telegram. Click here to join our channel and stay updated with the latest news.

Next