Advertisement

ಬನಶಂಕರಿ ಹಂಪಿ ವಿವಿ ಸ್ಥಳಾಂತರ ಕೈ ಬಿಡಿ

04:37 PM Jun 25, 2021 | Team Udayavani |

ಬಾದಾಮಿ: ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಬನಶಂಕರಿ ಕನ್ನಡ, ಹಂಪಿ ವಿವಿ ಕೇಂದ್ರ ಸ್ಥಳಾಂತರಿಸಿ, 8 ಎಕರೆ ಜಾಗೆಯಲ್ಲಿ ತ್ರಿಸ್ಟಾರ್‌ ಹೋಟೆಲ್‌ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದು, ಇದರಿಂದ ಈ ಭಾಗದ ಶಿಲ್ಪಕಲಾ, ಚಿತ್ರಕಲಾವಿದರಿಗೆ ತೊಂದರೆಯಾಗಲಿದೆ. ಈ ಪ್ರಸ್ತಾವನೆ ಕೈಬಿಡಬೇಕೆಂದು ಬಾದಾಮಿ ನಗರದ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್‌.ಹಿರೇಹಾಳ ಹೇಳಿದರು.

Advertisement

ಪಟ್ಟಣದ ಕಾನಿಪ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆಯು ತರಾತುರಿಯಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದಕ್ಕೆ ಬಾದಾಮಿ, ಸಾರ್ವಜನಿಕರು, ವಿದ್ಯಾರ್ಥಿಗಳು, ಇತಿಹಾಸಕಾರರು, ಕಲಾವಿದರು, ಚಿತ್ರಕಾರರು, ಶಿಲ್ಪಕಾರರು, ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಬೇಸರ ಹಾಗೂ ವಿರೋಧ ವ್ಯಕ್ತಪಡಿಸಿವೆ. ಈ ಹಿಂದೆ 2019ರಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಕ್ಷೇತ್ರದ ಶಾಸಕ ಸಿದ್ದರಾಮಯ್ಯ, ಸಂಸದ ಪಿ.ಸಿ ಗದ್ದಿಗೌಡರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಬನಶಂಕರಿ ಕನ್ನಡ ಹಂಪಿ ವಿವಿ ಕೇಂದ್ರ ಸ್ಥಳಾಂತರಿಸಬಾರದೆಂದು ಮನವಿ ಸಲ್ಲಿಸಲಾಗಿತ್ತು, ಜನಪ್ರತಿನಿಧಿ ಗಳ ಇಚ್ಛಾಶಕ್ತಿ ಕೊರತೆಯಿಂದ ಈಗಾಗಲೇ ಲಲಿತಕಲಾ ವಿ.ವಿ ಮೈಸೂರಿಗೆ ಹೋಗಿದೆ, ಈಗ ಹಂಪಿ ವಿವಿ ಸ್ಥಳಾಂತರ ಮಾಡಲು ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.

ನಗರ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ್‌ ನರೇಗಲ್‌ ಮಾತನಾಡಿ, ಬನಶಂಕರಿ ಕನ್ನಡ ಹಂಪಿ ವಿವಿ ಕೇಂದ್ರ ಸ್ಥಳಾಂತರಿಸಬಾರದು ಹಾಗೂ ತ್ರಿ ಸ್ಟಾರ್‌ ಹೋಟೆಲ್‌ ನ್ನು ಬಾದಾಮಿ ನಗರದಲ್ಲಿ ನಿರ್ಮಿಸಬೇಕು. ಅಧಿ ಕಾರಿಗಳು ಮತ್ತು ಜನಪ್ರತಿನಿ ಧಿಗಳು ಬೇಡಿಕೆ ಈಡೇರಿಸದಿದ್ದರೆ, ಬಾದಾಮಿ ಸಾರ್ವಜನಿಕರು, ವಿದ್ಯಾರ್ಥಿಗಳು, ಇತಿಹಾಸಕಾರರು, ಶಿಲ್ಪ ಕಲಾಕಾರರು ಚಿತ್ರಕಾರರು, ಕಲಾವಿದರು, ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ಪ್ರತಿಭಟನಾ ರ್ಯಾಲಿಯನ್ನು ಶೀಘ್ರ ಹಮ್ಮಿಕೊಳ್ಳಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಮಹಾಂತೇಶ ವಡ್ಡರ, ಸೋಮಣ್ಣ ಬಿಂಗೇರಿ, ಆರ್‌.ಎಸ್‌. ನಾಲತವಾಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next