Advertisement

Kadambotsava: ಮಾರ್ಚ್ 5ರಂದು ಬನವಾಸಿ ಕದಂಬೋತ್ಸವ… ಆಹ್ವಾನ ಪತ್ರಿಕೆ ಬಿಡುಗಡೆ

12:20 PM Feb 29, 2024 | Team Udayavani |

ಶಿರಸಿ: ರಾಜ್ಯ ಮಟ್ಟದ ಕದಂಬೋತ್ಸವ ಮಾರ್ಚ್ 5 ಹಾಗೂ 6 ರಂದು ತಾಲೂಕಿನ ಬನವಾಸಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ 5ರ ಸಂಜೆ 6ಕ್ಕೆ ಉದ್ಘಾಟಿಸಲಿದ್ದಾರೆ.

Advertisement

ಎರಡು‌ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸ್ಥಳೀಯ ಪ್ರತಿಭೆಗಳ ಜೊತೆಗೆ ಮೊದಲ ದಿನ ರಘು ದೀಕ್ಷಿತ್ ತಂಡ ಹಾಗೂ ಎರಡನೇ ದಿನ ಹರಿಕೃಷ್ಣ ತಂಡ ಬೆಂಗಳೂರು ಕಾರ್ಯಕ್ರಮ ನೀಡಲಿದ್ದಾರೆ.

ಶಿರಸಿಯಲ್ಲಿ ಉತ್ಸವ ಸಮಿತಿ ಕಾರ್ಯದರ್ಶಿ ಎಸಿ ಅಪರ್ಣಾ ರಮೇಶ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ, ಈಗಾಗಲೇ ಉತ್ಸವದ ಸಿದ್ದತೆ ನಡೆದಿದೆ. ಸರಕಾರ ಕೂಡ 2 ಕೋ.ರೂ.ಬಿಡುಗಡೆಗೆ ಮಾಡಿದ ವರದಿ ಬಂದಿದೆ ಎಂದರು.

ಈ ವೇಳೆ ತಹಸೀಲ್ದಾರ ಶ್ರೀಧರ ಮುಂದಲಮನಿ, ಉಪ ತಹಶೀಲ್ದಾರರಾದ ಶ್ರೀಕೃಷ್ಣ‌ ಕಾಮಕರ, ರಮೇಶ ಹೆಗಡೆ, ಬಿಇಓ ನಾಗರಾಜ ನಾಯ್ಕ, ಇಓ ಸತೀಶ ಹೆಗಡೆ ಇತರರು ಇದ್ದರು.

ಸಾಂಪ್ರದಾಯಿಕವಾಗಿ ಪಂಪ ಪ್ರಶಸ್ತಿ ಕದಂಬೋತ್ಸವದಲ್ಲಿ ಪ್ರಧಾನ ಆಗಬೇಕಿತ್ತು. ಆದರೆ, ಈ ಬಾರಿ ಬೆಂಗಳೂರಿ‌ನಲ್ಲಿ ನಾ.ಡಿಸೋಜ ಅವರಿಗೆ ಪ್ರಧಾ‌ನ ಆಗಿದೆ‌ ಎಂಬುದೂ ಉಲ್ಲೇಖನೀಯ.

Advertisement

ಹೆಬ್ಬಾರ್ ಗೈರು!
ಪ್ರತಿ ‌ಕದಂಬೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯಿಂದ ಎಲ್ಲ ಹಂತದಲ್ಲೂ ಸಕ್ರೀಯವಾಗಿ ಇರುತ್ತಿದ್ದ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಈ ಬಾರಿ ಆಹ್ವಾನ ಪತ್ರಿಕೆ ಬಿಡುಗಡೆಯಲ್ಲಿ‌ ಗೈರಾದರು. ರಾಜ್ಯ ರಾಜಕೀಯ ವಿದ್ಯಮಾನಗಳ ಬೆನ್ನಲ್ಲೇ ಕದಂಬೋತ್ಸವ ಕೂಡ ನಡೆಯುತ್ತಿದ್ದು, ಹೆಬ್ಬಾರ್ ಅವರ ಗೈರು ಅನೇಕ ಅರ್ಥಗಳಿಗೆ‌ ಕಾರಣವಾಗಿದೆ.

ಇದನ್ನೂ ಓದಿ: Himachal: ಅಡ್ಡಮತದಾನ ಮಾಡಿದ 6 ಮಂದಿ ಕೈ ಶಾಸಕರು ಸದಸ್ಯತ್ವದಿಂದ ಅನರ್ಹ: ಸ್ಪೀಕರ್

Advertisement

Udayavani is now on Telegram. Click here to join our channel and stay updated with the latest news.

Next