Advertisement

Kadambotsava: ಬನವಾಸಿ ಕದಂಬೋತ್ಸವಕ್ಕೆ ದಿನಾಂಕ ನಿಗದಿ… ಸಚಿವ ಮಂಕಾಳು ವೈದ್ಯ ಘೋಷಣೆ

03:55 PM Jan 09, 2024 | Team Udayavani |

ಕಾರವಾರ : ಕನ್ನಡಿಗರ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಕದಂಬೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ಫೆ.24 ಮತ್ತು 25 ರಂದು ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ನೇತೃತ್ವದಲ್ಲಿ ಶಿರಸಿ ಆಡಳಿತ ಸೌಧದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಕದಂಬೋತ್ಸವ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಸಲಾಗುತ್ತದೆ. ಕದಂಬೋತ್ಸವವು ರಾಜ್ಯ ಸರ್ಕಾರದ ಕನ್ನಡ ‌ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಯಿಂದ ಆಯೋಜಿಸಲ್ಪಡುತ್ತದೆ. ಕಲೆ ಮತ್ತು ಸಾಂಸ್ಕೃತಿಕ ಇತಿಹಾಸ ಬಿಂಬಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ದಕ್ಷಿಣ ಭಾರತದ ಕಲಾವಿದರು ಮತ್ತು ಕರ್ನಾಟಕದ ಜಾನಪದ ಕಲಾವಿದರನ್ನು ಬೆಸೆಯುವ ಉತ್ಸವ ಇದಾಗಿದೆ. ಜಾನಪದ ನೃತ್ಯಗಾರರು, ನಾಟಕ ತಂಡಗಳು, ಚಿತ್ರ ಸಂಗೀತಗಾರರು, ಕಲಾ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ.ಈ ಸಂದರ್ಭದಲ್ಲಿ ಪಂಪ ಪ್ರಶಸ್ತಿ ಸಹ ಪ್ರಧಾನ ಮಾಡಲಾಗುತ್ತದೆ ಎಂದು ಸಚಿವ ವೈದ್ಯ ಸಭೆಯಲ್ಲಿ ಹೇಳಿದರು.

ಇಂದು ಶಿರಸಿಯ ಆಡಳಿತ ಸೌಧದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಪೂರ್ವಬಾವಿ ಸಭೆಯಲ್ಲಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ , ಶಿರಸಿ, ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಗಂಗೂಭಾಯಿ ಮಾನಕರ್ ಹಾಗು ಸಹಾಯಕ ಕಮಿಷನರ್ , ಸಂಸ್ಕೃತಿ ಇಲಾಖೆ ,ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ: Arjuna Award: ಭಾರತದ ವೇಗಿ ಮೊಹಮ್ಮದ್ ಶಮಿ ಸೇರಿದಂತೆ 26 ಆಟಗಾರರಿಗೆ ಅರ್ಜುನ ಪ್ರಶಸ್ತಿ

Advertisement

Udayavani is now on Telegram. Click here to join our channel and stay updated with the latest news.

Next